ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆರತಕ್ಷತೆ ಹೈದರಾಬಾದ್ನಲ್ಲಿ ಮಾರ್ಚ್ 4ರಂದು ನಡೆಯಿತು. ಈ ವೇಳೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ನವ ದಂಪತಿಗೆ ಶುಭಾಶಯ ಕೋರಿದರು. ಈ ಪೈಕಿ ಕನ್ನಡದವರೂ ಇದ್ದರು.
ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಶ್ಮಿಕಾ ಮಂದಣ್ಣ ಆಹ್ವಾನ ನೀಡಿದ್ದರು. ಅವರು ಆಮಂತ್ರಣ ಸ್ವೀಕರಿಸಿ ಹೈದರಾಬಾದ್ಗೆ ತೆರಳಿದ್ದರು. ದಂಪತಿಗೆ ವಿಶ್ ಮಾಡಿ ಅವರು ಮರಳಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ಆಶಿಕಾ ರಂಗನಾಥ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಫ್ರೆಂಡ್ಶಿಪ್ನ ಇಬ್ಬರೂ ಉಳಿಸಿಕೊಂಡು ಬಂದಿದ್ದಾರೆ. ರಶ್ಮಿಕಾ ಆರತಕ್ಷತೆಯಲ್ಲಿ ಆಶಿಕಾ ಭಾಗಿ ಆಗಿದ್ದರು.
ಶ್ರೀಲೀಲಾ ಹಾಗೂ ರಶ್ಮಿಕಾ ‘ಪುಷ್ಪ 2’ ಚಿತ್ರದಲ್ಲಿ ನಟಿಸಿದ್ದರು. ಇಬ್ಬರೂ ಕನ್ನಡದವರು. ಈ ಕಾರಣದಿಂದ ರಶ್ಮಿಕಾ ಅವರು ಶ್ರೀಲೀಲಾ ಅವರನ್ನು ರಿಸೆಪ್ಶನ್ಗೆ ಆಹ್ವಾನಿಸಿದ್ದರು. ಅವರು ತಾಯಿ ಜೊತೆ ತೆರಳಿ ದಂಪತಿಗೆ ವಿಶ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೆ, ಬಾಲಿವುಡ್ನಿಂದಲೂ ಅನೇಕರು ಭಾಗಿ ಆಗಿದ್ದರು. ಕರಣ್ ಜೋಹರ್, ಕೃತಿ ಸನೋನ್, ಮೃಣಾಲ್ ಠಾಕೂರ್ ಮೊದಲಾದವರು ಆಗಮಿಸಿ ವಿಶ್ ಮಾಡಿದ್ದಾರೆ.




