Headlines

Video: ಪಿಜಿಯಿಂದ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆದಾಗ ತನ್ನ ಖರ್ಚು ವೆಚ್ಚ ವಿವರಿಸಿದ ಬೆಂಗಳೂರಿನ ಮಹಿಳೆ

Video: ಪಿಜಿಯಿಂದ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆದಾಗ ತನ್ನ ಖರ್ಚು ವೆಚ್ಚ ವಿವರಿಸಿದ ಬೆಂಗಳೂರಿನ ಮಹಿಳೆ

ಬೆಂಗಳೂರು, ಮಾರ್ಚ್ 11: ಬೆಂಗಳೂರು (Bengaluru) ಅಂದ್ರೇನೆ ದುಬಾರಿ ಅನ್ನೋದು ಅನೇಕರ ಅಭಿಪ್ರಾಯ. ಇಲ್ಲಿ ಬಾಡಿಗೆ ಮನೆಯಿಂದ ತಿಂಗಳ ಖರ್ಚು ವೆಚ್ಚವನ್ನು ತೂಗಿಸಿಕೊಳ್ಳುವಷ್ಟರಲ್ಲಿ ಕೈ ಖಾಲಿಯಾಗಿರುತ್ತದೆ. ಇದೀಗ ಬೆಂಗಳೂರಿನ ಮಹಿಳೆಗೂ ಇಂತಹದ್ದೇ ಅನುಭವವಾಗಿದೆ.  ಮಹಿಳೆಯೊಬ್ಬರು ಪಿಜಿಯಿಂದ 2ಬಿಹೆಚ್‌ಗೆ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಗೊಳ್ಳುವಾಗ 62,150 ರೂ ಖರ್ಚು ಮಾಡಿದೆ. ಈ ವೆಚ್ಚಗಳ ಬಗ್ಗೆ ನಿಮಗೆ ಯಾರು ಕೂಡ ಎಚ್ಚರಿಕೆ ಕೊಡಲ್ಲ ಎಂದು ಹೇಳಿದ್ದಾರೆ. ಈ ಮಹಿಳೆ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

krishnankuttyy ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಕೃಷ್ಣನಂದಿನಿ, ರೂಮ್‌ಮೇಟ್‌ನೊಂದಿಗೆ 2 ಬಿಹೆಚ್‌ಕೆ ಫ್ಲಾಟ್‌ಗೆ ಸ್ಥಳಾಂತರಗೊಳ್ಳುವಾಗ ಮಾಡಿದ ಖರ್ಚುಗಳನ್ನು ವಿವರಿಸಿದ್ದಾರೆ. ಬೆಂಗಳೂರಿನ ಬಾಡಿಗೆ ದುಬಾರಿ ಎಂದು ಎಲ್ಲರೂ ಹೇಳುತ್ತಾರೆ, ಆದರೆ ನೀವು ಪಿಜಿಯಿಂದ ಬೆಂಗಳೂರಿನ ಫ್ಲಾಟ್‌ಗೆ ಬದಲಾಯಿಸಿದಾಗ ನೀವು ನಿಜವಾಗಿಯೂ ಎಷ್ಟು ಹಣವನ್ನು ಖರ್ಚು ಮಾಡುತ್ತೀರಿ ಎಂದು ಯಾರೂ ನಿಮಗೆ ಹೇಳುವುದಿಲ್ಲ. ನಾನು ಇಲ್ಲಿ ಗುಪ್ತ ವೆಚ್ಚಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಫ್ಲಾಟ್‌ಗೆ 60,000 ರೂ ಠೇವಣಿ ಅಗತ್ಯವಿದ್ದ ಕಾರಣ, ನಾನು ಮತ್ತೆ ನನ್ನ ರೂಮ್‌ಮೇಟ್ ಮೊತ್ತವನ್ನು ಹಂಚಿಕೊಂಡೆವು. ಒಬ್ಬರು ತಲಾ 30,000 ರೂ ಪಾವತಿಸಬೇಕಾಯಿತು. 12,000 ರೂ ಬ್ರೋಕರೇಜ್ ಶುಲ್ಕಗಳು ವಿಧಿಸಲಾಯಿತು. ಒಬ್ಬರಿಗೆ ಮೊದಲ ತಿಂಗಳ ಬಾಡಿಗೆ 10,500 ರೂ ಆಗಿದ್ದು, ಫ್ಲಾಟ್‌ನಲ್ಲಿ ಉಪಕರಣಗಳು ಇಲ್ಲದ ಕಾರಣ, ಇಬ್ಬರೂ ಸೇರಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ವಾಟರ್ ಪ್ಯೂರಿಫೈಯರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆದುಕೊಂಡೆವು. ಇದೆಲ್ಲಕ್ಕೂ ತಿಂಗಳಿಗೆ 2,500 ರೂ ವೆಚ್ಚವಾಗುತ್ತದೆ ಎಂದು ವಿವರಿಸಿದ್ದಾರೆ.

ಎಸಿಟಿ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕೆ ತಿಂಗಳಿಗೆ ಸುಮಾರು 930 ರೂ ವೆಚ್ಚವಾಗುತ್ತದೆ. ಇದಕ್ಕಾಗಿ ಮೂರು ತಿಂಗಳಿಗೆ ಸುಮಾರು 2,700 ರೂ ಮುಂಗಡ ಪಾವತಿ ಮಾಡಿದೆವು. ಸಿಲಿಂಡರ್ ಮತ್ತು ಸ್ಟೌವ್ ಸೇರಿದಂತೆ 4200 ರೂ ರೂ ತಗುಲಿತು. ದಿನಸಿ ಸಾಮಾನುಗಳಿಗಾಗಿ ತಲಾ 4,500 ರೂ ಖರ್ಚು ಮಾಡಿದ್ದೇವೆ. ಮೊದಲ ಎರಡು ದಿನಗಳಲ್ಲಿ ನಾವು ಮೂಲ ದಿನಸಿಗಾಗಿ 10 ಅಥವಾ 12 ಬಾರಿ ಜೆಪ್ಟೊದಲ್ಲಿ  ಆರ್ಡರ್ ಮಾಡಿದ್ದೇವೆ. ಆದರೆ ನಾವು ಏನನ್ನಾದರೂ ಖರೀದಿಸಿದಾಗಲೆಲ್ಲಾ ಇನ್ನೇನನ್ನು ಕಳೆದುಕೊಂಡಿದ್ದೇವೆ ಎಂದು ನಮಗೆ ಅರಿವಾಯಿತು. ಇನ್ನು ಉಳಿದಂತೆ ಒಂದು ಹಾಸಿಗೆಗೆ 1,900 ರೂ ಮತ್ತು 4,800 ಗೆ ಆನ್‌ಲೈನ್‌ನಲ್ಲಿ ಖರೀದಿಸಿದ ಹಾಸಿಗೆ ಸೇರಿವೆ. ಎಲ್ಲವನ್ನು ಸೇರಿಸಿದಾಗ ಒಟ್ಟು 62,150 ರೂ ಖರ್ಚಾಯಿತು ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಬೆಂಗಳೂರಿನ ಜನ್ರು ತುಂಬಾ ಒಳ್ಳೆಯವ್ರು; ಪ್ರಾಮಾಣಿಕ ಅನುಭವ ಹಂಚಿಕೊಂಡ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮ್ಮ ಖರ್ಚು ವೆಚ್ಚಗಳು ನಿಖರವಾಗಿದೆ. ಆದರೆ, ನೀವು ಬೇರೆಡೆಗೆ ಶಿಫ್ಟ್ ಆಗುವಾಗ ನಿಮ್ಮನ್ನು ನಿಜವಾಗಿಯೂ ಈ ಗುಪ್ತ ವೆಚ್ಚಗಳು ಅಚ್ಚರಿ ಪಡಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕಳೆದ ವರ್ಷ ನಾನು ನನ್ನ ಫ್ಲಾಟ್‌ಗೆ ಸ್ಥಳಾಂತರಗೊಂಡಾಗ ಬಹುತೇಕ ಅಷ್ಟೇ ಹಣವನ್ನು ಖರ್ಚು ಮಾಡಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೊಸ ಮನೆಗೆ ಶಿಫ್ಟ್ ಆಗುವುದು ಸುಲಭದ ಮಾತಲ್ಲ. ಕೈಯಲ್ಲಿ ಅಷ್ಟೇ ದುಡ್ಡು ಇಟ್ಟುಕೊಳ್ಳೋದು ಸೇಫ್ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *