ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಮದುವೆ ಬಳಿಕ ಸಖತ್ ಜಾಲಿಯಾಗಿದ್ದಾರೆ. ‘ಮಾ ಇಂಟಿ ಬಂಗಾರಂ’ (Maa Inti Bangaram) ಸಿನಿಮಾದ ಶೂಟಿಂಗ್ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದ ಚಿತ್ರೀಕರಣ ಕರ್ನಾಟಕದಲ್ಲಿ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಶೂಟಿಂಗ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಹೋಳಿ ಹಬ್ಬ ಆಚರಿಸಿದ್ದಾರೆ. ಗಂಡ ರಾಜ್ ನಿಡಿಮೋರು ಹಾಗೂ ಚಿತ್ರತಂಡದ ಜೊತೆ ಸಮಂತಾ ರುತ್ ಪ್ರಭು ಅವರು ಹೋಳಿ (Holi) ಆಡಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಬಹಳ ಆ್ಯಕ್ಟೀವ್ ಆಗಿರುವ ಸಮಂತಾ ರುತ್ ಪ್ರಭು ಅವರು ತಮ್ಮ ಹೋಳಿ ಆಚರಣೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹೊಸನಗರದ ಬಸ್ ನಿಲ್ದಾಣದಲ್ಲಿ ಸಮಂತಾ ಅವರು ಹೋಳಿ ಗನ್ ಹಿಡಿದು ಗಂಡನಿಗೆ ಬಣ್ಣ ಹಾಕಿದ್ದಾರೆ. ಚಿತ್ರತಂಡದ ಜೊತೆ ಬಣ್ಣದ ಆಟವಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸಮಂತಾ ಹೋಳಿ ಆಚರಣೆಯ ವಿಡಿಯೋ:
‘ಮಾ ಇಂಟಿ ಬಂಗಾರಂ’ ಸಿನಿಮಾಗೆ ನಂದಿನಿ ರೆಡ್ಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಿರುಸಿನಿಂದ ಶೂಟಿಂಗ್ ನಡೆಯುತ್ತಿದೆ. ಹೋಳಿ ಹಬ್ಬದ ಸಲುವಾಗಿ ಚಿತ್ರೀಕರಣಕ್ಕೆ ಸಣ್ಣ ಬ್ರೇಕ್ ನೀಡಿದ ಚಿತ್ರತಂಡದವರು ಹೋಳಿ ಆಡಿ ಖುಷಿಪಟ್ಟಿದ್ದಾರೆ. ಮಲೆನಾಡಿನ ಪರಿಸರಕ್ಕೆ ಸಮಂತಾ ಅವರು ಮನಸೋತಿದ್ದಾರೆ. ಅವರು ಎಷ್ಟು ಖುಷಿಯಾಗಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾಗೆ ಕರ್ನಾಟಕದಲ್ಲಿ ಶೂಟಿಂಗ್ ಮಾಡುತ್ತಿರುವುದರಿಂದ ಕನ್ನಡದ ಪ್ರೇಕ್ಷಕರ ವಲಯದಲ್ಲಿ ಕೂಡ ನಿರೀಕ್ಷೆ ಹೆಚ್ಚಾಗಿದೆ. ಇದೇ ಸಿನಿಮಾದಲ್ಲಿ ಕನ್ನಡದ ನಟ ದಿಗಂತ್ ಮಂಚಾಲೆ ಅವರು ನಟಿಸುತ್ತಿದ್ದಾರೆ ಎಂಬುದು ವಿಶೇಷ. ಮೇ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಸಮಂತಾ ಅವರ ಗೆಟಪ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಹೆಮ್ಮೆಯಿಂದ ತಾಳಿ ಧರಿಸಿ ಓಡಾಡುತ್ತಿರುವ ನಟಿ ಸಮಂತಾ ರುತ್ ಪ್ರಭು
ಈ ಮೊದಲು ನಾಗ ಚೈತನ್ಯ ಜೊತೆ ಸಮಂತಾ ಮದುವೆ ಆಗಿದ್ದರು. ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಅದೇ ಸಮಯಕ್ಕೆ ಅವರ ಆರೋಗ್ಯ ಕೂಡ ಕೈಕೊಟ್ಟಿತ್ತು. ಅಷ್ಟೆಲ್ಲ ತಾಪತ್ರಯಗಳಿಂದ ಸಮಂತಾ ಮುಖದಲ್ಲಿ ನಗು ಮಾಯವಾಗಿತ್ತು. ಬಳಿಕ ಅವರು ವಿಚ್ಛೇದನ ಪಡೆದರು. ಈಗ ರಾಜ್ ನಿಡಿಮೋರು ಜೊತೆ ದಾಂಪತ್ಯ ಜೀವನ ಮಾಡುತ್ತಿರುವ ಸಮಂತಾ ಹ್ಯಾಪಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.