
‘ಅಮೃತಧಾರೆ’ ಧಾರಾವಾಹಿಯು ಕಳೆದ ಕೆಲವು ಸಮಯದಿಂದ ನಿಧಾನಗತಿಯಲ್ಲಿ ಸಾಗುತ್ತಿತ್ತು ಎಂದರೂ ತಪ್ಪಾಗಲಾರದು. ಆದರೆ, ಈಗ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಸಮಯ ಬಂದಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನ ಗೌತಮ್ ಉದ್ಯಮ ಮಾಡೋದಾಗಿ ಹೇಳುತ್ತಿದ್ದನು ಮತ್ತು ಅದನ್ನು ಆರಂಭಿಸಿರಲಿಲ್ಲ. ಆದರೆ, ಈಗ ಉದ್ಯಮ ಮಾಡಲು ಆತನು ಸಿದ್ಧನಾಗಿದ್ದಾನೆ. ಎದುರಾಳಿ ಜೊತೆಯೇ ಕೈ ಜೋಡಿಸಿದ್ದಾನೆ.
ಕುಟುಂಬದವರೇ ಮಾಡಿದ ಮೋಸದ ಕಾರಣದಿಂದ ಗೌತಮ್ ಸಾಕಷ್ಟು ಬೇಸರ ಮಾಡಿಕೊಂಡಿದ್ದ. ಆತ ಆಸ್ತಿಯನ್ನು ಮಲ ತಮ್ಮನಿಗೆ ಬರೆದುಕೊಟ್ಟಿದ್ದ. ಆದರೂ ಆತನ ದಾಹ ತೀರಿರಲಿಲ್ಲ. ಕೊನೆಯದಾಗಿ ಗೌತಮ್ ಉಳಿಸಿಕೊಂಡಿದ್ದ ತಂದೆಯ ಸಮಾಧಿಯನ್ನು ಕೂಡ ಮೋಸದಿಂದ ಪಡೆದುಕೊಂಡ. ಇದು ಧಾರಾವಾಹಿಗೆ ಮಹತ್ವದ ತಿರುವು ನೀಡಿದೆ ಎಂದೇ ಹೇಳಬಹುದು.
ಈ ಮೊದಲಿನಿಂದಲೂ ಉದ್ಯಮ ಮಾಡುವುದಾಗಿ ಗೌತಮ್ ಹೇಳುತ್ತಲೇ ಬರುತ್ತಿದ್ದನು ಮತ್ತು ಉದ್ಯಮ ಆರಂಭಿಸಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಆತ ಬಿಸ್ನೆಸ್ ಶುರು ಮಾಡಿದ್ದಾನೆ. ಬ್ರೋಕರ್ ಆ್ಯಪ್ ಒಂದನ್ನು ಆರಂಭಿಸಿದ್ದಾನೆ. ಇದು ಸದ್ಯ ಸ್ಟಾರ್ಟ್ಅಪ್. ಆದರೆ, ಇದನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಆತನಿಗೆ ಇದೆ.
View this post on Instagram
ಹೇಳಿಕೇಳಿ ಗೌತಮ್ ದೊಡ್ಡ ಉದ್ಯಮಿ. ಉದ್ಯಮ ಮಾಡೋದು ಅವನ ರಕ್ತದಲ್ಲೇ ಇದೆ. ಈ ಕಾರಣದಿಂದ ಯಾವುದೇ ಅಂಜಿಕೆ ಇಲ್ಲದೆ ಉದ್ಯಮ ಆರಂಭಿಸಿದ್ದಾರೆ. ದೀವಾನ್ ಗ್ರೂಪ್ನ ಎದುರಾಳಿ ಎನಿಸಿಕೊಂಡಿರುವ ಸಂಸ್ಥೆ ಜೊತೆ ಗೌತಮ್ ಕೈ ಜೋಡಿಸಿರುವುದು ವಿಶೇಷ.
ಇದನ್ನೂ ಓದಿ: ‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್
ಈ ಎಲ್ಲಾ ಬೆಳವಣಿಗೆಯಿಂದ ಜಯದೇವ್ಗೆ ಭಯ ಶುರುವಾಗಿದೆ. ಇದು ಸ್ಟಾರ್ಟ್ ಮಾತ್ರವೇ ಆಗಿದೆ ಎಂದು ಆತ ಭಯ ಬಿದ್ದಿದ್ದ. ಆದರೆ, ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಎಂಬುದನ್ನು ಆತ ಸರಿಯಾಗಿ ಬಲ್ಲನು. ಹೀಗಾಗಿ, ಈಗಲೇ ಆತನಿಗೆ ಭಯ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.