Headlines

ಮನ್ ಕಿ ಬಾತ್​ನಲ್ಲಿ ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಬೆಂಗಳೂರಿನ ಡಾಕ್ಟರ್ ಹೇಳಿದ್ದಿಷ್ಟು – Kannada News | What Bengaluru Dr. Asthana said about organ donation mentioned by Modi in Mann Ki Baat

ಬೆಂಗಳೂರು, ಫೆಬ್ರವರಿ 22: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ 131ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಅಂಗಾಂಗ ದಾನದ ಕುರಿತು ಪ್ರಸ್ತಾಪಿಸಿದ್ದಾರೆ. ಈ ಕುರಿತಾಗಿ ಲಿವರ್ ಟ್ರಾನ್ಸ್‌ಪ್ಲಾಂಟ್ ತಜ್ಞ ಡಾ. ಸೋನಲ್ ಅಸ್ಥಾನಾ ಅವರು ಪ್ರತಿಕ್ರಿಯಿಸಿದ್ದು, ‘ಇದು ಅತ್ಯಂತ ಗಂಭೀರ ಮತ್ತು ಮಹತ್ವದ ವಿಷಯ. ಪ್ರತಿವರ್ಷ ಸುಮಾರು ಐದು ಲಕ್ಷ ಭಾರತೀಯರು ಕೊನೆ ಹಂತದಲ್ಲಿ ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಹೀಗಿರುವಾಗ ಅಂಗಾಂಗ ದಾನ ಒಂದೇ ಜೀವ ಉಳಿಸಲು ಪರಿಹಾರವಾಗಬಹುದು. ನಮ್ಮ ದೇಶದ ಜನಸಂಖ್ಯೆ ಅಪಾರವಾಗಿದ್ದರೂ, ಶೇಕಡಾ ಒಂದು ಪ್ರತಿಶತಕ್ಕೂ ಕಡಿಮೆ ಜನರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ವಾಸ್ತವವಾಗಿ ವರ್ಷಕ್ಕೆ ದಾನಿಗಳ ಸಂಖ್ಯೆ 1500ಕ್ಕೂ ಕಡಿಮೆಯಾಗಿದೆ ಎಂದಿದ್ದಾರೆ. ದೇಶದ ಪ್ರತಿಯೊಂದು ಮೂಲೆಗೂ ಅಂಗಾಂಗ ದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಚಳವಳಿ ಅಗತ್ಯವಿದೆ. ಈ ಮಹತ್ವದ ಸಂದೇಶದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ ಮೋದಿ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಇನ್ನಷ್ಟು ಸಹೋದರ ಸಹೋದರಿಯರು ಅಂಗಾಂಗ ದಾನ ಮಾಡಲು ಮುಂದೆ ಬರಲಿ ಎಂಬುದು ನನ್ನ ಆಸೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *