T20 World Cup 2026: ಟಿ20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿದೆ. ಲೀಗ್ ಹಂತದಲ್ಲಿ ಕಣಕ್ಕಿಳಿದ 20 ತಂಡಗಳಲ್ಲಿ 12 ಟೀಮ್ಗಳು ಮೊದಲ ಸುತ್ತಿನಲ್ಲೇ ನಿರ್ಗಮಿಸಿದೆ. ಇನ್ನುಳಿದ 8 ತಂಡಗಳು ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿವೆ.
ಸೂಪರ್-8 ಸುತ್ತಿನ ಗ್ರೂಪ್-ಎ ನಲ್ಲಿ ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳು ಕಾಣಿಸಿಕೊಂಡಿವೆ. ಈ ತಂಡಗಳು ತಲಾ 3 ಪಂದ್ಯಗಳನ್ನಾಡಲಿದೆ. ಅಂದರೆ ಭಾರತ ತಂಡವು ಉಳಿದ ಮೂರು ತಂಡಗಳ ವಿರುದ್ಧ ಒಂದೊಂದು ಪಂದ್ಯಗಳನ್ನು ಆಡಲಿದೆ.
ಇನ್ನು ಗ್ರೂಪ್-ಬಿ ನಲ್ಲಿ ಕಾಣಿಸಿಕೊಂಡಿರುವುದು ನ್ಯೂಝಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ. ಈ ತಂಡಗಳು ಕೂಡ ತಲಾ ಮೂರು ಪಂದ್ಯಗಳನ್ನಾಡಲಿದೆ. ಈ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ. ಅತ್ತ ಗ್ರೂಪ್-ಎ ನಲ್ಲಿರುವ ತಂಡಗಳ ಪಂದ್ಯಗಳಿಗೆ ಭಾರತ ಆತಿಥ್ಯವಹಿಸಲಿದೆ.
ವಿಶೇಷ ಎಂದರೆ ಗ್ರೂಪ್-ಎ ನಲ್ಲಿ ಸ್ಥಾನ ಪಡೆದಿರುವ 4 ತಂಡಗಳು ಒಂದೇ ಒಂದು ಸೋಲು ಕಾಣದೇ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅಂದರೆ ಭಾರತ, ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಮೊದಲ ಸುತ್ತಿನಲ್ಲಿ ಒಂದೇ ಒಂದು ಮ್ಯಾಚ್ ಸೋತಿಲ್ಲ. ಇದೀಗ ಸೋಲಿಲ್ಲದ ಸರದಾರರಾಗಿ ದ್ವಿತೀಯ ಸುತ್ತಿಗೆ ಪ್ರವೇಶಿಸಿರುವ ಈ ಎಲ್ಲಾ ತಂಡಗಳು ಗ್ರೂಪ್-ಎ ನಲ್ಲೇ ಕಾಣಿಸಿಕೊಂಡಿದೆ.
ಹೀಗಾಗಿ ದ್ವಿತೀಯ ಸುತ್ತಿನಲ್ಲಿ ಗ್ರೂಪ್-ಎ ನಲ್ಲಿರುವ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಅತ್ತ ಗ್ರೂಪ್-ಬಿ ನಲ್ಲೂ ಬಲಿಷ್ಠ ತಂಡಗಳೇ ಕಾಣಿಸಿಕೊಂಡಿದೆ. ಹೀಗಾಗಿ ಸೂಪರ್-8 ಸುತ್ತಿನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಈ ರೋಚಕ ಹೋರಾಟದ ಮೂಲಕ ಸೆಮಿಫೈನಲ್ಗೇರುವ 4 ತಂಡಗಳಾವುವು ಎಂಬುದನ್ನು ಕಾದು ನೋಡೋಣ.




