Headlines

‘ಟಾಕ್ಸಿಕ್’ ರಿಲೀಸ್ ದಿನಾಂಕದಿಂದ ‘ಧುರಂಧರ್ 2’ ಹಾದಿ ಮತ್ತಷ್ಟು ಸುಲಭ – Kannada News | Toxic Postponement Boosts Dhurandhar 2: War Fears Clear Box Office Path

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸಾಕಷ್ಟು ನಡೆಯಿತು. ಆದರೆ, ಸದ್ಯಕ್ಕೆ ‘ಟಾಕ್ಸಿಕ್’ ತಂಡ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿಕೊಂಡಿದೆ. ಇದು ಯಶ್ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ವಿಶ್ವ ಮಟ್ಟದಲ್ಲಿ ಮೂಡಿರುವ ಯುದ್ಧ ಭೀತಿಯ ಕಾರಣದಿಂದ ‘ಟಾಕ್ಸಿಕ್’ ರಿಲೀಸ್ ವಿಳಂಬ ಆಗುತ್ತಿದೆ ಎಂದು ತಂಡ ಹೇಳಿದೆ. ಈ ಬೆಳವಣಿಗೆಯಿಂದ ‘ಧುರಂಧರ್ 2’ ಹಾದಿ ಸುಗಮನ ಆಗಿದೆ. ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಅವಕಾಶ ಇದೆ.

‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ಎರಡೂ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳು. ಎರಡೂ ಸಿನಿಮಾಗಳಿಗೆ ಹೆಚ್ಚಿನ ಚಿತ್ರಮಂದಿರಗಳು ಬೇಕು. ಎರಡೂ ಚಿತ್ರಗಳ ಬಜೆಟ್ ದೊಡ್ಡದಿರುವುದರಿಂದ ಹೆಚ್ಚಿನ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಎಲ್ಲಾ ಕಾರಣದಿಂದ ಯಾವುದಾದರೂ ಒಂದು ಚಿತ್ರ ಮುಂದಕ್ಕೆ ಹೋಗಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ಎರಡೂ ತಂಡಗಳು ಹಠ ಹಿಡಿದು ಕುಳಿತಿದ್ದವು. ಆದರೆ, ಯುದ್ಧ ಭೀತಿ ಕಾರಣದಿಂದ ‘ಟಾಕ್ಸಿಕ್’ ಸದ್ಯದ ರಿಲೀಸ್ ದಿನಾಂಕ ಮುಂದಕ್ಕೆ ಹಾಕಿಕೊಂಡಿದೆ.

‘ಧುರಂಧರ್ 2’ ಸಿನಿಮಾ ಹಿಂದಿ ಮಾತ್ರವಲ್ಲದೆ, ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿವೆ. ಈಗ ‘ಟಾಕ್ಸಿಕ್’ ರಿಲೀಸ್ ವಿಳಂಬದಿಂದ ದಕ್ಷಿಣ ಭಾರತದಲ್ಲೂ ಚಿತ್ರಕ್ಕೆ ಹೆಚ್ಚಿನ ಥಿಯೇಟರ್ ಸಿಗಲಿದೆ. ಇವುಗಳಿಂದ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡಬಹುದು. ಅರಬ್ ರಾಷ್ಟ್ರಗಳಲ್ಲಿ ಈ ಚಿತ್ರದ ಮೇಲೆ ಬ್ಯಾನ್ ಇರುವುದರಿಂದ ಯುದ್ಧ ಭೀತಿ ಈ ಸಿನಿಮಾ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಅವಧಿ ಬರೋಬ್ಬರಿ 4 ಗಂಟೆ? ರಿಸ್ಕ್ ತೆಗೆದುಕೊಂಡ ಚಿತ್ರತಂಡ

‘ಧುರಂಧರ್ 2’ ಸಿನಿಮಾದ ಅವಧಿ 4 ಗಂಟೆ ಇದೆ ಎನ್ನಲಾಗಿದೆ. ಇಷ್ಟು ದೀರ್ಘ ಅವಧಿ ಇಟ್ಟುಕೊಂಡು ಪ್ರೇಕ್ಷಕರನ್ನು ಥಿಯೇಟರ್​​ಗೆ ಕರೆತರೋದು ಒಂದು ದೊಡ್ಡ ಸವಾಲು. ಅದನ್ನು ಸಿನಿಮಾ ಹೇಗೆ ಎದುರಿಸುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:46 am, Wed, 4 March 26

Source link

Leave a Reply

Your email address will not be published. Required fields are marked *