Headlines

ಇಬ್ಬರು ಗಂಡಂದಿರನ್ನು ಬಿಟ್ಟು ಮೂರನೇಯವನ ಜತೆ ಲವ್ವಿಡವ್ವಿ: ಮಂಚದ ಮೇಲೆಯೇ ಬಿತ್ತು ಹೆಣ – Kannada News | Big Twist To Chikkaballapur tejaswini Murder Case: Lover Kills for She toucher For Money

ಚಿಕ್ಕಬಳ್ಳಾಪುರ, (ಮಾರ್ಚ್ 02): ನಗರದ ಶಾಂತಿನಗರ ಬಡಾವಣೆ ನಿವಾಸಿ ತೇಜಸ್ವಿನಿಗೆ (tejaswini )ಇನ್ನು 30 ವರ್ಷ ವಯಸ್ಸು. ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳು. ಮನೆಯಲ್ಲಿ ಬಡತನವಿದ್ದರೂ ಈಕೆಗೇನು ಕೊರತೆ ಇರಲಿಲ್ಲ. ಗಂಡ ಮಕ್ಕಳ ಜೊತೆ ಸುಖವಾಗಿರಬೇಕಿದ್ದ ಈಕೆ ಏನೇನೋ ಮಾಡಲು ಹೋಗಿ ಕೊನೆಗೆ ಹೆಣವಾಗಿದ್ದಾಳೆ. ತೇಜಸ್ವಿನಿ 20ನೇ ವಯಸ್ಸಿನಲ್ಲೇ ಓಡಿ ಹೋಗಿ ಲವ್ ಮ್ಯಾರೇಜ್ ಆಗಿದ್ದಳು. ಒಂದು ಮಗು ಆದ ಬಳಿಕ ಕುಟುಂಬ ಕಲಹ ಉಂಟಾಗಿ ಆತನನ್ನು ದೂರ ಮಾಡಿ ಮತ್ತೊಬ್ಬನ ಜೊತೆ ಓಡಿ ಹೋಗಿ ಮದ್ವೆಯಾಗಿದ್ದಳು. ಆಗ ಮತ್ತೊಂದು ಮಗುವಾದ ಬಳಿಕ ಆತನಿಂದ ದೂರವಾಗಿ ಮಕ್ಕಳೊಂದಿಗೆ ಪ್ರತ್ಯೇಕವಾಸವಾಗಿದ್ದಳು. ಇದೇ ಸಂದರ್ಭದಲ್ಲಿ ಸಂದೀಪ್ ಎನ್ನುವ ಯುವಕನನ್ನು ಬುಟ್ಟಿಗೆ ಹಾಕಿಕೊಂಡು ಆತನೊಂದಿಗೆ ಲಿವಿಂಗ್ ರಿಲೇಶನ್ ಶಿಪ್​​ನಲ್ಲಿದ್ದಳು. ಇದಾಗಿ ಸ್ವಲ್ಪ ದಿನದಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ.

ಇಬ್ಬರನ್ನು ಮದುವೆಯಾಗಿದ್ದ ತೇಜಸ್ವಿನಿ

ತೇಜಸ್ವಿನಿಗೆ 20 ವರ್ಷ ತುಂಬುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸೀಕಲ್ ಗ್ರಾಮದ ಶ್ರೀನಿವಾಸ್ ಎನ್ನುವಾತನನ್ನು ಪ್ರೀತಿಸಿ, ಮನೆಯಲ್ಲಿ ಹೇಳದೇ, ಕೇಳದೇ ಆತನಿಂದೆ ಹೋಗಿದ್ದಳು. ಆತನನ್ನೇ ಮದುವೆ ಮಾಡಿಕೊಂಡಿದ್ದಳು. ಇಬ್ಬರಿಗೆ ಯುವರಾಜ್ ಎನ್ನುವ ಮಗ ಹುಟ್ಟಿದ್ದ. ಆದರೆ ಕುಟುಂಬ ಕಲಹ ಹಿನ್ನಲೆ ಗಂಡ ಶ್ರೀನಿವಾಸನನ್ನು ತೊರೆದು ತವರುಮನೆಯಲ್ಲಿ ನೆಲೆಸಿದ್ದಳು. ಇನ್ನು ತೇಜಸ್ವಿನಿ 8 ವರ್ಷಗಳ ಹಿಂದೆ ಗಂಡ ಶ್ರೀನಿವಾಸನನ್ನು ತೊರೆದು ತವರು ಮನೆಯಲ್ಲಿದ್ದಾಗ 5 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದ ಚಂದ್ರಶೇಖರ್‍ನನ್ನು ಪ್ರೀತಿಸಿ, ಆತನಿಂದೆ ಹೋಗಿದ್ದಳು. ನಂತರ ಆತನನ್ನೇ ಮದುವೆ ಮಾಡಿಕೊಂಡಿದ್ದು, ಇಬ್ಬರಿಗೂ ಜನಿಸಿದ 3 ವರ್ಷದ ಹೆಣ್ಣು ಮಗಳಿದ್ದಾಳೆ.

ಇದನ್ನೂ ಓದಿ; ಗಂಡನನ್ನ ತೊರೆದು ಬಂದ ಪ್ರೇಯಿಸಿಗೆ ಚಾಕುವಿನಿಂದ ಇರಿದ ಪ್ರಿಯಕರ: ಮಕ್ಕಳು ಅನಾಥ

ಇಬ್ಬರನ್ನೂ ಬಿಟ್ಟು ಮತ್ತೊಬ್ಬನ ಜತೆ ಲವ್ವಿಡವ್ವಿ

ಇನ್ನು ಚಂದ್ರಶೇಖರ್ ಜೊತೆ ಸಂಸಾರ ಸಾಕಾದ ಕಾರಣ ಆತನನ್ನು ತೊರೆದು, ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದಳು. ನಗರದ ಹೋಟೆಲ್‍ಗಳಲ್ಲಿ ಪಾತ್ರೆ ತೊಳೆದುಕೊಂಡು ಅಲ್ಲಿ-ಇಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿಕೊಂಡಿದ್ದಳು. ಹೀಗೆ ಮದುವೆಯೊಂದರ ರಿಷೆಪ್ಷನಿಸ್ಟ್ ಕೆಲಸಕ್ಕೆ ಹೋಗಿದ್ದಾಗ ಸಂದೀಪ್ ಎನ್ನುವ ಯುವಕ ಪರಿಚಯವಾಗಿದ್ದು, ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಎರಡು ಗಂಡಂದಿರನ್ನು ಬಿಟ್ಟು ಇದೀಗ ಪರಿಯಚವಾದ ಸಂದೀಪ್ ನೊಂದಿಗೆ 3ನೇ ಮದುವೆಗೆ ಸನ್ನದ್ದಳಾಗಿದ್ದಳು.

ಮಂಚದಲ್ಲಿದ್ದಾಗಲೇ ಚಾಕು ಇರಿತ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತಮ್ಮನಹಳ್ಳಿ ಗ್ರಾಮದ ಸಂದೀಪ್ ಹಾಗೂ ತೇಜಸ್ವಿನಿ ಪ್ರೇಮದ ಕಡಲಲ್ಲಿ ತೇಲಾಡುತ್ತಿದ್ದು, ಕೊನೆಗೆ ಚಿಕ್ಕಬಳ್ಳಾಪುರದಲ್ಲಿ ಸಂದೀಪ್​​ನೊಂದಿಗೆ ಲಿವಿಂಗ್ ರಿಲೇಶಷನ್ ಶಿಪ್​​ನಲ್ಲಿದ್ದಳು. ಹೀಗಿರುವಾಗ ಫೆಬ್ರವರಿ 25 ರಂದು ಬೆಳಿಗ್ಗೆ 4 ಗಂಟೆ ಸಮಯದಲ್ಲಿ ಮಂಚದ ಮೇಲಿದ್ದ ಜೋಡಿಗೆ ಅದೇನಾಯ್ತೋ ಗೊತ್ತಿಲ್ಲ. ಇಬ್ಬರು ಕಿತ್ತಾಡಿಕೊಂಡಿದ್ದು, ಈ ವೇಳೆ ಸಂದೀಪ್ ತೇಜಸ್ವಿನಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿ ಸಂದೀಪ್ ತಾನೇ ಆಕೆಯನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ನಿದ್ದೆಗಣ್ಣಲ್ಲಿ ಮಂಚದ ಮೇಲಿಂದ ಕೆಳಗೆ ಬಿದ್ದಾಗ ಏನೋ ಚುಚ್ಚಿಕೊಂಡಿದೆ ಎಂದು ವೈದ್ಯರಿಗೆ ಹೇಳಿ, ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದ.

ಹಣ, ಎಣ್ಣೆಗಾಗಿ ಪೀಡಿಸುತ್ತಿದ್ದಳು

ಅನುಮಾನಗೊಂಡು ಮನೆಯಲ್ಲಿದ್ದ ತೇಜಸ್ವಿನಿ ಮಗನನ್ನು ವಿಚಾರಿಸಿದಾಗ ಸತ್ಯ ಬಯಲಾಗಿತ್ತು. ತಾಯಿ ಹಾಗೂ ಸಂದೀಪ್ ರಾತ್ರಿ ಜಗಳ ಮಾಡಿಕೊಂಡಿದ್ದರು. ಸಂದೀಪ್‍ನೇ ತಾಯಿಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆಂದು ತನ್ನ ಸಂಬಂಧಿಕರಿಗೆ ತಿಳಿಸಿದ್ದ. ಇನ್ನು ಮೃತಳ ಅಣ್ಣ ಗಿರೀಶ್ ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಪೊಲೀಸರು ಆರೋಪಿ ಸಂದೀಪ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಿಯತಮೆ ತೇಜಸ್ವಿನಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಹಾಗೂ ಹಣ, ಎಣ್ಣೆಗಾಗಿ ಪೀಡಿಸುತ್ತಿದ್ದಳು. ಇದರಿಂದ ಹತಾಶನಾಗಿ ಚಾಕುವಿನಿಂದ ಚುಚ್ಚಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹೀಗೆ ಇಬ್ಬರು ಗಂಡಂದಿರನ್ನು ಬಿಟ್ಟು ಮತ್ತೊಬ್ಬನ ಜತೆ ಸೇರಿ ತೇಜಸ್ವಿನಿ ಹತ್ಯೆಯಾಗಿದ್ದು, ಮತ್ತೊಂದೆಡೆ ತಮ್ಮದಲ್ಲದ ತಪ್ಪಿಗೆ ತೇಜಸ್ವಿನಿಯ ಚಿಕ್ಕಮಕ್ಕಳು ಅನಾಥವಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *