Headlines

Bengaluru: KSRTC ಬಸ್​​ನ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದ ಕಳ್ಳ! – Kannada News | Bengaluru KSRTC Bus Robbery: Ticket Vending Machine Stolen

ಬೆಂಗಳೂರು, ಫೆಬ್ರವರಿ 19: ಮೆಜೆಸ್ಟಿಕ್​​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಬಸ್ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದಿದ ಘಟನೆ ನಡೆದಿದೆ. ಬೆಂಗಳೂರು-ಶಿರಸಿ ಮಾರ್ಗದ ನಾನ್-ಎಸಿ ಸ್ಲೀಪರ್ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ಬ್ಯಾಗ್‌ನಲ್ಲಿದ್ದ ಟಿಕೆಟ್ ಮೆಷಿನ್ ಕಳ್ಳತನವಾಗಿದೆ. ಕೃತ್ಯದಿಂದಾಗಿ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಸ್ ಎರಡು ಗಂಟೆಗಳ ಕಾಲ ನಿಂತಲ್ಲೇ ನಿಂತಿದ್ದು, ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.  ಅಂತಿಮವಾಗಿ ಸಿಬ್ಬಂದಿ ಮ್ಯಾನುವಲ್​​ ಟಿಕೆಟ್ ನೀಡಿ ಬಸ್ ಸೇವೆ ಆರಂಭಿಸಿದ್ದಾರೆ. ಖದೀಮರು ಬ್ಯಾಗ್ ಕದ್ದೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳು ಟಿವಿ9ಗೆ ಲಭ್ಯವಾಗಿವೆ. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಪ್ರದೀಪ್,​​ ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *