Headlines

Chanakya Niti: ಮನೆಯಲ್ಲಿ ಹಣ ಉಳಿಯದಿರಲು ಕಾರಣವೇ ಈ ತಪ್ಪುಗಳು – Kannada News | Chanakya Niti: Chanakya Says These mistakes are the reason why money is not stay at home

ಹಣ (money) ಗಳಿಸಬೇಕು, ಶ್ರೀಮಂತಿಕೆ ಗಳಿಸಬೇಕು, ಒಂದೊಳ್ಳೆ ಜೀವನ ನಡೆಸಬೇಕು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರೂ ಸಹ ಕಷ್ಟಪಟ್ಟು ಹಗಲಿರುಳು ದುಡಿಯುತ್ತಾರೆ. ಹೀಗೆ ದುಡಿದು ಎಷ್ಟೇ ಹಣ ಸಂಪಾದಿಸಿದರೂ ಸಹ ಹಲವರ ಕೈಯಲ್ಲಿ ಹಣ ಎನ್ನುವುದು ನಿಲ್ಲುವುದೇ ಇಲ್ಲ. ಹಣ ಹೇಗಾದ್ರೂ ಖರ್ಚಾಗುತ್ತಿರುತ್ತದೆ. ಈ ರೀತಿ ಕೈಯಲ್ಲಿ ಹಣ ಉಳಿಯದಿರಲು ಕಾರಣವೇ ಒಂದಷ್ಟು ತಪ್ಪುಗಳು ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಆ ತಪ್ಪಗಳು ಸರಿಪಡಿಸಿದರೆ ಖಂಡಿತವಾಗಿ ನಿಮ್ಮ ಕೈಯಲ್ಲಿ ಹಣ ಉಳಿಯುತ್ತೆ ಎಂದಿದ್ದಾರೆ. ಹಾಗಿದ್ರೆ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಹಣ ಉಳಿಯದಿರಲು ಕಾರಣವೇ ಈ ತಪ್ಪುಗಳು:

ಉಳಿತಾಯ ಮಾಡದಿರುವುದು: ಅನೇಕ ಜನರು ಹಣ ಸಂಪಾದನೆ ಮಾಡುತ್ತಾರೆ, ಆ ಹಣವನ್ನು ತಕ್ಷಣವೇ ಖರ್ಚು ಮಾಡಿಬಿಡುತ್ತಾರೆ, ಏನಾದ್ರೂ ಅನಗತ್ಯ ವಸ್ತುಗಳನ್ನು ಖರೀದಿ ಮಾಡಿ ದುಡ್ಡನ್ನೆಲ್ಲಾ ವೇಸ್ಟ್‌ ಮಾಡುತ್ತಾರೆ. ಪರಿಣಾಮವಾಗಿ, ಅವರಿಗೆ ಹಣದ ಅಗತ್ಯವಿದ್ದಾಗ ಅವರ ಬಳಿ ಹಣವಿರುವುದಿಲ್ಲ. ಹಾಗಾಗಿ ಸಂಪಾದನೆಯ ಒಂದಷ್ಟು ಭಾಗವನ್ನು ಉಳಿತಾಯ ಮಾಡಬೇಕು.

ದಾನ ಧರ್ಮ ಮಾಡದಿರುವುದು: ಚಾಣಕ್ಯ ನೀತಿಯು ದಾನ ನೀಡುವುದನ್ನು ಅತ್ಯಂತ ಪುಣ್ಯ ಕಾರ್ಯವೆಂದು ವಿವರಿಸುತ್ತದೆ. ದಾನ ಮಾಡುವವರನ್ನು ಲಕ್ಷ್ಮಿ ದೇವಿ ಯಾವಾಗಲೂ ಮೆಚ್ಚುತ್ತಾಳೆ. ಆಚಾರ್ಯ ಚಾಣಕ್ಯರ ಪ್ರಕಾರ, ದಾನ ಮಾಡದ ಯಾರಾದರೂ ಯಾವಾಗಲೂ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಾರೆ. ಅಂತಹ ಜನರು ತಮ್ಮ ಜೀವನದಲ್ಲಿ ಯಾವಾಗಲೂ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಾರೆ.

ಮನೆಯಲ್ಲಿ ನಕಾರಾತ್ಮಕ ವಾತಾವರಣ: ನೀವು ಎಷ್ಟೇ ಹಣ ಸಂಪಾದಿಸಿದರೂ, ಮನೆಯಲ್ಲಿ ಶಾಂತಿ ಇಲ್ಲದಿದ್ದರೆ, ಅದು ವ್ಯರ್ಥ. ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುವುದಿಲ್ಲ ಜೊತೆಗೆ  ಹಣವೂ ಉಳಿಯುವುದಿಲ್ಲ ಎಂದಿದ್ದಾರೆ ಚಾಣಕ್ಯ.

ಪ್ರದರ್ಶನ: ಕೆಲವರು ಇತರರಿಗೆ ತೋರಿಸಿಕೊಳ್ಳಲು ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಕೇವಲ ಪ್ರದರ್ಶನಕ್ಕಾಗಿ ಬದುಕುವವರು ತಮ್ಮ ಸಂಪತ್ತನ್ನು ಬೇಗನೆ ಕಳೆದುಕೊಳ್ಳುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ. ಆದ್ದರಿಂದ ಸರಳವಾಗಿ ಬದುಕುವುದು ಮತ್ತು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಉತ್ತಮ.

ಇದನ್ನೂ ಓದಿ: ಅಭ್ಯಾಸಗಳು ಸಮಾಜದಲ್ಲಿ ನಿಮ್ಮ ಗೌರವವನ್ನೇ ಹಾಳುಮಾಡಿಬಿಡುತ್ತದೆ

ಹಣಕ್ಕೆ ಅಗೌರವ ತೋರುವುದು: ಕೆಲವರು ಹಣವನ್ನು ಗೌರವಿಸುವುದಿಲ್ಲ. ಅವರು ಅದನ್ನು ಅಜಾಗರೂಕತೆಯಿಂದ ಪೋಲು ಮಾಡುತ್ತಾರೆ, ಇದರಿಂದಾಗಿ ಎಷ್ಟೇ ಸಂಪಾದನೆ ಮಾಡಿದರೂ ಹಣ ಉಳಿಯುವುದಿಲ್ಲ.

ಹೂಡಿಕೆ ಮಾಡದಿರುವುದು: ಚಾಣಕ್ಯನ ಪ್ರಕಾರ,  ಹಣವನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದು ತಿಳಿದಿರಬೇಕು. ಇದರಿಂದ ಮಾತ್ರ ಹಣ ಉಳಿಯುತ್ತದೆ. ಕೆಲವರು ಹಣವನ್ನು ಉಳಿತಾಯ ಮಾಡುತ್ತಾರೆ ಆದ್ರೆ ಸರಿಯಾಗಿ ಹೂಡಿಕೆ ಮಾಡುವುದಿಲ್ಲ. ಹೀಗೆ ಹಣವನ್ನು ಸರಿಯಾಗಿ ಬಳಸದಿದ್ದರೆ ಅದರ ಮೌಲ್ಯ ಕಳೆದುಹೋಗುತ್ತದೆ. ಹಾಗಾಗಿ ಹಣವನ್ನು ಸರಿಯಾಗಿ ಹೂಡಿಕೆ ಮಾಡಲು ಕಲಿಯಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *