ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ನಟನೆ ಮತ್ತು ಗ್ಲಾಮರ್ನಿಂದ ದಕ್ಷಿಣ ಭಾರತ ಚಿತ್ರರಂಗ ಮಾತ್ರವೇ ಅಲ್ಲದೆ ಬಾಲಿವುಡ್ನಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮೊದಲೆಲ್ಲ ಸೀದಾ-ಸಾದಾ ‘ಪಕ್ಕದ ಮನೆ ಹುಡುಗಿ’ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಅನುಭವ ಹೆಚ್ಚಾದಂತೆ ತುಸು ಬೋಲ್ಡ್ ಆದ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದರು. ‘ಪುಷ್ಪ’ ಸಿನಿಮಾದ ಅವರ ಪಾತ್ರ ಅಲ್ಲಲ್ಲಿ ತುಸು ಬೋಲ್ಡ್ ಆಗಿತ್ತು. ಕೆಲ ತಿಂಗಳುಗಳ ಹಿಂದೆ ಬಿಡುಗಡೆ ಆದ ‘ಥಮ’ ಸಿನಿಮಾನಲ್ಲಿ ತುಸು ಹೆಚ್ಚೇ ಬೋಲ್ಡ್ ಆಗಿ ನಟಿಸಿದ್ದರು. ಒಂದು ಐಟಂ ಹಾಡಿನಲ್ಲೂ ಕಾಣಿಸಿಕೊಂಡಿದ್ದರು. ಆದರೆ ಇದೀಗ ರಶ್ಮಿಕಾ ಎಲ್ಲ ಗಡಿಗಳನ್ನು ಮುರಿದು ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ.
ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ‘ಗರ್ಲ್ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸಿದ್ದರು. ಪುರುಷ ಅಹಂ ಅನ್ನು ಎದುರಿಸುವ, ಪ್ರಶ್ನೆ ಮಾಡುವ ಗಟ್ಟಿಯಾದ ಪಾತ್ರದಲ್ಲಿ ನಟಿಸಿದ್ದರು ರಶ್ಮಿಕಾ. ಆದರೆ ಇದೀಗ ರಶ್ಮಿಕಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸಲಿಂಗಕಾಮಿಯ (ಲೆಸ್ಬಿಯನ್) ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ಬೋಲ್ಡ್ ಆದ ಪಾತ್ರ ಇದಾಗಿರುವ ಜೊತೆಗೆ ಸಖತ್ ಗ್ಲಾಮರಸ್ ಆಗಿಯೂ ಸಿನಿಮಾನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ರಶ್ಮಿಕಾ ಮಂದಣ್ಣ ಹಿಂದಿಯ ‘ಕಾಕ್ಟೇಲ್ 2’ ಸಿನಿಮಾನಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾನಲ್ಲಿ ರಶ್ಮಿಕಾ ಜೊತೆಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸನೊನ್ ಮತ್ತು ಶಾಹಿದ್ ಕಪೂರ್ ಸಹ ಇದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆ ಹೊಂದಿರುವ ಸಿನಿಮಾ ಆಗಿದೆ ಎನ್ನಲಾಗಿತ್ತು. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯಂತೆ ಈ ಸಿನಿಮಾನಲ್ಲಿ ರಶ್ಮಿಕಾ ಮತ್ತು ಕೃತಿ ಸನೊನ್ ಲೆಸ್ಬಿಯನ್ ಕಪಲ್ ಪಾತ್ರ ನಿರ್ವಹಿಸಿದ್ದಾರಂತೆ.
ಇದನ್ನೂ ಓದಿ:ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಪೈಕಿ ಯಾರು ಶ್ರೀಮಂತರು? ಇಲ್ಲಿದೆ ವಿವರ
2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್ಟೇಲ್’ ಸಿನಿಮಾನಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ದಿಯಾನಾ ಪೆಂಟಿ ನಟಿಸಿದ್ದರು. ಅದು ಪಕ್ಕಾ ತ್ರಿಕೋನ ಪ್ರೇಮಕಥೆಯನ್ನು ಹೊಂದಿತ್ತು. ಸಿನಿಮಾ ದೊಡ್ಡ ಹಿಟ್ ಸಹ ಆಗಿತ್ತು. ಅದೇ ಫಾರ್ಮುಲಾ ಇರಿಸಿಕೊಂಡು ಇದೀಗ ‘ಕಾಕ್ಟೇಲ್ 2’ ಮಾಡಲಾಗಿದೆ. ಆದರೆ ಇಲ್ಲಿ ಕತೆಯಲ್ಲಿ ಟ್ವಿಸ್ಟ್ ಕೊಡಲಾಗಿದ್ದು, ರಶ್ಮಿಕಾ ಮತ್ತು ಕೃತಿ ಸನೊನ್ ಅವರನ್ನು ಜೋಡಿ ಮಾಡಲಾಗಿದೆ.
‘ಕಾಕ್ಟೇಲ್ 2’ ನಿರ್ದೇಶಕ ಹೋಮಿ ಅದ್ಜಾಯಿನ್ ಹೇಳಿದ್ದಂತೆ ಜನವರಿ 31 ರಂದು ಸಿನಿಮಾದ ಶೂಟಿಂಗ್ ಮುಗಿಸಲಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಹ ಬಹುತೇಕ ಮುಗಿದಿದೆ. ಆದರೆ ಶಾಹಿದ್ ಕಪೂರ್ ನಟನೆಯ ‘ಓ ರೋಮಿಯೊ’ ಸಿನಿಮಾ ಬಿಡುಗಡೆ ಆಗಬೇಕಿದ್ದ ಕಾರಣ ‘ಕಾಕ್ಟೇಲ್ 2’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ