ಗದಗ, ಫೆಬ್ರವರಿ 23: ಗದಗ ಜಿಲ್ಲೆಯ ಶಿರಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಿ ವಿತರಣೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಶ್ನಿಸಿದವರಿಗೆ ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗೋಪಾಲ್ ರಾಜ್ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಆಡಳಿತಾಧಿಕಾರಿ ನಡೆಗೆ ಕಿಡಿ ಕಾರಿದ್ದಾರೆ. ಶಶಿ ಪಾಟೀಲ್, ಪ್ರಕಾಶ್ ಎಂಬುವರ ವಿರುದ್ಧ ಡಾ.ಗೋಪಾಲ್ ರಾಜ್ ದೂರು ಸಹ ನೀಡಿದ್ದು, ಸದ್ಯ ಪ್ರತಿ ದೂರು ನೀಡಲು ರೋಗಿಗಳು ಮತ್ತು ಸಂಬಂಧಿಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.