Headlines

ನಿಮ್ಮ ಮನೆಯಂಗಳಕ್ಕೆ ಹಾವುಗಳು ಬರಬಾರದೆಂದರೆ, ಈ ಗಿಡವನ್ನು ನೆಡಿ – Kannada News | To keep snakes away from your home, plant Indian Snakeroot

ಬೇಸಿಗೆ ಕಾಲದಲ್ಲಿ ಹಾವುಗಳ (snakes) ಕಾಟ ಸಿಕ್ಕಾಪಟ್ಟೆ ಇರುತ್ತದೆ. ಬಿಸಿಲಿನ ತಾಪ ತಾಳಲಾರದೆ ಬಿಲದಿಂದ ಹೊರಬರುವ ಹಾವುಗಳು ತಂಪಾದ ಸ್ಥಳಗಳನ್ನು ಹುಡುಕುತ್ತಾ ಪೊದೆ, ಮನೆಯಂಗಳದಲ್ಲಿರುವ ಮರಗಿಡಗಳ ಬಳಿ ಬರುತ್ತವೆ. ಮನೆಯೊಳಗೆ ಸಹ ಪ್ರವೇಶಿಸುತ್ತವೆ. ಕೆಲವರ ಮನೆಗಳಲ್ಲಂತೂ ಬೇಸಿಗೆಯಲ್ಲಿ ಹಾವುಗಳ ಸಮಸ್ಯೆ ತೀರಾ ಸಾಮಾನ್ಯವಾಗಿರುತ್ತವೆ. ಇದು ಕಚ್ಚಿದರೆ ಏನಪ್ಪಾ ಗತಿ ಎಂದು ಹಲವರು ಹಾವುಗಳನ್ನು ಕಂಡರೆ ಭಯಪಟ್ಟುಕೊಳ್ಳುತ್ತಾರೆ. ಅದಕ್ಕಾಗಿ ತಮ್ಮನ್ನು ತಾವು ಹಾವುಗಳಿಂದ  ರಕ್ಷಿಸಿಕೊಳ್ಳಲು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಸರ್ಪಗಂಧದ ಗಿಡವನ್ನು ಮನೆ ಬಾಗಿಲಿನಲ್ಲಿ ನೆಡುವುದರಿಂದಲೂ ಹಾವುಗಳು ಮನೆ ಬಳಿ ಬಾರದಂತೆ ತಡೆಯಬಹುದು. ಈ ಒಂದು ಗಿಡ ಹಾವುಗಳು ಓಡಿಸಲು ತುಂಬಾನೇ ಪರಿಣಾಮಕಾರಿ. ಅದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹಾವುಗಳ ಕಾಟದಿಂದ ಮುಕ್ತಿ ಪಡೆಯಲು ಸರ್ಪಗಂಧ ಸಸ್ಯ ನೆಡಿ:

ಹಾವುಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಂಗಳದಲ್ಲಿ ಸರ್ಪಗಂಧ ಗಿಡವನ್ನು ನೆಡುವುದು ತುಂಬಾನೇ ಒಳ್ಳೆಯದು.  ಅಪಾರ ಪ್ರಮಾಣದ ಔಷಧೀಯ ಗುಣಗಳನ್ನು ಹೊಂದಿರುವ ಈ ಗಿಡ ಮೆಣಸು, ಹಸಿರು ಮೆಣಸಿನಕಾಯಿ ಮಾದರಿಯ ಕಟುವಾದ ವಾಸನೆಯನ್ನು ಹೊರಸೂಸುತ್ತವೆ,  ಈ ವಾಸನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುತ್ತದೆ. ಇದನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾವುಗಳಿಗೆ ಮಾತ್ರವಲ್ಲ ಈ ಸಸ್ಯ ಎಲ್ಲಾ ಸರೀಸೃಪಗಳ ಶತ್ರು. ಆದ್ದರಿಂದ ಹಾವುಗಳು ಬರಬಾರದೆಂದರೆ ಮನೆ ಸುತ್ತಮುತ್ತಲೂ ಸರ್ಪಗಂಧದ ಸಸ್ಯವನ್ನು ನೆಡಿ.

ಇದನ್ನೂ ಓದಿ: ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವ ತಪ್ಪನ್ನು ಮಾಡಲೇಬೇಡಿ

ಇದಲ್ಲದೆ ಸರ್ಪಗಂಧ ಸಸ್ಯದ ಬೇರುಗಳನ್ನು ಮನೆಯ ಮುಂದೆ ಇಟ್ಟರೆ ಅಥವಾ ಕಿಟಕಿ, ಬಾಗಿಲುಗಳ ಬಳಿ ಕಟ್ಟಿದರೆ, ಹಾವುಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಈ ಸಸ್ಯದ ಬೇರುಗಳಿಂದ ಹೊರಹೊಮ್ಮುವ ಬಲವಾದ ವಾಸನೆಯು ಹಾವುಗಳು ಬರುವುದನ್ನು ತಡೆಯುತ್ತದೆ. ಜೊತೆಗೆ ಸರ್ಪಗಂಧದ ಬೀಜಗಳು ಸಹ ಹಾವುಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ಈ ಬೀಜಗಳು ಆಲ್ಕಲಾಯ್ಡ್‌ಗಳು, ರೆಸರ್ಪೈನ್, ಸರ್ಪೆಂಟೈನ್ ಮತ್ತು ಅಜ್ಮಲೈಸಿನ್ ನಂತಹ ಔಷಧೀಯ ಗುಣಗಳನ್ನು ಹಾಗೂ ಬಲವಾದ ವಾಸನೆಯನ್ನು ಹೊಂದಿದ್ದು, ಇವು ಹಾವುಗಳು ಬಾರದಂತೆ ತಡೆಯುತ್ತವೆ.

ಸರ್ಪಗಂಧ ಸಸ್ಯ ಮಾತ್ರವಲ್ಲ ಚೆಂಡುಹೂವಿನ ಗಿಡ,  ತುಳಸಿ ಗಿಡ, ಲೆಮನ್‌ ಗ್ರಾಸ್‌ ಸಸ್ಯಗಳನ್ನು ನೆಡುವ ಮೂಲಕವೂ ಹಾವುಗಳು ಮನೆ ಸುತ್ತಮುತ್ತ ಸುಳಿಯದಂತೆ ನೋಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *