Headlines

‘ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ’ ಪ್ರಶಸ್ತಿ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣ: ವೇಗ, ಸ್ವಚ್ಛತೆ ಎಲ್ಲದರಲ್ಲೂ ನಂಬರ್​​ ಒನ್ – Kannada News | KIA Wins 2025 ASQ ‘Best Airport at Arrivals Globally’ Fourth Time Running

ಬೆಂಗಳೂರು ವಿಮಾನ ನಿಲ್ದಾಣImage Credit source: Tv9 kannada

ಬೆಂಗಳೂರು, ಮಾ.5: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮಿಂಚಿದೆ. 2025ರ ಎಎಸ್ ಕ್ಯೂ (ASQ) ಪ್ರಶಸ್ತಿಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಸತತ ನಾಲ್ಕನೇ ವರ್ಷವೂ ‘ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ’ (Best Airport at Arrivals Globally) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ACI) ನೀಡುವ ಈ ಪ್ರಶಸ್ತಿಯು ವಿಮಾನ ನಿಲ್ದಾಣದ ಗುಣಮಟ್ಟ ಮತ್ತು ಸೇವೆಗೆ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಗೌರವವಾಗಿದೆ.

ಈ ಪ್ರಶಸ್ತಿಯನ್ನು ಪ್ರಯಾಣಿಕರ ನೈಜ ಸಮಯದ (Real-time) ಪ್ರತಿಕ್ರಿಯೆಗಳ ಆಧಾರದ ಮೇಲೆ ನೀಡಲಾಗುತ್ತದೆ. ವಿಮಾನದಿಂದ ಇಳಿದು ಹೊರಬರುವವರೆಗೆ ಪ್ರಯಾಣಿಕರಿಗೆ ಸಿಗುವ ವೇಗ, ಆರಾಮದಾಯಕ ಅನುಭವ ಮತ್ತು ಸ್ವಚ್ಛತೆಯನ್ನು ಇಲ್ಲಿ ಪರಿಗಣಿಸಲಾಗಿದೆ. 2022 ರಿಂದ 2025 ರವರೆಗೆ ಸತತ ನಾಲ್ಕು ವರ್ಷಗಳ ಕಾಲ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬೆಂಗಳೂರು ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ.

ಇದನ್ನೂ ಓದಿ: ಒಂದಾ ಇಬ್ಬರು ದುಡಿಯಬೇಕು, ಇಲ್ಲ ಊರು ಬಿಡಬೇಕು: ಬೆಂಗಳೂರು ಮದುವೆಯಾದವರಿಗೆ ದುಬಾರಿ

ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಅಧಿಕಾರಿಗಳು ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಇದು ತಂಡದ ಸಾಮೂಹಿಕ ಪ್ರಯತ್ನದ ಫಲ ಎಂದು ಬಿಐಎಎಲ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗಿರೀಶ್ ನಾಯರ್ ತಿಳಿಸಿದ್ದಾರೆ. ಸತತ ನಾಲ್ಕನೇ ವರ್ಷವೂ ಆಗಮನಕ್ಕೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿರುವುದು ನಮ್ಮ ಕಾರ್ಯನಿರ್ವಹಣೆಯ ಸ್ಥಿರತೆ ಮತ್ತು ನಮ್ಮ ತಂಡಗಳು ಮತ್ತು ಪಾಲುದಾರರ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *