ಬೆಂಗಳೂರು, ಫೆಬ್ರವರಿ 20: ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಬಡರೋಗಿಗಳ (Patients) ಜೇಬಿಗೆ ಕತ್ತರಿ ಹಾಕಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 13 ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದ ಉಚಿತ ಸ್ಕ್ಯಾನಿಂಗ್ (Free scanning) ಏಕಾಏಕಿ ಸ್ಥಗಿತವಾಗಿತ್ತು. ಬಡರೋಗಿಗಳ ಪರ ನಿಮ್ಮ ಟಿವಿ9 ಸುದ್ದಿ ಪ್ರಸಾರ ಬೆನ್ನಲ್ಲೇ ಎತ್ತಚ್ಚ ಆರೋಗ್ಯ ಇಲಾಖೆ ಇದೀಗ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.
ಉಚಿತ ಸ್ಕ್ಯಾನಿಂಗ್ಗೆ ಪರ್ಯಾಯ ವ್ಯವಸ್ಥೆ
ಬಡ ರೋಗಿಗಳಿಗೆ ಅನುಕೂಲವಾಗ್ತಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿದ್ದ Ct -MRI ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಉಚಿತ ಸೇವೆಯನ್ನ ಏಕಾಏಕಿ ನಿಲ್ಲಿಸಿದ್ದರಿಂದ ಬಡರೋಗಿಗಳ ಜೇಬಿಗೆ ಕತ್ತರಿ ಬಿದ್ದಿತ್ತು. ಹಣ ಕೊಟ್ಟು ಸ್ಕ್ಯಾನಿಂಗ್ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾವಾಗಿತ್ತು. ಬಡರೋಗಿಗಳಿಗಾಗ್ತಿದ್ದ ಅನ್ಯಾಯದ ವಿರುದ್ಧ ಟಿವಿ9 ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು. ಕ್ರಶ್ನಾ ಡೈಯಾಗ್ಲೋಸ್ಟಿಕ್ಗೆ ಸರ್ಕಾರ ಬಾಕಿ ಹಣ ಪಾವತಿಮಾಡದ ಹಿನ್ನೆಲೆ ಉಚಿತ ಸೇವೆ ನಿಲ್ಲಿಸಿರೋದನ್ನ ಪ್ರಶ್ನೆ ಮಾಡಿ ಸರ್ಕಾರದಲ್ಲಿ ಬಡವರ ಆರೋಗ್ಯಕ್ಕೆ ಹಣ ಇಲ್ವಾ ಎಂದು ಸರ್ಕಾರಕ್ಕೆ ಬಿಸಿಮುಟ್ಟಿಸಲಾಗಿತ್ತು.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್ ಸೇವೆ ಸ್ಥಗಿತ; ಸರ್ಕಾರ ವಿರುದ್ಧ ಜನಾಕ್ರೋಶ!
ಇನ್ನು ಸ್ಕ್ಯಾನಿಂಗ್ ಸೌಲಭ್ಯ ನಿರ್ವಹಣೆ ಮಾಡ್ತಿದ್ದ ಕ್ರಶ್ನಾ ಡೈಯಾಗ್ನೋಸ್ಟಿಕ್ ಕಂಪನಿ, ಈ ಹಿಂದೆ ಮೇಲ್ ಮೂಲಕ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ ಪಾವತಿಸಬೇಕಿರೋ 143.78 ಕೋಟಿ ರೂ ಬಾಕಿ ಹಣ ಬಿಡುಗಡೆ ಮಾಡದೆ ಇದ್ರೆ ಉಚಿತ ಸೇವೆ ನಿಲ್ಲಿಸೋದಾಗಿ ಎಚ್ಚರಿಸಿತ್ತು. ಕಂಪನಿಯ ಆರ್ಥಿಕ ಸ್ಥಿತಿಯನ್ನ ಪ್ರಸ್ತಾಪಿಸಿ ಫೆಬ್ರುವರಿ 17 ರೊಳಗೆ ಕನಿಷ್ಟ 50 ಕೋಟಿ ರೂ ಹಣ ಪಾವತಿ ಮಾಡದೆ ಇದ್ರೆ ಉಚಿತ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷವಹಿಸಿದ್ದರು.
ಉಚಿತ ಸೇವೆ ಸ್ಥಗಿತವಾಗಿ ರೋಗಿಗಳು ಪರದಾಡುವಂತಾಗಿದ್ದರೂ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದರ. ಕ್ರಶ್ನಾ ಡೈಯಾಗ್ನೋಸ್ಟಿಕ್ ಕಂಪನಿ ಸೇವೆ ಸ್ಥಗಿತ ಮಾಡುವುದಾಗಿ ಹೇಳಿದರು ಆರೋಗ್ಯ ಇಲಾಖೆ ಪರ್ಯಾಯ ಕ್ರಮವಹಿಸದೇ ನಿರ್ಲಕ್ಷ್ಯ ಮಾಡಿತ್ತು. ಇದರಿಂದ ರೋಗಿಗಳಿಗೆ ಸಮಸ್ಯೆ ಎದುರಾಗಿತ್ತು. ಜೊತೆಗೆ ಖಾಸಗಿಯಲ್ಲಿ ಸಾವಿರಾರು ರೂ ದುಡ್ಡು ಖರ್ಚು ಮಾಡಿ ಸ್ಕ್ಯಾನ್ ಮಾಡಿಸುವುದು ಕಷ್ಟ. ಹೀಗಾಗಿ ಸಮಸ್ಯೆಗೆ ಪರಿಹಾರ ಒದಗಿಸಿ ರೋಗಿಗಳಿಗೆ ತೊಂದರೆಯಾಗದ್ದಂತೆ ಅನುಕೂಲಕ್ಕೆ ಸರ್ಕಾರವನ್ನ ಒತ್ತಾಯಿಸಲಾಗಿತ್ತು.
ಇನ್ನು 13 ಜಿಲ್ಲೆಯಿಂದಲೂ ರೋಗಿಗಳ ಅಳಲನ್ನು ಟಿವಿ9 ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಸರ್ಕಾರಕ್ಕೆ ಪ್ರಶ್ನೆ ಮಾಡ್ತೋ ಎಚ್ಚೆತ್ತ NHM ರಾಷ್ಟ್ರೀಯ ಆರೋಗ್ಯ ಅಭಿಯಾನದ ಡೈರೆಕ್ಟ್ ತಾತ್ಕಾಲಿಕವಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಿದ್ದು, ಸ್ಥಗಿತವಾಗಿರೊ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಎರಡ್ಮೂರ ದಿನದಲ್ಲಿ ಪುನಃ ಉಚಿತ ಸ್ಕ್ಯಾನಿಂಗ್ ಸೌಲಭ್ಯ ಒದಗಿಸಲು ಕ್ರಮವಹಿಸುವ ಭರವಸೆ ನೀಡಿದ್ದಾರೆ.
ಸ್ಕ್ಯಾನಿಂಗ್ ವಿಚಾರದಲ್ಲಿ ನಡಿತಾ ಕಳ್ಳಾಟ? ಆರೋಗ್ಯ ಸಚಿವರು ಹೇಳಿದ್ದಿಷ್ಟು
ಇನ್ನು 143 ಕೋಟಿ ರೂ ಬಾಕಿ ಹಣ ಪಾವತಿಗೆ ಪಟ್ಟು ಹಿಡಿದಿರುವ ಕ್ರಶ್ನಾ ಡೈಯಾಗ್ಲೋಸ್ಟಿಕ್ ಕಂಪನಿಯ ಮೇಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಲ ಆರೋಪ ಮಾಡಿದ್ದು, ಕಂಪನಿಗೆ ಅಷ್ಟು ಹಣ ಪಾವತಿಸಲೇಬೇಕಿಲ್ಲ, ಹೆಚ್ಚುವರಿ ಸ್ಕ್ಯಾನಿಂಗ್ಗಳನ್ನ ತೋರಿಸಿ ಬಿಲ್ ಮಾಡಿದ್ದಾರೆಂದು ಆರೋಪಿಸಿದರು. ಎಲ್ಲಾ ಕಡೆ ಎಂಆರ್ಐ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್ ಸರಿ ಇಲ್ಲ ಅಂತ ಹೇಳಕ್ಕೆ ಆಗಲ್ಲ, 13 ಕಡೆಗಳಲ್ಲಿ ಎಂಆರ್ ಐ ಸ್ಕ್ಯಾನ್ ಮಾತ್ರ ವರ್ಕ್ ಆಗ್ತಿಲ್ಲ, ಎಲ್ಲಿ ಸಮಸ್ಯೆ ಆಗಿದೆಯೋ ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
2019ರಿಂದ ಕ್ರಶ್ನಾ ಡಯಾಗ್ನೋಸ್ಟಿಕ್ ಡಿಸ್ಪ್ಯೂಟ್ ಇತ್ತು, ಅಂದಿನಿಂದ ಶೇಕಾಡ 5% ಹೆಚ್ಚಳ ಕೇಳಿದ್ದರು, ನೂರಾರು ಕೋಟಿ ಅಂತಿದ್ದಾರೆ, ಆದರೆ ಅಷ್ಟು ಕೊಡಲು ಆಗಲ್ಲ, ಡಿಸೆಂಬರ್ನಲ್ಲಿ ನಮ್ಮ ಸರ್ಕಾರ ಬಂದಿದೆ. 2024ರ ಆಗಸ್ಟ್ ಎಕ್ಸೆಸ್ ಸ್ಕ್ಯಾನ್ ಆಗ್ತಿರೋದು ತಿಳಿದಿದೆ. ನಾವು ಈ ಕುರಿತು ಪರಿಶೀಲನೆ ಮಾಡಿದ್ದೇವೆ. ಸ್ಟ್ಯಾಸ್ಟ್ ಮೂಲಕ ಹೋಗಬೇಕು ಅಂತ ತೀರ್ಮಾನ ಮಾಡಿದ್ವಿ. ಈ ಹಿಂದೆ ಅವರು ಹೇಗೆ ಸ್ಕ್ಯಾನ್ ಮಾಡಿದ್ರಿ ಅಂತ ವರದಿ ಕೇಳಿದ್ವಿ ಹೊಸ ಸಿಸ್ಟಮ್ ತಂದ ಮೇಲೆ ಕಳ್ಳಾಟ ಬಯಲಾಗಿದೆ ಎಂದಿದ್ದಾರೆ.
ಸ್ಟ್ಯಾಸ್ಟ್ ನಂತ್ರ ಸ್ಕ್ಯಾನಿಂಗ್ ಕೇಸ್ ಬಹಳಷ್ಟು ಇಳಿಕೆ ಆಗಿದೆ. ಹಿಂದಿನ ಸ್ಕ್ಯಾನಿಂಗ್ ರಿಪೋರ್ಟ್ ಕೊಡಿ ಅಂತ ಕೇಳಿದ್ದೇವೆ, ಆದರೆ ಈ ತನಕ ವರದಿ ನೀಡಿಲ್ಲ. 143 ಕೋಟಿ ರೂಪಾಯಿ ಬರಲು ಸಾಧ್ಯವಿಲ್ಲ ಅಂದಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇದು ಚೌಕಾಸಿ ಅಲ್ಲ, ಇಲ್ಲಿ ಹೀಗೆ ಮಾಡಲು ಆಗೋದಿಲ್ಲ, ಎಷ್ಟು ಹಣ ಕೊಡಬೇಕು ಅನ್ನೊ ಬಗ್ಗೆ ಗೈಡ್ಲೈನ್ಸ್ ಬೇಕು. ಅವರಿಗೆ ಅಂತಿಮವಾಗಿ ಇಂತಿಷ್ಟು ಹಣ ಕೊಡಲು ಸಾಧ್ಯ ಅಂತ ಹೇಳುತ್ತೇವೆ. ಎಲ್ಲೆಲ್ಲಿ ಸಮಸ್ಯೆ ಆಗಿದೆಯೋ ಅಲ್ಲೆಲ್ಲಾ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ಸರ್ಕಾರದಿಂದ 140 ಕೋಟಿ ರೂ ಬಾಕಿ: ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸೇವೆಗಳು ಸ್ಥಗಿತ
ವಿರೋಧ ಪಕ್ಷದವರು ಕೇಳಿದಷ್ಟು ಹಣ ಕೊಡಿ ಅಂದ್ರೆ ಹೇಗೆ? ಇದು ಸರ್ಕಾರದ ದುಡ್ಡು ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಬಾಕಿ ಇದೆ ಅಂತ ನೋಡಬೇಕು. ಕ್ರಶ್ನಾ ಡೈಯಾಗ್ಲೋಸ್ಟಿಕ್ ಕಂಪನಿ ಜೊತೆ ಮಾತುಕತೆ ಮಡೋದಾಗಿ ತಿಳಿಸಿದ ಸಚಿವರು ಕಂಪನಿ ಒಪ್ಪಿದ್ರೆ ಮುಂದುವರೆಸುತ್ತೇವೆ, ಇಲ್ಲದೆ ಹೋದರೆ ಪರ್ಯಾಯ ಕಂಪನಿಯ ವ್ಯವಸ್ಥೆ ಮಾಡೋದಾಗಿ ತಿಳಿಸಿದ್ದು, ಈ ಹಿಂದಿನಂತೆ ಉಚಿತ ಸೇವೆಯನ್ನ 13 ಜಿಲ್ಲಾಸ್ಪತ್ರೆಯಲ್ಲಿ ಇನ್ನೆರಡ್ಮೂರು ದಿನದಲ್ಲಿ ವ್ಯವಸ್ಥೆ ಮಾಡಲಾಗುವುದೆಂದಿದ್ದಾರೆ.
ಒಟ್ನಲ್ಲಿ ಆರೋಗ್ಯ ಸೇವೆಯಲ್ಲಿ CT _MRI ಸ್ಕ್ಯಾನಿಂಗ್ ಸಹ ತುರ್ತು ಸೇವೆಯಾಗಿದ್ದು, ಸ್ಕ್ಯಾನಿಂಗ್ ನಿರ್ವಹಣೆ ಮಾಡುವ ಕಂಪನಿ ಉಚಿತ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ರೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಎರಡು ದಿನ ಬಡರೋಗಿಗಳು ಪರದಾಡುವಂತಾಗಿತ್ತು. ಸದ್ಯ ಆರೋಗ್ಯ ಇಲಾಖೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.