
ಚಿಕ್ಕಬಳ್ಳಾಪುರ, (ಮಾರ್ಚ್ 09): ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ ಹಾಗೂ ಹೆಂಡತಿ (Husband And Wife) ಮಧ್ಯೆ ಗಲಾಟೆಯಾಗಿದ್ದು, ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಆರ್.ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ವರಲಕ್ಷ್ಮಿ(25) ಎಂದು ಗುರುತಿಸಲಾಗಿದೆ. ಸ್ನೇಹಿತೆಯ ಪ್ರಿಯಕರ ವರಲಕ್ಷ್ಮಿ ಫೋನ್ಗೆ ಕರೆ ಮಾಡಿದ್ದ. ಆದ್ರೆ, ಕರೆಯನ್ನು ವರಲಕ್ಷ್ಮಿ ಗಂಡ ಗಂಗರಾಜು ರಿಸಿವ್ ಮಾಡಿದ್ದ. ಬಳಿಕ ಗಂಗರಾಜು ಪ್ರೇಮಿಗಳ ಮದ್ಯೆ ಮದ್ಯಸ್ಥಿಕೆ ವಹಿಸಿಬೇಡ ಎಂದು ಹೆಂಡ್ತಿಗೆ ಬೈದು ಬುದ್ಧಿವಾದ ಹೇಳಿದ್ದಾನೆ. ಆದ್ರೆ, ಅದೇನಾಯ್ತೋ ಏನೋ ವರಲಕ್ಷ್ಮಿ ಶವವಾಗಿ ಪತ್ನಿಯಾಗಿದ್ದು, ಪತಿಯೇ ವರಲಕ್ಷ್ಮೀಯನ್ನು ನೇಣಿಗೆ ಹಾಕಿ ಕೊಂದಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ವರಲಕ್ಷ್ಮಿ ಸ್ನೇಹಿತೆ ಶ್ರಾವಣಿಯ ಪ್ರಿಯಕರ ಕರೆ ಮಾಡಿದ್ದ. ಆತನ ಕರೆಯನ್ನು ವರಲಕ್ಷ್ಮಿ ಗಂಡ ಗಂಗರಾಜ್ ರಿಸೀವ್ ಮಾಡಿದ್ದ. ಬಳಿಕ ಗಂಗರಾಜ್, ಪ್ರೇಮಿಗಳ ಮಧ್ಯೆ ಮಧ್ಯಸ್ಥಿಕೆ ವಹಿಸಿಬೇಡ ಎಂದು ವರಲಕ್ಷ್ಮೀಗೆ ಬೈದು ಬುದ್ಧಿವಾದ ಹೇಳಿದ್ದಾನೆ. ಈ ವಿಚಾರ ಗಲಾಟೆ ತಾರಕಕ್ಕೇರಿದೆ. ನಂತರ ವರಲಕ್ಷ್ಮೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗಂಗರಾಜನೇ ವರಲಕ್ಷ್ಮೀಯನ್ನು ನೇಣಿಗೆ ಹಾಕಿ ಸಾಯಿಸಿದ್ದಾನೆಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ
ಇನ್ನು ಸಕಾಲಕ್ಕೆ ಮೃತಳ ಶವ ತೋರಿಸದ ಆರೋಪ ಮಾಡಿದ್ದು, ಪೆರೇಸಂದ್ರ ಪೊಲೀಸರು ಹಾಗೂ ಗುಡಿಬಂಡೆ ತಾಲೂಕು ಆಸ್ಪತ್ರೆ ವಿರುದ್ಧ ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.