Headlines

ಬೆಂಗಳೂರಿನ ಟೆಕ್ಕಿ ಸಾವಿಗೆ ಬಿಗ್ ಟ್ವಿಸ್ಟ್​​: ಯುವಕನ ಕಾಮೋನ್ಮಾದಕ್ಕೆ ಶರ್ಮಿಳಾ ಬಲಿ – Kannada News | big twist to bengaluru techie sharmila murder case: killer admits Try to physical assault

ಟೆಕ್ಕಿ ಶರ್ಮಿಳಾ, ಕರ್ನಲ್ ಕುರೈ (ಹಂತಕ)

ಬೆಂಗಳೂರು, ಫೆಬ್ರವರಿ 20): ಬೆಂಗಳೂರಿನ ರಾಮಮೂರ್ತಿ ಇದೇ ಜನವರಿ 16ರಂದು ನಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಮಂಗಳೂರು ಮೂಲದ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ 18 ವರ್ಷದ ಯುವಕನೇ ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಬಳಿಕ ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ಆರೋಪಿ ಕರ್ನಲ್ ಕುರೈ ತನ್ನ ವಿಕೃತ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾನೆ. ಶರ್ಮಿಳಾ ಫ್ಲಾಟ್ ಗೆ ನುಗ್ಗುವ ಮುನ್ನ ನಾಲ್ಕೈದು ಬಾರಿ ರೆಕ್ಕಿ ಮಾಡಿದ್ದನಂತೆ. ಇದು ಸುಲಭವಾಗಿ ಶರ್ಮಿಳಾ ಮನೆಗೆ ನುಗ್ಗಲು ಕುರೈಗೆ ಸಹಕಾರಿಯಾಗಿತ್ತು‌ ಎಂಬುದು ಗೊತ್ತಾಗಿತ್ತು‌. ಮನೆಗೆ ನುಗ್ಗಿದವನೇ ಹಿಂಬದಿಯಿಂದ ಬಂದು ಶರ್ಮಿಳಾನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಆಕೆ ಪ್ರತಿರೋಧ ಒಡ್ಡಿದಾಗ ಆತ ಮಾಡಿರೋದೆ ಘನಘೋರ ಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

ಕೊಂದು ಅತ್ಯಾಚಾರಕ್ಕೆ ಯತ್ನಿಸಿದ್ದ ಹಂತಕ!

ಹಂತಕ ಕರ್ನಲ್ ಕುರೈ, ಶರ್ಮಿಳಾಳನ್ನು ತಬ್ಬಿ ಹಿಡಿದಾಗ ಆಕೆ ಬೇಡಿಕೊಂಡ್ರೂ ಆರೋಪಿ ಬಿಟ್ಟಿಲ್ಲ. ಸೋಪಾಗೆ ಶರ್ಮಿಳಾ ತಲೆ ತಗುಲಿ ತೀವ್ರ ರಕ್ತಸ್ರಾವವಾಗಿತ್ತು. ಆದರೂ ಬಿಡದೆ ಶರ್ಮಿಳಾನ್ನ ಹಿಡಿದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ. ಯಾವಾಗ ಪ್ರತಿರೋಧ ಜಾಸ್ತಿಯಾಯ್ತೋ ಎರಡು ಕೈಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ತಾನೇ ಯುವತಿ ಬಟ್ಟೆ ಬಿಚ್ಚಿ ,ಅದೇ ಬಟ್ಟೆಯಿಂದ ರಕ್ತ ಒರೆಸಿ ನೀರಲ್ಲಿ ತೊಳೆದಿದ್ದಾನಂತೆ. ಇದಾದ ಮೇಲೂ ತನ್ನ ವಿಕೃತಿ ಮುಂದುವರೆಸಿದ್ದ ಪಾಪಿ ಶವದ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ. ತನ್ನ ವಿಕೃತಿಯನ್ನು ಪೊಲೀಸರ ಮುಂದೆ ಆರೋಪಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು!

ಟೆಕ್ಕಿ ಶರ್ಮಿಳಾ ಕೊಲೆ ಬಳಿಕ ಬೀರುವಿನಲ್ಲಿದ್ದ ಬಟ್ಟೆಗಳನ್ನ ತಂದು ತಾನೇ ಯುವತಿ ಶವಕ್ಕೆ ಹಾಕಿ, ಅಂಗಾತ ಮಲಗಿಸಿ ಅನುಮಾನ ಬರದಂತೆ ಎಸ್ಕೇಪ್ ಆಗಿದ್ದ. ಅದಕ್ಕೂ ಮೊದಲು ಟಾಪ್ ಸೇರಿ ಬಟ್ಟೆಗಳನ್ನ ಮಂಚದ ಮೇಲಿಟ್ಟು ಟಿಶ್ಯು ಪೇಪರ್ ಗೆ ಬೆಂಚಿ ಹಚ್ಚಿದ್ದ. ಆದ್ರೆ ಪ್ಯಾಂಟ್ ಮಿಸ್ ಆಗಿದ್ದು, ಅದನ್ನು ಪಕ್ಕದ ಮನೆಯ ಮರದ ಮೇಲೆ ಬಿಸಾಡಿ ಹೋಗಿದ್ದ. ಇದೇ ವೇಳೆ ಯುವತಿಯ ಪೋನ್ ತೆಗೆದುಕೊಂಡು ಹೋಗಿದ್ದ ಎಂಬುದು ಗೊತ್ತಾಗಿದೆ. ಸದ್ಯ ರಾಮಮೂರ್ತಿನಗರ ಪೊಲೀಸರ ನಿರಂತರ ಡ್ರಿಲ್ ನಿಂದಾಗಿ ಕರ್ನಲ್ ಕುರೈ ಅಸಲಿ ಸತ್ಯ ಬಾಯಿಬಿಟ್ಟಿದ್ದಾನೆ.

ಒಟ್ಟಿನಲ್ಲಿ ನೆರೆಮನೆಯ ಯುವಕನ ಕಾಮೋನ್ಮಾದಕ್ಕೆ ಮಹಿಳಾ ಟೆಕ್ಕಿ ಬಲಿಯಾಗಿರುವುದು ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *