ಬ್ರೇಕಪ್ ಎಂಬುದು ಎಂಥವರ ಬಾಳಲ್ಲೂ ಬರಸಿಡಿಲಿನಂತೆ ಎರಗಿ ಬಿಡುತ್ತೆ, ಇಷ್ಟು ದಿನ ಜತೆಗಿದ್ದವರು, ತಮ್ಮ ನೋವು, ನಲಿವಿನಲ್ಲಿ ನಮ್ಮೊಂದಿಗಿದ್ದವರು, ಏನೇ ಸಣ್ಣ ಪುಟ್ಟ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದವರು ಜತೆಗಿಲ್ಲವೆಂದಾದಾಗ ಏನೂ ಬೇಡ ಎನಿಸುವುದು ಸಹಜ. ಹಾಗೆಯೇ ಇಲ್ಲೊಬ್ಬ ಯುವಕ ಬ್ರೇಕಪ್ ನೋವಿನಲ್ಲಿ ಊಟ-ತಿಂಡಿ ಬಿಟ್ಟು ಕೂತಿದ್ದ, ಮಗನ ಸ್ಥಿತಿಯನ್ನು ನೋಡಲಾಗದೆ ತಂದೆ ಮಗನನ್ನು ಕರೆದುಕೊಂಡು ಹುಡುಗಿ ಬಳಿ ಹೋಗಿ ಆಕೆಗೆ ಕೈಮುಗಿದು ತನ್ನ ಮಗನ ಜೀವನಕ್ಕೆ ವಾಪಸಾಗುವಂತೆ ಪರಿಪರಿಯಾಗಿ ಬೇಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅದು ತಂದೆಯೊಬ್ಬ ಮಕ್ಕಳ ಮೇಲಿಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಈ ವಿಡಿಯೋವನ್ನು ರಮೇಶ್ ತಿವಾರಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ