ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಇದು ಅಮೆರಿಕ ಮೂಲದ ಸ್ಟಾರ್ಟ್ಅಪ್ ಕಂಪನಿ(Company) ಕರ್ಸರ್ನ ನಿಯಮ. ಸಾಮಾನ್ಯವಾಗಿ ವಿದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನಕೊಡುತ್ತಾರೆ. ಆದರೂ ಕಚೇರಿಯೊಳಗೆ ಶೂ ಧರಿಸದೆ ಬರುವ ನಿಯಮವನ್ನು ಯಾಕೆ ಜಾರಿಗೆ ತಂದಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಅದಕ್ಕೆ ಇಲ್ಲಿದೆ ಉತ್ತರ.
ಕಂಪನಿಯ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಅತಿಥಿಗಳು ಯಾರೇ ಅಗಿರಲಿ, ಶೂ ಧರಿಸಿ ಒಳಗೆ ಹೋಗುವಂತಿಲ್ಲ, ಕಚೇರಿ ಹೊರಗೆ ಶೂ ತೆಗೆದಿಡಬೇಕು. ಕಚೇರಿಯ ಒಳಗೆ ಸಾಕ್ಸ್ ಅಥವಾ ಒಳಗೆ ಇಟ್ಟಿರುವ ಚಪ್ಪಲಿಗಳನ್ನು ಧರಿಸಿಯೇ ನಡೆಯಬೇಕು. ಈ ನೀತಿಯು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಗಮನ ಸೆಳೆದ ಕಾರಣ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸಿಬ್ಬಂದಿಗೆ ಇದು ಆಫೀಸ್ ಅಲ್ಲ ಮನೆಯ ವಾತಾವರಣ ಸೃಷ್ಟಿಸಬೇಕೆಂಬುದು ಉದ್ದೇಶ.
ಕರ್ಸರ್ನ ಬೆನ್ ಲ್ಯಾಂಗ್ ಎಂಬ ಉದ್ಯೋಗಿ ಕೂಡ ಚಿತ್ರಗಳನ್ನು ಹಂಚಿಕೊಂಡಿದ್ದು, ತಾನು ಅಲ್ಲಿ ಕೆಲಸ ಮಾಡಿರುವುದಾಗಿ, ಅಲ್ಲಿ ಉದ್ಯೋಗಿಗಳು ಕಚೇರಿ ಆವರಣದೊಳಗೆ ನಿಜವಾಗಿಯೂ ಶೂಗಳನ್ನು ಧರಿಸುತ್ತಿರಲಿಲ್ಲ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಅಂತಹ ಅಭ್ಯಾಸಗಳು ಉದ್ಯೋಗಿಗಳಿಗೆ ಆರಾಮದಾಯಕ ವಾತಾವರಣವನ್ನು ಒದಗಿಸುವ ಮೂಲಕ ಅವರ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಕಂಪನಿಯ ವಾದ.
ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದು, ಇದು ನನಗೆ ಎಂದಿಗೂ ವಿಚಿತ್ರವೆಂದು ಅನಿಸುತ್ತಿಲ್ಲ, ಇನ್ನೊಬ್ಬರು ಕಮೆಂಟ್ ಮಾಡಿ, ಪಾದರಕ್ಷೆಗಳನ್ನು ಹೊರಗೆ ಬಿಡುವ ನಿಯಮದ ಬಗ್ಗೆ ಅಭ್ಯಂತರವಿಲ್ಲ. ಆದರೆ ಚಿತ್ರದಲ್ಲಿ ತೋರಿಸಿರುವಂತೆ ಇಡಬಾರದು ಎಂದಿದ್ದಾರೆ.
ಮತ್ತಷ್ಟು ಓದಿ: ಅಮ್ಮನಿಗೆ ಭಯ, ಆದ್ರೆ ಅದು ನನ್ನ ಕನಸು: ಕೊನೆಗೂ ತಾಯಿಯನ್ನು ಆಕಾಶದಲ್ಲಿ ಹಾರಾಡಿಸಿದ ಮಗ
ಶೂ ಧರಿಸದಿರುವ ನೀತಿಯು ಉದ್ಯೋಗಿಗಳು, ಸಿಬ್ಬಂದಿ ಸದಸ್ಯರು ಮತ್ತು ಅತಿಥಿಗಳಿಗೆ ಮಾತ್ರ ಅನುಕೂಲಕರವಾಗಿಲ್ಲ, ಆದರೆ ಇದು ಸಾಕಷ್ಟು ಪ್ರಾಯೋಗಿಕವೂ ಆಗಿದೆ. AI ಸ್ಟಾರ್ಟ್ಅಪ್ನ ಸಂಸ್ಥಾಪಕ ಕೋವಲ್ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್ಗೆ ನೀಡಿದ ಸಂದರ್ಶನದಲ್ಲಿ, ಹವಾಮಾನ ಬದಲಾಗುತ್ತಿರುತ್ತದೆ. ಹಾಗೆಯೇ ಕೊಳಕನ್ನು ಮೆಟ್ಟಿಕೊಂಡು ಬರುತ್ತಾರೆ, ಹಾಗಾಗಿ ಕಚೇರಿಯ ಒಳಗಿನ ಸ್ವಚ್ಛತೆಯೂ ಕೂಡ ಪ್ರಮುಖವಾದದ್ದು ಎಂದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ