Headlines

ಮೂರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ, ಎಐಎಡಿಎಂಕೆ ಉಚ್ಚಾಟಿತ ನಾಯಕ ಪನ್ನೀರ್​ಸೆಲ್ವಂ ಡಿಎಂಕೆ ಸೇರ್ಪಡೆ – Kannada News | Tamil Nadu: Former CM Panneerselvam Aligns With MK Stalin’s DMK

ಚೆನ್ನೈ,ಫೆಬ್ರವರಿ 27: ತಮಿಳುನಾಡು ವಿಧಾನಸಭಾ ಚುನಾವಣೆ ಸನ್ನಿಹಿವಾಗುತ್ತಿದ್ದಂತೆ, ರಾಜಕೀಯದಲ್ಲಿ ಪ್ರಮಖ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡಿನಲ್ಲಿ ಮೂರುಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಪನ್ನೀರ್​​ಸೆಲ್ವಂ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ. ಅವರು ಎಐಡಿಎಂಕೆಯಂದ ಉಚ್ಚಾಟನೆಗೊಂಡಿದ್ದರು. ಪನ್ನೀರ್‌ಸೆಲ್ವಂ ಅವರು ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಸದಸ್ಯತ್ವ ಪಡೆದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಡಿಎಂಕೆ ಅವಕಾಶ ನೀಡಬಹುದು. 2021 ರಲ್ಲಿ ಅವರು ಗೆದ್ದಿದ್ದ ಕ್ಷೇತ್ರವಾದ ಬೋಡಿನಾಯಕನೂರಿನಿಂದ ಡಿಎಂಕೆ ಅವರನ್ನು ಕಣಕ್ಕಿಳಿಸಬಹುದು ಎಂದು ಹೇಳಲಾಗುತ್ತಿದೆ.

ಪನ್ನೀರ್‌ಸೆಲ್ವಂ ಅವರ ಬೆಂಬಲಿಗರಾದ ಆರ್. ವೈತಿಲಿಂಗಂ ಮತ್ತು ಪಾಲ್ ಮನೋಜ್ ಪಾಂಡಿಯನ್ ಇತ್ತೀಚೆಗೆ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಡಿಎಂಕೆ ಸೇರ್ಪಡೆಗೊಂಡಿದ್ದರು. ಪನ್ನೀರ್‌ಸೆಲ್ವಂ ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಜಯಲಲಿತಾ ಅವರ ಅತ್ಯಂತ ವಿಶ್ವಾಸಾರ್ಹ ಸಲಹೆಗಾರ ಎಂದು ಪರಿಗಣಿಸಲಾಗಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *