Headlines

ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ‘ಪಂಚ್’ ಕೋತಿಯನ್ನು ಬಳಸಿಕೊಂಡ ಮುಂಬೈ ಪೊಲೀಸರು – Kannada News | Mumbai Police Turns Viral Monkey Meme Into Helpline Awareness Drive

ಮುಂಬೈ, ಫೆಬ್ರವರಿ 27: ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು.

ಅದು ಹುಟ್ಟುವಾಗ 600 ಗ್ರಾಂ ಇದ್ದ ಕಾರಣ ಅದರ ತಾಯಿ ಅದನ್ನು ಸಾಕಲಾಗದೆ ಬಿಟ್ಟು ಹೋಗಿತ್ತು. ಅದಾದ ಬಳಿಕ ಅದು ಒಬ್ಬಂಟಿಯಾಗಿತ್ತು. ಅದು ಪಟ್ಟ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಇದೇ ಬೆಸ್ಟ್ ಎಂದುಕೊಂಡಿದ್ದಾರೆ.

ಪೊಲೀಸರು ಇತ್ತೀಚಿನ ಇನ್​ಸ್ಟಾಗ್ರಾಂ ಅಭಿಯಾನದಲ್ಲಿ ಕೆಟ್ಟದ್ದನ್ನು, ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ ಎನ್ನುವ ಮೂರು ಮಂಗಗಳ ದೃಶ್ಯಗಳನ್ನು ಹಂಚಿಕೊಂಡಿದ್ದರು. ಈಗ 112 ಸಹಾಯವಾಣಿಗೆ ಪಂಚ್ ಕೋತಿಯನ್ನು ಬಳಸಿಕೊಂಡಿದ್ದಾರೆ.
ಅದಕ್ಕೆ ಕೆಟ್ಟದನ್ನು ಮಾಡಬೇಡಿ ಎನ್ನುವ ಶೀರ್ಷಿಕೆಯನ್ನು ಕೊಡಲಾಗಿದೆ. ಈ ಪೋಸ್ಟ್​ ನಾಗರಿಕರಿಗೆ ಜವಾಬ್ದಾರಿಯುತವಾಗಿ ವರ್ತಿಸುವಂತೆ ಕರೆ ನೀಡುತ್ತದೆ.

ಮತ್ತಷ್ಟು ಓದಿ: Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ

ಪಂಚ್​​ ಇತರೆ ಮಂಗಗಳು ಬೆದರಿಸುವಾಗ ತೊಂದರೆಯನ್ನು ಎದುರಿಸಿತ್ತು. ಆದರೆ ಆರೈಕೆದಾರರು ಇದನ್ನು ಅದರ ನೈಸರ್ಗಿಕ ಸಾಮಾಜಿಕ ಕಲಿಕೆಯ ಭಾಗವೆಂದು ಬಣ್ಣಿಸಿದ್ದಾರೆ. ಪಂಚ್ ಕ್ರಮೇಣ ಹೊಂದಿಕೊಳ್ಳುತ್ತಿದೆ ಮತ್ತು ಸ್ವತಂತ್ರವಾಗುತ್ತಿದೆ ಎಂದು ಹೇಳಿದ್ದಾರೆ.

ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು.

ದೆಹಲಿ ಪೊಲೀಸರು ಸಾರ್ವಜನಿಕ ಜಾಗೃತಿ ಮೂಡಿಸಲು ಪಂಚ್‌ನ ಚಿತ್ರವನ್ನು ಬಳಸಿಕೊಂಡಿದ್ದರು. ಪೋಸ್ಟ್​ನಲ್ಲಿ ಸಮವಸ್ತ್ರ ಧರಿಸಿದ ಅಧಿಕಾರಿಯೊಬ್ಬರು ಯುವ ಕೋತಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಬಹುದು.

112 ಸಹಾಯವಾಣಿ ಭಾರತದ ಏಕೈಕ ತುರ್ತು ಪ್ರತಿಕ್ರಿಯೆ ಸಂಖ್ಯೆಯಾಗಿದ್ದು, ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸಲು ರಚಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *