ಪಲ್ನಾಡು, ಮಾರ್ಚ್ 3: ಆಂಧ್ರಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಪ್ರಿಯಕರನಿಂದ ದಾರುಣವಾಗಿ ಕೊಲೆಯಾಗಿದ್ದಾರೆ. ಈ ಘಟನೆ ಫೆಬ್ರವರಿ 26ರಂದು ಪಲ್ನಾಡು ಜಿಲ್ಲೆಯ ರಾಜುಪಾಲಂ ಮಂಡಲದ ಉಪ್ಪಲಪಾಡುವಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ಗ್ರಾಮದ ಕೊಟ್ಟಿಗೆಯಲ್ಲಿ 44 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವುದು ಪತ್ತೆಯಾಗಿತ್ತು. ಆಕೆಯ ಶವವನ್ನು ಪರೀಕ್ಷಿಸಿದ ಸ್ಥಳೀಯರಿಗೆ ಇದು ಕೊಲೆ ಎಂದು ಗೊತ್ತಾಯಿತು. ಕೊನೆಗೆ ಆ ಮಹಿಳೆಯ ಮಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ತನಿಖೆ ವೇಳೆ ಆಕೆಯ ಪತಿ ಮತ್ತು ಪ್ರಿಯಕರ ಒಟ್ಟಿಗೆ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಕಂಡುಬಂದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
ಉಪ್ಪಲಪಾಡುವಿನ ವೇಲ್ಪುಲ ಈಶ್ವರಯ್ಯ ಮತ್ತು ಮಲ್ಲೇಶ್ವರಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಗ್ರಾಮದ ಹೊರಗೆ ವಾಸಿಸುತ್ತಿದ್ದರು. ಮಲ್ಲೇಶ್ವರಿ ಕೆಲವು ಸಮಯದಿಂದ ಅದೇ ಊರಿನ ವೇಲ್ಪುಲ ನಾಗೇಶ್ವರ ರಾವ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಈ ವಿಷಯ ಆಕೆಯ ಪತಿ ಈಶ್ವರಯ್ಯ ಮತ್ತು ಅವರ ಕುಟುಂಬಕ್ಕೂ ತಿಳಿದಿತ್ತು. ನಾಗೇಶ್ವರ ರಾವ್ ಆಕೆಯ ಕುಟುಂಬಕ್ಕೆ ದುಡ್ಡು ಕೂಡ ಕೊಡುತ್ತಿದ್ದುದರಿಂದ ಈಶ್ವರಯ್ಯ ಈ ಸಂಬಂಧದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಲಿವ್-ಇನ್ ಸಂಗಾತಿಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಡಿಎಂಕೆ ಕಾರ್ಯಕರ್ತ
ಆದರೆ, ಇತ್ತೀಚಿನ ದಿನಗಳಲ್ಲಿ ಮಲ್ಲೇಶ್ವರಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ನಂತರ ಈಶ್ವರಯ್ಯ ಹಾಗೂ ನಾಗೇಶ್ವರ ರಾವ್ ಇಬ್ಬರಿಗೂ ಕೋಪ ಬಂದಿತ್ತು. ಫೆಬ್ರವರಿ 25ರಂದು ಹೊರಗೆ ಹೋಗಿದ್ದ ಮಲ್ಲೇಶ್ವರಿ ತಡರಾತ್ರಿ ಮನೆಗೆ ವಾಪಾಸ್ ಬಂದರು. ಅವರು ಮನೆಗೆ ಬಂದಾಗ ಈಶ್ವರಯ್ಯ ಮತ್ತು ನಾಗೇಶ್ವರ ರಾವ್ ಒಟ್ಟಿಗೆ ಕುಳಿತು ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲೇಶ್ವರಿಯ ನಡವಳಿಕೆಯನ್ನು ಪ್ರಶ್ನಿಸಿದರು. ಆಗ ಮಲ್ಲೇಶ್ವರಿ ಈಶ್ವರಯ್ಯ ಮತ್ತು ನಾಗೇಶ್ವರ ರಾವ್ ಜೊತೆ ಜಗಳವಾಡಿದರು. ಈ ಜಗಳದ ಸಮಯದಲ್ಲಿ ಕೋಪದಿಂದ ಅವರಿಬ್ಬರೂ ಮಲ್ಲೇಶ್ವರಿಯ ತಲೆಗೆ ಹೊಡೆದರು. ಆಕೆ ಪ್ರಜ್ಞೆ ಕಳೆದುಕೊಂಡರು. ಕುಡಿದ ಅಮಲಿನಲ್ಲಿದ್ದ ಅವರು ತಕ್ಷಣ ಆಕೆಯನ್ನು ಹತ್ತಿರದ ಕೊಟ್ಟಿಗೆಗೆ ಎಳೆದೊಯ್ದು, ಉಸಿರುಗಟ್ಟಿಸಿ ಕೊಲೆ ಮಾಡಿದರು. ನಂತರ, ಅವರು ಅಲ್ಲಿಂದ ಓಡಿಹೋದರು.
ಇದನ್ನೂ ಓದಿ: ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ!
ಬೆಳಗಿನ ಜಾವ ಊರಿಗೆಲ್ಲ ಈ ವಿಷ ಗೊತ್ತಾಯಿತು. ಮಲ್ಲೇಶ್ವರಿಯ ಕೊಲೆ ಗ್ರಾಮದಲ್ಲಿ ಕೋಲಾಹಲ ಸೃಷ್ಟಿಸಿತು. ಆಕೆಯನ್ನು ಯಾರು ಕೊಂದಿರಬಹುದು? ಎಂದು ಎಲ್ಲರಿಗೂ ಆತಂಕ ಮತ್ತು ಕುತೂಹಲವಿತ್ತು. ಪೊಲೀಸರು ಮೊದಲು ಈಶ್ವರಯ್ಯನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ, ಅವರು ಎಲ್ಲವನ್ನೂ ಒಪ್ಪಿಕೊಂಡರು. ಕೊನೆಗೆ ಪೊಲೀಸರು ಈಶ್ವರಯ್ಯ ಮತ್ತು ನಾಗೇಶ್ವರ ರಾವ್ ಇಬ್ಬರನ್ನು ಬಂಧಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ