ತಾಯಿಗೆ (mother) ಮಕ್ಕಳೇ ಪ್ರಪಂಚ. ಹೀಗಾಗಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಒಂದೊಳ್ಳೆ ಭವಿಷ್ಯ ಕಟ್ಟಿ ಕೊಡಲು ಒದ್ದಾಡುತ್ತಾಳೆ. ಹೀಗಾಗಿ ಅಮ್ಮ ಅಂದ್ರೆ ತ್ಯಾಗಮಯಿ. ಮಕ್ಕಳಿಗಾಗಿ ಎಲ್ಲಾ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಗನ ಸ್ಕೂಲ್ ಬಸ್ (school bus) ಹೊರಟಿತೆಂದು ಬ್ಯಾಗ್ ಹೆಗಲಿಗೇರಿಸಿಕೊಂಡು ತಾಯಿಯೂ ಬಸ್ ಹಿಂದೆ ಓಡುತ್ತಿರುವ ದೃಶ್ಯವು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಟಿವಿ ಇಶಾ ಟ್ರಾವೆಲ್ ಡೈರಿ (tvishatraveldairy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಿಯೊಬ್ಬಳು ಮಗನ ಬ್ಯಾಗ್‌ನ್ನು ಹೆಗಲಿಗೇರಿಸಿಕೊಂಡು ಸ್ಕೂಲ್ ಬಸ್ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ಮಗನು ತನ್ನ ತಾಯಿಯ ಜತೆಗೆ ಓಡಿ ಹೋಗುತ್ತಿದ್ದು, ಕೊನೆಗೂ ಸ್ಕೂಲ್ ಬಸ್ ನಿಲ್ಲಿಸಿ ಮಗನನ್ನು ಹತ್ತಿಸಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು
ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ತಾಯಿಗೆ ಈ ಜಗದಲ್ಲಿ ಸರಿಸಾಟಿ ಯಾರಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಕ್ಕಳ ಭವಿಷ್ಯಕ್ಕಾಗಿ ತಾಯಿಯ ಹೋರಾಟ, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಮಕ್ಕಳಿಗೆ ತಾಯಿ ಏನನ್ನು ಬೇಕಾದ್ರು ಮಾಡ್ತಾಳೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ