ಬೆಂಗಳೂರು, ಫೆಬ್ರವರಿ 19: ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ (Bengaluru) ಹೆಜ್ಜೆ ಹಾಕುವವರೇ ಹೆಚ್ಚು. ಇಲ್ಲಿ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆನ್ನುವ ಕನಸು ಅನೇಕರದ್ದು. ಆದರೆ ಈ ದುಬಾರಿ ದುನಿಯಾದಲ್ಲಿ ಕೈಯಲ್ಲಿ ಎಷ್ಟು ದುಡ್ಡಿದ್ರು ಸಾಲದು. ಇದೇ ರೀತಿ ಅನುಭವ ವ್ಯಕ್ತಿಯೊಬ್ಬರಿಗೆ ಆಗಿದೆ. ಬೆಂಗಳೂರಿಗೆ ಬಂದ ಒಂದೇ ವಾರಕ್ಕೆ ತಮ್ಮ ಖರ್ಚು ವೆಚ್ಚಗಳನ್ನು ಬಹಿರಂಗ ಪಡಿಸಿದ್ದಾರೆ. ತಿಂಗಳ ಬಾಡಿಗೆ 18 ಸಾವಿರ, ಏಳು ದಿನದ ಊಟಕ್ಕೆ ಸರಿಸುಮಾರು 12 ಸಾವಿರ ರೂ ಖರ್ಚು ಆಯ್ತು ಎಂದು ಹೇಳಿದ್ದಾರೆ. ಈ ವ್ಯಕ್ತಿಯ ಒಂದು ವಾರದ ಖರ್ಚು ವೆಚ್ಚದ ಪೋಸ್ಟ್ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಪ್ರಾಹಾ (Praha) ಎಂಬ ಬಳಕೆದಾರರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಬೆಂಗಳೂರಿನಲ್ಲಿ ಒಂದು ವಾರ ಪೂರ್ಣಗೊಂಡಿದೆ, ತಿಂಗಳ ಬಾಡಿಗೆ 18 ಸಾವಿರ ಹಾಗೂ ಊಟಕ್ಕಾಗಿ 12 ಸಾವಿರ ರೂ ಖರ್ಚು ಮಾಡಿದೆ. ನಗರ ಜೀವನ ಅಗ್ಗವಾಗಿಲ್ಲ. ನನಗೆ ಹೆಚ್ಚು ಖರ್ಚು ಮಾಡುವ ಅಭ್ಯಾಸವಿಲ್ಲ. ಆದರೆ, ಇಂದಿರಾನಗರ, ಎಚ್‌ಎಸ್‌ಆರ್, ಎಲೆಕ್ಟ್ರಾನಿಕ್ ಸಿಟಿಯನ್ನು ಅನ್ವೇಷಿಸಿದೆ. ಎಚ್‌ಎಸ್‌ಆರ್‌ನಲ್ಲಿ ಉಳಿಯಲಿದ್ದೇನೆ, ಉತ್ತಮವಾದ ಸುಸಜ್ಜಿತ ಫ್ಲಾಟ್ ಹಾಗೂ ಎಲ್ಲ ಸವಲತ್ತುಗಳಿವೆ. ಈ ಬೆಂಗಳೂರು ಕೆಲಸ ಮಾಡಲು ಉತ್ತಮ ಸ್ಥಳ, ಇಲ್ಲಿ ಬಹಳಷ್ಟು ಜನರು ಇದರಲ್ಲೇ ಒದ್ದಾಡುತ್ತಿದ್ದಾರೆ. ಈ ರೀತಿ ಎಂದಿಗೂ ನೋಡಿಲ್ಲ ಅಥವಾ ನಿರೀಕ್ಷಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
1 Week completed in Bengaluru,
Spent ₹18k+ in rent and ₹12k+ in food.
– City life is not cheap, and I don’t have good spending habits too.Explored Indiranagar, HSR, Electronic City.
– Gonna stay in HSR, got a good fully furnished flat and everything available in walkable…— Praha (@Praha37v) February 17, 2026
ಇದನ್ನೂ ಓದಿ: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು
ಫೆಬ್ರವರಿ 17 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಹದಿನಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, 18 ಸಾವಿರ ರೂಗೆ ಸುಸಜ್ಜಿತ ಪ್ಲಾಟ್ ಅನ್ನು ಹೇಗೆ ಕಂಡುಕೊಂಡಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಗರ ಜೀವನ ದುಬಾರಿಯಾಗಿವೆ, ಆದರೆ ಅವಕಾಶಗಳು ಹೇರಳವಾಗಿವೆ ಎಂದಿದ್ದಾರೆ. ಮತ್ತೊಬ್ಬರು, ಎಚ್‌ಎಸ್‌ಆರ್‌ನಲ್ಲಿ ರಿಯಲ್ ಎಸ್ಟೇಟ್ ತುಂಬಾ ದುಬಾರಿಯಾಗಿದೆ. ನೀವು ಬೊಮ್ಮನಹಳ್ಳಿ ಅಥವಾ ಜಿಬಿ ಪಾಳ್ಯದಲ್ಲಿ ಮನೆ ಹುಡುಕಿದರೆ ಒಳ್ಳೆಯದಿತ್ತು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ