ಶಿವಮೊಗ್ಗ, ಫೆಬ್ರವರಿ 26: ಆಕಾಶವಾಣಿ ಭದ್ರಾವತಿ ಕೇಂದ್ರದ ಎಫ್ಎಂ (FM) ಪ್ರಸಾರ ಕೇಂದ್ರ ಮೇಲ್ದರ್ಜೆಗೇರಿಸಲಾಗಿದೆ. 10 ಕಿಲೋವ್ಯಾಟ್ ಎಫ್ಎಂ ಟ್ರಾನ್ಸ್‌ಮೀಟರ್ ಲೋಕಾರ್ಪಣೆಗೊಳಿಸಿರುವುದು ದಶಕಗಳ ಕನಸು ನನಸಾದಂತಾಗಿದೆ. ಮಲೆನಾಡು ಎಫ್ಎಂ ಎಂದೇ ಖ್ಯಾತಿ ಪಡೆದಿದ್ದ ಆಕಾಶವಾಣಿ ಭದ್ರಾವತಿ ಕೇಂದ್ರ 1 ಕಿಲೋವ್ಯಾಟ್‌ದಿಂದ 10 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿರುವ ಈ ಎಫ್ಎಂ ಕೇಂದ್ರದ ಬಾನುಲಿ ಈಗ ಎಲ್ಲೆಡೆ ಕನ್ನಡಿರಿಗೆ ಪಸರಿಸುವಂತಾಗಿದೆ.
10 ಕಿಲೋವ್ಯಾಟ್ ಎಫ್.ಎಂ. ಟ್ರಾನ್ಸ್‌ಮೀಟರ್ ಲೋಕಾರ್ಪಣೆ
ಮಲೆನಾಡಿಗರ ಬಹು ದಶಕಗಳ ಕನಸು ನನಸಾದಂತಾಗಿದೆ. ಭದ್ರಾವತಿ ಆಕಾಶವಾಣಿ ಭದ್ರಾವತಿ ರೇಡಿಯೋ ಬಾನುಲಿ ಈಗ ಎಲ್ಲೆಡೆ ಪಸರಿಸುವಂತಾಗಿದೆ. ಇದು ಮಲೆನಾಡಿನ ರೇಡಿಯೋ ಕೇಳುಗರಿಗೆ ಹರ್ಷವನ್ನುಂಟು ಮಾಡಿದೆ. ಅದರಂತೆ ಇಂದು 10 ಕಿಲೋವ್ಯಾಟ್ ಎಫ್.ಎಂ. ಟ್ರಾನ್ಸ್‌ಮೀಟರ್ ಲೋಕಾರ್ಪಣೆ ಮಾಡಲಾಯಿತು.
ಇದನ್ನೂ ಓದಿ: ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಆತಂಕ
ಶಿವಮೊಗ್ಗದ ವಿದ್ಯಾನಗರದಲ್ಲಿರುವ ನೂತನ ಎಫ್.ಎಂ. ಕೇಂದ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ಸಚಿವ ಡಾ. ಎಲ್ ಮುರುಗನ್ ಲೋಕಾರ್ಪಣೆಗೊಳಿಸಿದರು. ಮಲೆನಾಡು ಎಫ್.ಎಂ. ಎಂದೇ ಖ್ಯಾತಿ ಪಡೆದಿದ್ದ ಆಕಾಶವಾಣಿ ಭದ್ರಾವತಿ ಕೇಂದ್ರ ಈಗ 1 ಕಿಲೋವ್ಯಾಟ್‌ದಿಂದ 10 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದ್ದು, ಶಿವಮೊಗ್ಗದಲ್ಲಿ ಡಿ.ಡಿ. ಚಂದನದ ಟವರ್ನ್ನು ಇದೀಗ ಎಫ್.ಎಂ. ಕೇಂದ್ರಕ್ಕೆ ಬಳಸಿಕೊಂಡು ಮೇಲ್ದರ್ಜೆಗೇರಿಸಲಾಗಿದೆ.
ಅಲ್ಲದೇ, ಶಿವಮೊಗ್ಗದ ಪಾರ್ಕ್ಗಳಲ್ಲಿ ಎಫ್.ಎಂ. ರೇಡಿಯೋ ಅಳವಡಿಕೆ ಕಾರ್ಯ ಪೈಲೆಟ್ ಪ್ರಾಜೆಕ್ಟ್ ಆಗಿ ತೆಗೆದುಕೊಳ್ಳಲಾಗುವುದೆಂದು ಕೇಂದ್ರ ಸಚಿವರು ಘೋಷಣೆ ಮಾಡಿದ್ದು, ಶಿವಮೊಗ್ಗ ಬಳಿಕ ಇಡೀ ದೇಶದಲ್ಲಿ ಈ ಯೋಜನೆ ಅಳವಡಿಸಲಾಗುವುದು. ನಮ್ಮ ಇಲಾಖೆ ಮೂಲಕವೇ ಪಾರ್ಕ್ಗಳಲ್ಲಿ ಎಫ್.ಎಂ. ರೇಡಿಯೋ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವರು ಘೋಷಿಸಿದ್ದಾರೆ.
ಎಲ್ಲೆಲ್ಲಿ ಪ್ರಸಾರ?
ಅದರಂತೆ, ಎಫ್.ಎಂ. ಪ್ರಸಾರ ಕೇಂದ್ರ ಮೇಲ್ದರ್ಜೆಗೇರಿಸುವುದರಿಂದ ಪ್ರಯೋಜನ ಮತ್ತು ಅನುಕೂಲಗಳು ಬಹಳಷ್ಟಿದ್ದು, ಪ್ರಸ್ತುತ ಭದ್ರಾವತಿಯಲ್ಲಿ ಇರುವ 1 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಟ್ರಾನ್ಸ್‌ಮೀಟರ್ ವ್ಯಾಪ್ತಿ 100 ಮೀಟರ್ ಇದ್ದು, ನೂತನ ಅಧಿಕ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಕೆಯಿಂದ ವ್ಯಾಪ್ತಿ 150 ಮೀಟರ್ ಎತ್ತರದಲ್ಲಿ ಬರುತ್ತದೆ. ಅಂದರೆ ಪ್ರಸಾರ ಸಾಮರ್ಥ್ಯ 10 ಪಟ್ಟು ಹೆಚ್ಚಾಗಲಿದೆ. ಈಗ ಪ್ರಸಾರವಾಗುತ್ತಿರುವ ವ್ಯಾಪ್ತಿಯು ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಇನ್ನು ಮುಂದೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ, ಚಿತ್ರದುರ್ಗ ವ್ಯಾಪ್ತಿ ಮತ್ತು ಹಾಸನ, ಉಡುಪಿ, ಉತ್ತರ ಕನ್ನಡ ಹಾಗೂ ತುಮಕೂರು ಜಿಲ್ಲೆಯ ಕೆಲ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೂಡ ಪ್ರಸಾರ ಲಭ್ಯವಾಗಲಿದೆ.
ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ: ಒಂದೇ ದಿನ 36ಕ್ಕೂ ಅಧಿಕ ಮಂದಿ ಮೇಲೆ ದಾಳಿ
ಒಟ್ಟಾರೆ ಎಫ್.ಎಂ. ಪ್ರಸಾರ ಸೇವೆ ಆರಂಭದಿಂದ ಸಾಮಾನ್ಯ ಕೀಪ್ಯಾಡ್ ಸೇರಿದಂತೆ ಅಂಡ್ರಾಯ್ಡ್ ಮೊಬೈಲ್ನಲ್ಲೂ ನ್ಯೂಸ್ ಆನ್ ಏರ್‌ಆಪ್‌ನಲ್ಲಿ ಜಗತ್ತಿನಾದ್ಯಂತ ಕೇಳಬಹುದಾಗಿದೆ. ಇದಲ್ಲದೆ ಕಾರ್ ರೇಡಿಯೋದಲ್ಲಿ ಸುತ್ತಮುತ್ತಲಿನ 80-100 ಕಿಲೋಮೀಟರ್ವರೆಗೆ ಪ್ರಸಾರದ ವ್ಯಾಪ್ತಿ ಲಭ್ಯವಾಗಿರುವುದು ಮಲೆನಾಡಿಗರಿಗೆ ಸಂತಸದ ವಿಷಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.