ಈ ವಿಚಾರದಲ್ಲಿ ಬುಮ್ರಾ, ವೆಸ್ಟ್ ಇಂಡೀಸ್ನ ಸ್ಯಾಮ್ಯುಯೆಲ್ ಬದ್ರಿ, ಶ್ರೀಲಂಕಾದ ಅಜಂತಾ ಮೆಂಡಿಸ್ ಮತ್ತು ನ್ಯೂಜಿಲೆಂಡ್ನ ಟಿಮ್ ಸೌಥಿ ಅವರ ದಾಖಲೆಗಳನ್ನು ಮುರಿದರು. ಟಿ20 ವಿಶ್ವಕಪ್ ಪಂದ್ಯದಲ್ಲಿ 4 ಓವರ್ಗಳ ಪೂರ್ಣ ಕೋಟಾ ಬೌಲಿಂಗ್ ಮಾಡಿದ ನಂತರ ಇವರೆಲ್ಲರೂ ತಲಾ ನಾಲ್ಕು ಬಾರಿ 15 ಅಥವಾ ಅದಕ್ಕಿಂತ ಕಡಿಮೆ ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಆದರೀಗ ಬುಮ್ರಾ ಐದನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.