ಗೌತಮ್ ನಿರ್ಧಾರಕ್ಕೆ ನಲುಗಿಹೋದ ಜಯದೇವ್; ಶುರುವಾಗಿದೆ ಚಿಂತೆ

ಗೌತಮ್ ನಿರ್ಧಾರಕ್ಕೆ ನಲುಗಿಹೋದ ಜಯದೇವ್; ಶುರುವಾಗಿದೆ ಚಿಂತೆ

‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದೀವಾನ್ ಈಗ ಎಲ್ಲರಲ್ಲೂ ನಡುಕ ಹುಟ್ಟಿಸಲು ಆರಂಭಿಸಿದ್ದಾನೆ. ಇಷ್ಟು ದಿನ ಸಾಮಾನ್ಯ ಕ್ಯಾಬ್ ಡ್ರೈವರ್ ಆಗಿದ್ದ ಆತ ಈಗ ಉದ್ಯಮ ಮಾಡೋಕೆ ಆರಂಭಿಸಿದ್ದಾನೆ. ಈ ವಿಷಯ ವೀಕ್ಷಕರಿಗೆ ಖುಷಿ ಕೊಟ್ಟಿದೆ. ಆದರೆ, ಕುಟುಂಬದವರೇ ಆದ ಜಯದೇವ್ಗೆ ಭಯ ಶುರುವಾಗಿದೆ. ದೀವಾನ್ ಕುಟುಂಬದ ಮತ್ತೊಂದು ಬ್ರ್ಯಾಂಚ್ ರೀತಿಯಲ್ಲಿ ಈ ಕಂಪನಿ ಮೂಡಿ ಬರುತ್ತಿದೆ. ‘ಅಮೃತಧಾರೆ’ ಧಾರಾವಾಹಿ ಮತ್ತಷ್ಟು ರೋಚಕತೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮೋಸ ಮಾಡಿ ಗೌತಮ್ ದೀವಾನ್ನ ಹೊರಕ್ಕೆ ಹಾಕಲಾಯಿತು. ಹೊರಕ್ಕೆ ಕಳಿಸುವಾಗ ಜಯದೇವ್ ಹಾಗೂ ಆತನ ತಾಯಿ ಶಕುಂತಲ ಎಲ್ಲಾ ಆಸ್ತಿಯನ್ನು ಬರೆಸಿಕೊಂಡಿದ್ದಾರೆ. ಅಲ್ಲದೆ, ಪತ್ನಿಯನ್ನು ಕೂಡ ಇವರು ದೂರ ಮಾಡಿದರು. ಈಗ ‘ಅಮೃತಧಾರೆ’ ಧಾರಾವಾಹಿ ಹೊಸ ಹಂತಕ್ಕೆ ಬಂದಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

 

View this post on Instagram

 

A post shared by Zee Kannada (@zeekannada)

ಗೌತಮ್ ದೀವಾನ್ ಕುಟುಂಬದವರ ಒತ್ತಾಯಕ್ಕೆ ಕಂಪನಿ ಆರಂಭಿಸಿದ್ದಾನೆ. ಈ ಕಂಪನಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ್ದು. ಆ್ಯಪ್ ತಯಾರಿಸುವ ಮೂಲಕ ಶೇರು ಮಾರುಕಟ್ಟೆ ಬ್ರೋಕರ್ ಆ್ಯಪ್ ಇದಾಗಿದೆ. ಈ ಕಂಪನಿ ಆರಂಭಿಸಿ ಗೌತಮ್ ಎಲ್ಲರಿಗೂ ಸಂದರ್ಶನ ಕೊಡುತ್ತಿದ್ದಾನೆ. ಇದನ್ನು ನೋಡಿ ಜಯದೇವ್ಗೆ ಟೆನ್ಶನ್ ಶುರುವಾಗಿದೆ.
ಗೌತಮ್ ಕಂಪನಿ ಆರಂಭಿಸುತ್ತಿದ್ದಂತೆ ಜಯದೇವ್ಗೆ ಟೆನ್ಶನ್ ಶುರುವಾಗಿದೆ.

ಇದನ್ನೂ ಓದಿ: ‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್

‘ಮುಂದಾಗುವುದಕ್ಕೆ ಈಗಲೇ ಚಿಂತೆ ಮಾಡಲು ಸಾಧ್ಯವೇ? ಆ ಕಂಪನಿ ಇನ್ನು ಆರಂಭ ಆಗಿಲ್ಲ. ಅದಕ್ಕೆಲ್ಲ ಈಗಲೇ ಚಿಂತಿಸಲು ಸಾಧ್ಯವಿಲ್ಲ. ಸ್ಟಾರ್ಟಪ್ ಕಂಪನಿಗಳು ಬರುತ್ತವೆ, ಹೋಗುತ್ತವೆ. ಅದಕ್ಕೆಲ್ಲ ಚಿಂತಿಸಬೇಕಿಲ್ಲ’ ಎಂದು ಆತ ಹೇಳಿದ್ದಾನೆ. ಆದರೆ, ಒಳಗೊಳಗೆ ಆತನಿಗೆ ಭಯ ಆಗುತ್ತಿದೆ. ಮುಂದೇನು ಎಂಬ ಪ್ರಶ್ನೆ ಆತನನ್ನು ಕಾಡುತ್ತಿದೆ.
ಗೌತಮ್ ಯಶಸ್ವಿ ಉದ್ಯಮಿ. ಆತ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಈಗಲೂ ಹಾಗೆಯೇ ಆಗುತ್ತದೆಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *