Headlines

ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ – Kannada News | Kaveri Baruah apologies after making baseless allegations on Allu Arjun

ಟಾಲಿವುಡ್ ನಟ ಅಲ್ಲು ಅರ್ಜುನ್ ಬಗ್ಗೆ ಕೆಲವು ಆರೋಪಗಳನ್ನು ಮಾಡಲಾಗಿತ್ತು. ಇತ್ತೀಚೆಗೆ ಪಾಡ್​ಕಾಸ್ಟ್​​ನಲ್ಲಿ ಮಾತನಾಡಿದ್ದ ಕಾವೇರಿ (Kaveri Baruah) ಎಂಬ ಮಹಿಳೆಯೊಬ್ಬರು ಇಲ್ಲಸಲ್ಲದ ಆರೋಪ ಮಾಡಿದ್ದರು. ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡುವಾಗ 42 ನಿಮಯಗಳನ್ನು ಹಾಕಲಾಗುತ್ತದೆ ಎಂದು ಅವರು ಹೇಳಿದ್ದರು. ಆ ನಿಯಮಗಳು ತುಂಬ ವಿಚಿತ್ರವಾಗಿದ್ದವು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಆದರೆ ಈಗ ಆರೋಪ ಮಾಡಿದ ಮಹಿಳೆಯೇ ಉಲ್ಟಾ ಹೊಡೆದಿದ್ದಾರೆ. ಅಲ್ಲು ಅರ್ಜುನ್ (Allu Arjun) ಬಳಿ ಆಕೆ ಕ್ಷಮೆ ಕೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪಾಡ್​ಕಾಸ್ಟ್​ಗಳು ಸಖತ್ ಜನಪ್ರಿಯವಾಗಿವೆ. ಆದರೆ ವೀವ್ಸ್ ಮತ್ತು ಲೈಕ್ಸ್ ಪಡೆಯುವ ಸಲುವಾಗಿ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕಾವೇರಿ ಎಂಬ ಮಹಿಳೆ ಕೂಡ ಹಾಗಯೇ ಮಾಡಿದ್ದಾರೆ. ಯೂಟ್ಯೂಬ್​​ನಲ್ಲಿ ಸಂದರ್ಶನ ನೀಡಿದ ಅವರು ಅಸಂಬದ್ಧವಾಗಿ ಮಾತನಾಡಿದ್ದರು. ಅದರಿಂದ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಬೇಸರ ಆಗಿತ್ತು.

ಕಾವೇರಿ ಹೇಳಿದ್ದೇನು? ‘ದಕ್ಷಿಣದ ಸ್ಟಾರ್ ಹೀರೋಗಳ ಸುತ್ತ ಜನರು ತುಂಬಿಕೊಂಡಿರುತ್ತಾರೆ. ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ನಮಗೆ 42 ನಿಮಯಗಳ ಪಟ್ಟಿ ನೀಡಲಾಗಿತ್ತು. ಹಲವು ಮ್ಯಾನೇಜರ್ ಇದ್ದರು. ಅವರು ತುಂಬಾ ಕಟ್ಟುನಿಟ್ಟು. ಸರ್ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ, ಕೈ ಕುಲಕಬೇಡಿ, ಅವರ ಎದುರು ಮೊಬೈಲ್ ಫೋನ್ ಬಳಸಬೇಡಿ ಎಂಬಿತ್ಯಾದಿ ರೂಲ್ಸ್ ಪಟ್ಟಿ ನೀಡಿದ್ದರು’ ಎಂದಿದ್ದಾರೆ ಕಾವೇರಿ.

ಯಾವುದೇ ಆಧಾರ ಇಲ್ಲದೇ ಈ ರೀತಿ ಹೇಳಿಕೆ ನೀಡಿದ್ದರಿಂದ ಅಲ್ಲು ಅರ್ಜುನ್ ತಂಡದವರು ಕಾವೇರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಅದರಿಂದಾಗಿ ಕಾವೇರಿ ಎಚ್ಚೆತ್ತುಕೊಂಡಿದ್ದಾರೆ. ತಾವು ನೀಡಿದ್ದ ಹೇಳಿಕೆಗೆ ಯಾವುದೇ ಆಧಾರ ಇಲ್ಲ, ತಮ್ಮಿಂದ ತಪ್ಪಾಗಿದೆ ಎಂದು ಅವರು ಈಗ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಭೇಟಿ ಮಾಡಲು 42 ಷರತ್ತು: ನಿಜ ಏನೆಂದು ಹೇಳಿದ ಸಹ ನಟ

‘ನನ್ನ ಹೇಳಿಕೆ ತಪ್ಪಾಗಿದೆ. ಅದಕ್ಕೆ ಯಾವುದೇ ಆಧಾರ ಇಲ್ಲ. 42 ನಿಯಮಗಳು ಇರುವ ಯಾವುದೇ ಪಟ್ಟಿಯನ್ನು ನನಗೆ ಅಲ್ಲು ಅರ್ಜುನ್ ಕಡೆಯವರು ನೀಡಿರಲಿಲ್ಲ. ಮಾತಿನ ಭರದಲ್ಲಿ ನಾನು ಅದನ್ನೆಲ್ಲ ಹೇಳಿದೆ. ಆ ರೀತಿ ಮಾತನಾಡಿದ್ದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ. ಅಲ್ಲು ಅರ್ಜುನ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ’ ಎಂದು ಕಾವೇರಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *