T20 World Cup 2026: ಟಿ20 ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ್ ತಂಡದ ಆಟಗಾರರಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) 50 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಹಿನ್ನಲೆ ಆಟಗಾರರಿಗೆ ದಂಡದ ಶಿಕ್ಷೆ ವಿಧಿಸಿ ಬಿಸಿ ಮುಟ್ಟಿಸಲು ಪಿಸಿಬಿ ಮುಂದಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ್ ತಂಡವು ಈ ಬಾರಿಯ ವಿಶ್ವಕಪ್ನಲ್ಲಿ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಈ ವೇಳೆ ಗೆದ್ದಿರುವುದು ಕೇವಲ 4 ಮ್ಯಾಚ್ಗಳಲ್ಲಿ ಮಾತ್ರ. ಅಲ್ಲದೆ ಸೂಪರ್-8 ಸುತ್ತಿನಲ್ಲೇ ತಂಡ ಹೊರಬಿದ್ದಿದೆ. ಈ ಹೀನಾಯ ಪ್ರದರ್ಶನದ ಹಿನ್ನಲೆ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಅಷ್ಟೇ ಅಲ್ಲದೆ ಆಟಗಾರರಿಗೆ ನೀಡಲಾಗುತ್ತಿದ್ದ ಹೆಚ್ಚಿನ ಸವಲತ್ತುಗಳನ್ನು ಕಡಿತಗೊಳಿಸಿ, ಇನ್ನು ಮುಂದೆ ಕೇವಲ ಮೈದಾನದ ಪ್ರದರ್ಶನಕ್ಕೆ ಅನುಗುಣವಾಗಿ ಮಾತ್ರ ಹಣಕಾಸಿನ ಲಾಭಗಳನ್ನು ನೀಡಲಾಗುವುದು ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಎಚ್ಚರಿಸಿದ್ದಾರೆ.
ಕಳಪೆ ಫಾರ್ಮ್ನಿಂದಾಗಿ 2025-26ರ ಕೇಂದ್ರ ಗುತ್ತಿಗೆಯಲ್ಲಿ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಝ್ವಾನ್ ಅವರಂತಹ ಹಿರಿಯ ಆಟಗಾರರನ್ನು ‘A’ ಕೆಟಗರಿಯಿಂದ ‘B’ ಕೆಟಗರಿಗೆ ಇಳಿಸಲಾಗಿದೆ. ಹಾಗೆಯೇ ಕೆಲಸದ ಒತ್ತಡ ನಿರ್ವಹಣೆಗಾಗಿ ವಿದೇಶಿ ಲೀಗ್ಗಳಲ್ಲಿ ಆಡಲು ನೀಡಲಾಗುವ ಎನ್ಒಸಿ (NOC) ಗಳ ಮೇಲೂ ಮಂಡಳಿಯು ನಿರ್ಬಂಧ ಹೇರಿದೆ.
ಇದಾಗ್ಯೂ ಪಾಕ್ ತಂಡ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನಲೆ ಆಟಗಾರರಿಗೆ ದಂಡ ವಿಧಿಸಲು ಪಿಸಿಬಿ ನಿರ್ಧರಿಸಿದೆ. ಈ ದಂಡದ ನಿರ್ಧಾರವು ಪಾಕಿಸ್ತಾನ್ ತಂಡದ ಮುಂದಿನ ಸರಣಿಗಳ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ನಾಕೌಟ್ನಲ್ಲಿ ನಾಲ್ಕು ತಂಡಗಳು: ಇಲ್ಲಿದೆ ವೇಳಾಪಟ್ಟಿ