Headlines

Karnataka Budget 2026: ಸಿದ್ದರಾಮಯ್ಯ ದಾಖಲೆ ಬಜೆಟ್ ಎಷ್ಟು ಗಂಟೆಗೆ? ಲೈವ್ ನೋಡುವುದ್ಹೇಗೆ? – Kannada News | Karnataka Budget 2026: Siddaramaiah 17th Budget Date, Time, When and Where to Watch Live? here Is details

ಬೆಂಗಳೂರು, (ಮಾರ್ಚ್ 05) : 2026-27ನೇ ಸಾಲಿನ ರಾಜ್ಯ ಬಜೆಟ್ (Karnataka Budget 2026) ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮ್ಯನವರು (Siddaramaiah) ಮಾರ್ಚ್ 6ರಂದು ಬೆಳಗ್ಗೆ 10.15ಕ್ಕೆ  ಬಜೆಟ್ ಮಂಡಿಸಲಿದ್ದು, ಈ ಬಾರಿಯ ಆಯವ್ಯಯದ ಮೇಲೆ ರಾಜ್ಯದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗದೆ, ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಕೊಡುಗೆಗಳು ಸಿಗುವ ವಿಶ್ವಾಸವಿದೆ.

ಹಣಕಾಸು ಇಲಾಖೆ ಸಿದ್ದಪಡಿಸಿದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಜನಪರ ಯೋಜನೆಗಳಿಗೆ ಹೆಚ್ಚಿನ ಒತ್ತು ಹಾಗೂ ಧೀರ್ಘಕಾಲದ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುತ್ತಾರಾ ಇಲ್ಲವಾ ಎಂಬ ಕುತೂಹಲ ಮನೆ ಮಾಡಿದೆ. ರಾಜ್ಯದ ಒಟ್ಟಾರೆ ಬಜೆಟ್‌ ಗಾತ್ರ 4.50 ಲಕ್ಷ ಕೋಟಿ ರೂಪಾಯಿ ಆಸುಪಾಸಿಗೆ ತಲುಪಲಿದೆ. ಹಾಗೆಯೇ ಸಾಲದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Budget 2026: ದಾಖಲೆಯ 17ನೇ ಬಜೆಟ್​ಗೆ ಸಿದ್ದರಾಮಯ್ಯ ಸಿದ್ಧ, ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

ಬಜೆಟ್ ಎಷ್ಟು ಗಂಟೆಗೆ? ಲೈವ್ ಪ್ರಸಾರ ಎಲ್ಲಿ ವೀಕ್ಷಿಸಬಹುದು?

ಗ್ಯಾರಂಟಿ ನಿಭಾಯಿಸಬೇಕು, ಅನುದಾನ ಕೊಡಬೇಕು, ಅಭಿವೃದ್ಧಿಯನ್ನೂ ಮಾಡಬೇಕು, ಸೊರಗಿರುವ ಇಲಾಖೆಗಳಿಗೆ ಬೂಸ್ಟ್ ನೀಡಬೇಕು, ರೈತರ ಸಮಸ್ಯೆಗೆ ಪರಿಹಾರ ಘೋಷಣೆ ಮಾಡಬೇಕು, ಮಹಿಳೆಯರಿಗೆ ಬಂಪರ್ ಕೊಡುಗೆ ಕೊಡಬೇಕು, ಶಿಕ್ಷಣಕ್ಕೆ ಒತ್ತು ನೀಡಬೇಕು, ಆರೋಗ್ಯಕ್ಕೂ ಟ್ರೀಟ್‌ಮೆಂಟ್ ಕೊಡಬೇಕು. ಹೀಗೆ ಸಾಲು ಸಾಲು ಸವಾಲುಗಳನ್ನ ಹೆಗಲ ಮೇಲೆ ಹೊತ್ತಿರೋ ಸಿಎಂ ಸಿದ್ದರಾಮಯ್ಯನವರು ತಮ್ಮ ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ದಾಖಲೆ 17ನೇ ಬಜೆಟ್ ಅನ್ನು ಸಿದ್ದರಾಮಯ್ಯನವರು ಮಾರ್ಚ್ 06ರಂದು ಬೆಳಗ್ಗೆ 10.15ಕ್ಕೆ ಬಜೆಟ್ ಓದಲಾರಂಭಿಸಲಿದ್ದಾರೆ.

ಬಜೆಟ್ 2026 ರ ನೇರ ಪ್ರಸಾರವನ್ನು ನೀವು ಟಿವಿಯಲ್ಲಿ ನಿಮ್ಮ ನೆಚ್ಚಿನ ಟಿವಿ9 ಕನ್ನಡದಲ್ಲಿ ವೀಕ್ಷಿಸಬಹುದು. ಇನ್ನು ನೀವು ಇದ್ದಲ್ಲೇ ಮೊಬೈಲ್​​ ನಲ್ಲಿ ನೋಡುವುದಾದರೆ ಟಿವಿ9 ಯುಟ್ಯೂಬ್​​ನಲ್ಲೂ  ಸಹ ನೋಡಬಹುದು. ಹಾಗೇ ಬಜೆಟ್​​​ನಲ್ಲಿ ಏನೇನು ಘೋಷಣೆಯಾಗುತ್ತೆ ಎನ್ನುವುದನ್ನು ತಿಳಿಯಲು ಟಿವಿ9 ಕನ್ನಡ ವೆಬ್​​ಸೈಟ್​​​​​ನ ಲೈವ್ ಪೇಜ್​​​​ ನೋಡಿ. ಹೀಗೆ ದೃಶ್ಯ ಜೊತೆ ಟೆಕ್ಸ್ಟ್​​​ ಫಾರ್ಮೆಂಟ್​​ನಲ್ಲೂ ಟಿವಿ9 ನಿಮಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತೆ, ಹೀಗಾಗಿ ನಿಖರ ಮಾಹಿತಿಗಾಗಿ ಟಿವಿ9 ಕನ್ನಡ  ಫೋಲೋ ಮಾಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *