ರಾಯಚೂರು, (ಮಾರ್ಚ್ 04): ಎಟಿಎಂ ಪಿನ್ (ಪಾಸ್ವರ್ಡ್) ಯಾರೊಂದಿಗೆ ಹಂಚಿಕೊಳ್ಳಬೇಡಿ ಎಂದು ಪೊಲೀಸರು, ಬ್ಯಾಂಕಿನವರು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದ್ರೆ, ಹಳ್ಳಿ ಕಡೆಗಳಲ್ಲಿ ಏನು ತಳಿಯದ ಜನ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಬೇರೆಯವರ ಮೊರೆ ಹೋಗುತ್ತಾರೆ. ಅದರಂತೆ ರಾಯಚೂರಿನಲ್ಲಿ ವ್ಯಕ್ತಿಯೋರ್ವ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಲು ಬೇರೆಯವನ ಸಹಾಯಕ ಪಡೆದುಕೊಂಡು 64,000 ಕಳೆದುಕೊಂಡಿದ್ದಾರೆ. ಹೌದು…ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ನಲ್ಲಿ ಫೆಬ್ರವರಿ 26ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..
ಫೆಬ್ರವರಿ 26ರಂದು ಭೀಮಪ್ಪ ಎನ್ನುವ ವ್ಯಕ್ತಿ ಎಟಿಎಂನಿಂದ ಹಣ ಡ್ರಾಮಾಡಿಕೊಳ್ಳಲು ಹೋಗಿದ್ದಾನೆ. ಆದ್ರೆ, ಗೊತ್ತಾಗಿದ್ದಾಗ ಬೇರೊಬ್ಬರಿಗೆ ಹಣ ತೆಗೆದುಕೊಡಲು ಎಟಿಎಂ ಪಿನ್ ಸಹ ಹೇಳಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ, ಭೀಮಪ್ಪನಿಗೆ ಬದಲಿಗೆ ಎಟಿಎಂ ಕಾರ್ಡ್ ನೀಡಿ ನಂತರ ಬೇರೆ ಕಡೆ ಹೋಗಿ ಭೀಮಪ್ಪನ ಎಟಿಎಂನಿಂದ 64,000 ಹಣ ಡ್ರಾ ಮಾಡಿಕೊಂಡಿದ್ದಾನೆ. ಬಳಿಕ ಬ್ಯಾಂಕ್ಗೆ ತೆರಳಿ ಸಿಬ್ಬಂದಿಯನ್ನು ವಿಚಾರಿಸಿದಾಗ ಮೋಸಹೋಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಭೀಮಪ್ಪ ನೀಡಿದ ದೂರಿನ ಅನ್ವಯ ಮುದಗಲ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸಿದ್ದಾರೆ.