Headlines

ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಹೇಗೆ ಸಿಂಹ ದಾಳಿ ಮಾಡ್ತು ನೋಡಿ – Kannada News | Child Injured After Getting Too Close to Lion Enclosure in Viral Clip

ಮೃಗಾಲಯಕ್ಕೆ ಭೇಟಿ ನೀಡಿದಾಗ ಮೈಯಲ್ಲಾ ಕಣ್ಣಾಗಿರಬೇಕು, ಯಾವ ಪ್ರಾಣಿಗಳು ಎಲ್ಲಿಂದ ಹೇಗೆ ಬಂದು ದಾಳಿ ಮಾಡುತ್ತವೆ ಎಂದು ಹೇಳುವುದು ಕಷ್ಟ. ಹಾಗೆಯೇ ಆನ್​ಲೈನ್​​ ಅಲ್ಲಿ ವೈರಲ್ ಆದ ವಿಡಿಯೋದಲ್ಲಿ ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಸಿಂಹ(Lion) ಹೇಗೆ ದಾಳಿ ಮಾಡಿತು ಎಂಬುದನ್ನು ನೋಡಬಹುದು.
ಬಾಲಕಿ ಬೋನ್ ಬಳಿ ನಿಂತು ಸಿಂಹಗಳನ್ನು ವೀಕ್ಷಿಸುತ್ತಿರುವಾಗ ಬೋನ್​ ಆಚೆಗೆ ಸಿಂಹ ತನ್ನ ಕೈಚಾಚಿ ಬಾಲಕಿಯನ್ನು ಹಿಡಿದಿದೆ.

ಆಕೆ ಅದರಿಂದ ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿರುವಾಗ ಆಕೆಯ ತಂದೆ ಕೂಡಲೇ ಓಡಿ ಬಂದು ಹೇಗೋ ಆಕೆಯನ್ನು ಕಾಪಾಡಿದ್ದಾರೆ. ಈ ಪೋಸ್ಟ್ ಅನ್ನು ‘ಕ್ಲಿಪ್ಸ್ ಯೂನಿವರ್ಸ್’ ಹ್ಯಾಂಡಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

ಈ ವೈರಲ್ ಪೋಸ್ಟ್ ಅನ್ನು ನಿನ್ನೆ ಹಂಚಿಕೊಳ್ಳಲಾಗಿದ್ದು, 3 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪೋಷಕರು ಮಗುವನ್ನು ಅಷ್ಟು ಹತ್ತಿರ ಬರಲು ಎಂದಿಗೂ ಬಿಡಬಾರದಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಮಾಂಸಾಹಾರಿ ಪ್ರಾಣಿಗಳ ಆಸು ಪಾಸು ಇರುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಬಾಲಕಿಗೆ ಏನಾಯ್ತೋ ಎಂದು ಚಿಂತಿಸುವ ಬದಲು ಜನರು ಪೋಷಕರಿಗೆ ಬೈದಿದ್ದೇ ಹೆಚ್ಚು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *