ಟಿವಿ9 ಲೈಫ್ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್ಪೋ
ಬೆಂಗಳೂರು, ಮಾರ್ಚ್ 2: ಪ್ರತೀ ವರ್ಷ ಸಾವಿರಾರು, ಲಕ್ಷಾಂತರ ಬೆಂಗಳೂರಿಗರನ್ನು ಸೆಳೆಯುತ್ತಾ ಬಂದಿರುವ ಮಹಾಮೇಳ ಈ ವರ್ಷ ಮತ್ತೆ ಸಿಲಿಕಾನ್ ಸಿಟ್ಟಿಗೆ ಮರಳಿದೆ. ಕರ್ನಾಟಕದ ಅಗ್ರಮಾನ್ಯ ಸುದ್ದಿ ವಾಹಿನಿ ಎನಿಸಿರುವ ಟಿವಿ9 ಕನ್ನಡ ವತಿಯಿಂದ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2026 ಮೇಳ (TV9 Kannada Lifestyle, Automobile & Furniture Expo 2026) ನಡೆಯಲಿದೆ. ಅರಮನೆ ಮೈದಾನದಲ್ಲಿ ಮಾರ್ಚ್ 6ರಿಂದ ಮೂರು ದಿನಗಳ ಕಾಲ ನಡೆಯುವ ಈ ಮೆಗಾ ಎಕ್ಸ್ಪೋದಲ್ಲಿ ಹೊಚ್ಚ ಹೊಸ ಫ್ಯಾಷನ್, ವಾಹನಗಳು, ಗೃಹೋಪಕರಣಗಳನ್ನು ಕಾಣಬಹುದು.
ಟಿವಿ9 ಕನ್ನಡ ಲೈಫ್ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್ಪೋದಲ್ಲಿ ನಿರೀಕ್ಷಿಸಬಹುದಾದದ್ದು…
- ವೈವಿಧ್ಯಮಯ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಈ ಎಕ್ಸ್ಪೋದಲ್ಲಿ ನೋಡಬಹುದು. ಸ್ಮಾರ್ಟ್ಹೋಮ್ ಟೆಕ್ನಾಲಜಿ ಹೊಂದಿರುವ ಎಸಿಗಳು, ರೆಫ್ರಿಜರೇಟರ್ಗಳು, ಅಡುಗೆ ಮನೆ ವಸ್ತುಗಳು, ಪರ್ಸನಲ್ ಗ್ಯಾಜೆಟ್ಗಳು ನಿಮಗಾಗಿ ಕಾಯುತ್ತಿರುತ್ತವೆ.
- ಉತ್ಕೃಷ್ಟ ಗುಣಮಟ್ಟದ ಪೀಠೋಪಕರಣ ಮತ್ತು ಹೋಮ್ ಡೆಕೋರೇಶನ್ ವಸ್ತುಗಳು ಇರುತ್ತವೆ. ಬಹಳ ಸುಂದರವಾದ, ಲಕ್ಷುರಿ ಎನಿಸುವ ಸೋಫಾ ಸೆಟ್ಗಳು, ಡೈನಿಂಗ್ ಟೇಬಲ್, ಇಂಟೀರಿಯನ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್ಗಳು ಪ್ರದರ್ಶನಗೊಳ್ಳುತ್ತವೆ. ಅತ್ಯಾಧುನಿಕ ಮನೆಗಳಿಗೆ ಒಪ್ಪುವಂತಹ ಇನ್ನೋವೇಟಿವ್ ಎನಿಸುವ ಉತ್ಪನ್ನಗಳು ಇಲ್ಲಿರುತ್ತವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತ ಬ್ರ್ಯಾಂಡ್ಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ.
- ಲೇಟೆಸ್ಟ್ ಟೆಕ್ನಾಲಜಿಯೊಂದಿಗೆ ನಿರ್ಮಿಸಲಾಗಿರುವ ಹೊಸ ಎಲೆಕ್ಟ್ರಿಕ್ ವಾಹನಗಳು, ಎಸ್ಯುವಿಗಳು, ಬೈಕ್ಗಳು, ಕಾನ್ಸೆಪ್ಟ್ ಕಾರುಗಳು ನಿಮ್ಮನ್ನು ಆಕರ್ಷಿಸಲು ಎಕ್ಸ್ಪೋದಲ್ಲಿ ಕಾಯುತ್ತಿರುತ್ತವೆ.
- ಫ್ಯಾಷನ್ ಮತ್ತು ಆಭರಣಗಳ ಕಲೆಕ್ಷನ್ಸ್ ಮನೋಹರವಾಗಿರಲಿವೆ. ಹೊಸ ಫ್ಯಾಷನ್ ಟ್ರೆಂಡ್ಗಳು, ಡಿಸೈನರ್ ಕಲೆಕ್ಷನ್, ಆಭರಣಗಳನ್ನು ಇಲ್ಲಿ ಕಾಣಬಹುದು. ದೇಶ ವಿದೇಶಗಳ ಫ್ಯಾಷನ್ ಬ್ರ್ಯಾಂಡ್ಗಳ ಉತ್ಪನ್ನಗಳು ಇಲ್ಲಿ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಲಭ್ಯ ಇರುತ್ತವೆ.
ಟಿವಿ9 ಕನ್ನಡ ಲೈಫ್ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್ಪೋ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಹಿಂದಿನ ಆವೃತ್ತಿಯ ಮೇಳಗಳಿಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಪ್ರತೀ ಎಕ್ಸ್ಪೋದಲ್ಲೂ ಸಾವಿರಾರು ಜನರು ಆಗಮಿಸಿ, ಲಾಭ ಪಡೆದಿದ್ದಾರೆ. ಕುಟುಂಬದವರು, ವೃತ್ತಿಪರರು ಮತ್ತು ಹೊಸ ಫ್ಯಾಷನ್ ಮತ್ತು ಗ್ಯಾಜೆಟ್ಗಳ ಪ್ರೇಮಿಗಳು ಎಲ್ಲರಿಗೂ ಹೇಳಿ ಮಾಡಿಸಿದಂತಹ ಪ್ಲಾಟ್ಫಾರ್ಮ್ ಇದು. ಈ ಎಕ್ಸ್ಪೋದಲ್ಲಿ ಆಕರ್ಷಣೀಯ ಎನಿಸುವ ಡಿಸ್ಕೌಂಟ್ಗಳು, ಡೀಲ್ಗಳು ನಿಮಗಾಗಿ ಲಭ್ಯ ಇರುತ್ತವೆ.
ಟಿವಿ9 ಕನ್ನಡ ಲೈಫ್ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್ಪೋ ವೇಳಾಪಟ್ಟಿ
- ಎಕ್ಸ್ಪೋ ದಿನಾಂಕ: 2026ರ ಮಾರ್ಚ್ 6, 7 ಮತ್ತು 8ರಂದು.
- ಸ್ಥಳ: ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನ
- ಸಮಯ: ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ
ಪಾರ್ಕಿಂಗ್ ಮತ್ತು ಪ್ರವೇಶ ಉಚಿತ