ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಈಗಾಗಲೇ ಸಾವಿರ ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್ಪಿಯನ್ನು ಪಡೆದುಕೊಳ್ಳುತ್ತಾ ಬರುತ್ತಿದೆ. ಈಗ ಧಾರಾವಾಹಿ ಕೊನೆ ಆಗುತ್ತಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಧಾರಾವಾಹಿಯಲ್ಲಿ ತಾಂಡವ್ ಪಾತ್ರ ಮಾಡ್ತಿರೋ ಸುದರ್ಶನ್ ಮಾತನಾಡಿದ್ದಾರೆ. ಅವರು ಧಾರಾವಾಹಿ ಮುಗಿಯುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
‘ಭಾಗ್ಯಲಕ್ಷ್ಮೀ’ ಧಾರಾವಾಹಿ 2022ರಲ್ಲಿ ಪ್ರಸಾರ ಆರಂಭಿಸಿತು. ಮೊದಲು ಅಕ್ಕ-ತಂಗಿ ಕಥೆಯನ್ನು ಹೊಂದಿದ್ದ ಈ ಧಾರಾವಾಹಿ, ಆ ಬಳಿಕ ಅಕ್ಕನ ಕಥೆಯೇ ಬೇರೆ, ತಂಗಿ ಕಥೆಯೇ ಬೇರೆ ಮಾಡಲಾಯಿತು. ‘ಲಕ್ಷ್ಮೀ ಬಾರಮ್ಮ’ ಹೆಸರಲ್ಲಿ ತಂಗಿ ಧಾರಾವಾಹಿ ಪ್ರಸಾರ ಕಂಡಿತು. ‘ಭಾಗ್ಯಲಕ್ಷ್ಮೀ’ ಹಾಗೆಯೇ ಮುಂದುವರಿಯಿತು. ಈಗ ಧಾರಾವಾಹಿ ಕೊನೆ ಆಗುತ್ತದೆ ಎಂದು ಹೇಳಲಾಗುತ್ತಾ ಇದೆ.
ತಾಂಡವ್ ಒಳ್ಳೆಯವನಾಗೋ ಪ್ರಯತ್ನದಲ್ಲಿ ಇದ್ದಾನೆ. ಭಾಗ್ಯಾಳ ಬಳಿ ಕ್ಷಮೆ ಕೇಳಿ ಮನೆಗೆ ಬರಬೇಕು ಎಂಬ ಪ್ರಯತ್ನಿಸುತ್ತಿದ್ದಾನೆ. ಇದು ನಾಟಕವೋ ಅಥವಾ ನಿಜಕ್ಕೂ ಆತ ಬದಲಾಗಿದ್ದಾನೋ ಎಂಬ ಪ್ರಶ್ನೆ ವೀಕ್ಷಕರದ್ದು. ಇನ್ನು ಅತ್ತ, ಆದಿಯು ಭಾಗ್ಯಾಳ ವಿವಾಹ ಆಗುವ ಪ್ರಯತ್ನದಲ್ಲಿ ಇದ್ದಾನೆ. ಇದು ಕೂಡ ಕುತೂಹಲ ಸೃಷ್ಟಿಸಿದೆ. ಹಾಗಾದರೆ ಸುದರ್ಶನ್ ಹೇಳೋದೇನು?
‘ಒಂದು ಧಾರಾವಾಹಿ ಸಾವಿರ ಎಪಿಸೋಡ್ ಪೂರ್ಣಗೊಳಿಸುತ್ತಿದ್ದಂತೆ ಧಾರಾವಾಹಿ ಮುಗಿಯುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ನಮ್ಮ ಧಾರಾವಾಹಿ ಕಡಿಮೆ ಟಿಆರ್ಪಿ ಪಡೆದರೆ ಆ ರೀತಿಯ ಊಹೆ ಅಥವಾ ಕಲ್ಪನೆ ಮಾಡಿಕೊಳ್ಳಬಹುದು. ಆದರೆ, ನಮ್ಮ ಧಾರಾವಾಹಿ ಉತ್ತಮ ಟಿಆರ್ಪಿಯನ್ನೇ ಪಡೆದುಕೊಳ್ಳುತ್ತಿದೆ. ಹೀಗಾಗಿ, ಧಾರಾವಾಹಿ ಮುಗಿಯುತ್ತದೆ ಎಂಬುದರಲ್ಲಿ ಅರ್ಥವಿಲ್ಲ. ಆದರೂ ಧಾರಾವಾಹಿ ವಿಷಯದಲ್ಲಿ ವಾಹಿನಿಯವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಅವರು.
ಇದನ್ನೂ ಓದಿ: ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ
ಇನ್ನು, ‘ರಾಣಿ’ ಹೆಸರಿನ ಸೀರಿಯಲ್ ಬಿಗ್ ಬಾಸ್ ಸಂದರ್ಭದಲ್ಲೇ ಘೋಷಣೆ ಆಗಿದೆ. ಈ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್ ಆಗಿದೆ. ಧಾರಾವಾಹಿ ಪ್ರಸಾರ ಆಗಬೇಕು ಎಂದರೆ ಒಂದು ಧಾರಾವಾಹಿ ಪೂರ್ಣಗೊಳ್ಳಲೇಬೇಕು. ಅದು ‘ಭಾಗ್ಯಲಕ್ಷ್ಮೀ’ನಾ ಎಂಬ ಪ್ರಶ್ನೆ ಸದ್ಯದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.