
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 3, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಫಾಲ್ಗುಣ ಮಾಸದ ಶುಕ್ಲಪಕ್ಷ ಹುಣ್ಣಿಮೆಯ ಈ ದಿನ, ಮಖಾ ನಕ್ಷತ್ರ, ಸುಕರ್ಮ ಯೋಗ ಮತ್ತು ಭವಕರಣ ಇರಲಿದೆ. ಈ ದಿನವು ಹೋಳಿ ಹುಣ್ಣಿಮೆಯ ಜೊತೆಗೆ ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ. ಇದು 2026ರ ಸಂಖ್ಯಾ ವರ್ಷದ ಕೊನೆಯ ಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸಲಿದೆ. ಮಧ್ಯಾಹ್ನ 3:13ಕ್ಕೆ ಸ್ಪರ್ಶ ಕಾಲ, ಸಂಜೆ 5:00ಕ್ಕೆ ಮಧ್ಯಮ ಕಾಲ ಮತ್ತು 6:47ಕ್ಕೆ ಮೋಕ್ಷ ಕಾಲವಿರುತ್ತದೆ. ಈ ಗ್ರಹಣವು ದ್ವಾದಶ ರಾಶಿಗಳ ಹಾಗೂ ಪ್ರಪಂಚದ ಮೇಲೆ ಪ್ರಭಾವ ಬೀರಲಿದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.