Headlines

‘ಟಾಕ್ಸಿಕ್’ ಟೀಸರ್: ವೈರಲ್ ಆಗುತ್ತಿದೆ ಯಶ್ ಕಾಲೇಜು ವಿಡಿಯೋ ವಿಶೇಷತೆಯೇನು? – Kannada News | Yash’s old dance video getting viral with Toxic teaser clip

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಟೀಸರ್ ಸಖತ್ ಮಾಸ್ ಆಗಿದ್ದು, ಟೀಸರ್​​ನಲ್ಲಿಯೇ ಸಾಕಷ್ಟು ಟ್ವಿಸ್ಟುಗಳನ್ನು ಸಹ ನೀಡಲಾಗಿದೆ. ಟೀಸರ್​ನಲ್ಲಿ ಯಶ್ ಎರಡು ಭಿನ್ನ ಲುಕ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತುಸು ವಯಸ್ಸಾದ ಪಾತ್ರದ ಜೊತೆಗೆ ಯಂಗ್ ಯಶ್ ಸಹ ಟೀಸರ್​​ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಖತ್ ಕುತೂಹಲ ಮೂಡಿಸಿದೆ. ಯಂಗ್ ಲುಕ್​​​ನಲ್ಲಿರುವ ಯಶ್, ಕೆಲವರನ್ನು ಅಮಾನುಶವಾಗಿ ಕೊಲ್ಲುವ ದೃಶ್ಯಗಳ ಜೊತೆಗೆ ಕುಡಿದು ಡ್ಯಾನ್ಸ್ ಮಾಡುವ ದೃಶ್ಯಗಳು ಟೀಸರ್​​ನಲ್ಲಿವೆ. ಆದರೆ ಈ ಟೀಸರ್ ಬಿಡುಗಡೆ ಆದ ಬೆನ್ನಲ್ಲೆ ಯಶ್ ಅವರ ಕಾಲೇಜು ದಿನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಯಶ್ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಆಗಿನಿಂದಲೇ ಅವರು ನಾಟಕ, ಡ್ಯಾನ್ಸುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಸಹಪಾಠಿಗಳನ್ನು ರಂಜಿಸುತ್ತಿದ್ದರು. ಇದೀಗ ‘ಟಾಕ್ಸಿಕ್’ ಟೀಸರ್ ಬಿಡುಗಡೆ ಆದ ಬಳಿಕ ಯಶ್ ಅವರು ವಿದ್ಯಾರ್ಥಿಯಾಗಿದ್ದಾಗ ಮಹಾರಾಜ ಕಾಲೇಜಿನಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದಕ್ಕೆ ಕಾರಣವೂ ಇದೆ.

‘ಟಾಕ್ಸಿಕ್’ ಟೀಸರ್​​ನ ಕೊನೆಯಲ್ಲಿ ಯಶ್ ಅವರ ಯಂಗ್ ಲುಕ್ ತೋರಿಸಿದಾಗ ಯಶ್ ಕೆಲವು ಡ್ಯಾನ್ಸ್ ಸ್ಟೆಪ್ ಹಾಕುತ್ತಾರೆ ಅದರಲ್ಲಿ ಮೊದಲೆಯದ್ದು ಕೈಯನ್ನು ಅಲೆಗಳಂತೆ ಸ್ವಿಂಗ್ ಮಾಡುವ ಡ್ಯಾನ್ಸ್ ಸ್ಟೆಪ್ಪು. ಅಸಲಿಗೆ ಅದೇ ಸ್ಟೆಪ್ಪನ್ನು ಅವರು ದಶಕಗಳ ಹಿಂದೆ ತಮ್ಮ ಕಾಲೇಜು ಕಾರ್ಯಕ್ರಮದಲ್ಲಿ ಹಾಕಿದ್ದರು. ಈಗ ಯಥಾವತ್ತು ಅದೇ ಸ್ಟೆಪ್ಪನ್ನು ಯಶ್ ತಮ್ಮ ಸಿನಿಮಾನಲ್ಲಿಯೂ ಬಳಸಿಕೊಂಡಿದ್ದಾರೆ. ಆ ಮೂಲಕ ತಮ್ಮದೇ ಯೌವ್ವನದ ದಿನಗಳನ್ನು ಯಶ್ ಮರಳಿ ತಂದಿದ್ದಾರೆ.

ಇದನ್ನೂ ಓದಿ:‘ವಿಂಟೇಜ್ ಯಶ್ ಈಸ್ ಬ್ಯಾಕ್’; ‘ಟಾಕ್ಸಿಕ್ ಟೀಸರ್ ನೋಡಿ ಯಶ್ ಫ್ಯಾನ್ಸ್ ಖುಷ್

ಇದೀಗ ಯಶ್ ಅವರ ಡ್ಯಾನ್ಸ್ ವಿಡಿಯೋ ಹಾಗೂ ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಮಾಡಿರುವ ಡ್ಯಾನ್ಸ್​​ನ ವಿಡಿಯೋಗಳನ್ನು ಕೊಲ್ಯಾಜ್ ಮಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಯಶ್ ದಶಕಗಳ ಕಾಲ ಹಿಂದಕ್ಕೆ ಹೋಗಿದ್ದಾರೆ. ಯಶ್ ಮತ್ತೆ ಯಂಗ್ ಆಗಿದ್ದಾರೆ ಎಂದೆಲ್ಲ ಕಮೆಂಟುಗಳನ್ನು ನೆಟ್ಟಿಗರು ಹರಿಬಿಡುತ್ತಿದ್ದಾರೆ.

ಮಹಾರಾಜ ಕಾಲೇಜಿನಲ್ಲಿ ಓದಿದ ಯಶ್ ಬಹಳ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸುತ್ತಿದ್ದ ವಿದ್ಯಾರ್ಥಿ ಆಗಿದ್ದರು. ಆದರೆ ಅವರೇ ಹೇಳಿಕೊಂಡಿದ್ದಂತೆ ಬಹಳ ತರ್ಲೆ ವಿದ್ಯಾರ್ಥಿಯೂ ಆಗಿದ್ದರಂತೆ. ಒಮ್ಮೆಯಂತೂ ತಮ್ಮ ಗೆಳೆಯನ ಮಾತು ಕೇಳಿ ನಟಿ ನಿಧಿ ಸುಬ್ಬಯ್ಯ ಅವರ ಮನೆಯ ಕಿಟಕಿ ಗಾಜುಗಳನ್ನು ಒಡೆದಿದ್ದರಂತೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *