ರಿಯಲ್ ಎಸ್ಟೇಟ್ ಏಜೆಂಟ್​ನನ್ನು ಅಪಹರಿಸಿ ಹತ್ಯೆ ಕೇಸ್​: ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ

ರಿಯಲ್ ಎಸ್ಟೇಟ್ ಏಜೆಂಟ್​ನನ್ನು ಅಪಹರಿಸಿ ಹತ್ಯೆ ಕೇಸ್​: ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ

ಆನೇಕಲ್, ಮಾರ್ಚ್​ 11: ಆನೇಕಲ್‌ನಲ್ಲಿ ಕಿಡ್ನ್ಯಾಪ್ (kidnapped) ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್​ ತಮಿಳುನಾಡಿನಲ್ಲಿ ಶವವಾಗಿ ಪತ್ತೆ ಪ್ರಕರಣಕ್ಕೆ ಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಠಾಣೆ ಪೊಲೀಸರಿಂದ ಓರ್ವ ಅಪ್ರಾಪ್ತ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಮೋಹನ್ ಬಾಬು, ತೇಜಸ್, ದರ್ಶನ್, ಲಿಖಿತ್, ನಿಖಿಲ್, ಆನಂದ್​, ಪ್ರಶಾಂತ್ ಮತ್ತು ಓರ್ವ ಅಪ್ರಾಪ್ತ ಬಂಧಿತರು. ಆರೋಪಿಗಳು ಕಿಡ್ನ್ಯಾಪ್ ಮಾಡಲು ಬಳಸಿದ್ದ ಹುಂಡೈ ಕಾರನ್ನು ವಶಕ್ಕೆ ಪಡೆಯಲಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿ ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ನಡೆದದ್ದೇನು?

ಗೋಪಾಲ್ ಅಲಿಯಾಸ್​ ಗೋಪಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೊನ್ನಕಳಶಾಪುರ ನಿವಾಸಿ. ಈತನ ಸಂಬಂಧಿ ಮೋಹನ್ ಬಾಬು ಆ್ಯಂಡ್​ ಗ್ಯಾಂಗ್​ನಿಂದ ಬರ್ಬರವಾಗಿ ಕೊಲೆಯಾಗಿದ್ದಾನೆ. ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಬರುತ್ತಿದ್ದ ವೇಳೆ ಅತ್ತಿಬೆಲೆ ಮತ್ತು ಆನೇಕಲ್ ಮಾರ್ಗ ಮಧ್ಯೆ ಕರ್ಪೂರು ಬಳಿ ಗೂಡ್ಸ್ ವಾಹನ ಗೋಪಾಲ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿ ಹಿಂಬಾಲಿಸಿ ಬಂದ ಐದಾರು ಮಂದಿ ಗೋಪಾಲ್ ಮತ್ತು ಸ್ನೇಹಿತ ಸತೀಶ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಕಿರುಚಾಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಗೋಪಾಲ್​ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಆನೇಕಲ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಶವ ತಮಿಳುನಾಡಿನಲ್ಲಿ ಪತ್ತೆ

ಗೋಪಾಲ್ ಸ್ನೇಹಿತ ಸತೀಶ್ ಕೂಡಲೇ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತ ಹಳೆ ದ್ವೇಷ ಹಿನ್ನೆಲೆ ಮೋಹನ್ ಬಾಬು ಕಿಡ್ನ್ಯಾಪ್ ಮಾಡಿಸಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದರು. ಸೋಮವಾರ ಬೆಳಗ್ಗೆ ತಮಿಳುನಾಡಿನ ಡೆಂಕಣೀಕೋಟೆ ಬಳಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಗೋಪಾಲ್ ಶವ ಪತ್ತೆಯಾಗಿತ್ತು. ಇತ್ತ ಆಕ್ರೋಶಗೊಂಡ ಮೃತ ಗೋಪಾಲ್ ಕುಟುಂಬದವರು ಮತ್ತು ಸಂಬಂಧಿಗಳು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು ಮಾತ್ರವಲ್ಲದೆ ಆರೋಪಿ ಮೋಹನ್ ಬಾಬು ಮನೆ ಮೇಲೆ ಕಲ್ಲು ತೂರಾಟ ಕೂಡ ಮಾಡಿದ್ದರು.

ತಾನೂ ಆಸೆಪಟ್ಟ ಯುವತಿ ಸಿಗಲಿಲ್ಲವೆಂದು ದ್ವೇಷ

ಮೃತ ಗೋಪಾಲ್ ಮತ್ತು ಆರೋಪಿ ಮೋಹನ್ ಬಾಬು ಮುಂಚೆ ಜೊತೆಯಾಗಿಯೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಆದರೆ ಹತ್ತು ವರ್ಷಗಳ ಹಿಂದೆ ಗೋಪಾಲ್ ಸ್ವಾತಿ ಎಂಬ ಯುವತಿಯನ್ನು ವಿವಾಹವಾಗಿದ್ದು, ಆರೋಪಿ ಮೋಹನ್ ಬಾಬುಗೆ ದ್ವೇಷಕ್ಕೆ ಕಾರಣವಾಗಿತ್ತು. ಗೋಪಾಲ್ ಮದುವೆ ಆದ ಸ್ವಾತಿಯನ್ನು ಮದುವೆ ಆಗಲು ಆರೋಪಿ ಮೋಹನ್ ಬಾಬು ಆಸೆ ಪಟ್ಟಿದ್ದ. ಆದರೆ ಗೋಪಾಲ್ ಹಿರಿಯರ ಸಮ್ಮುಖದಲ್ಲಿ ಮದುವೆ ಆಗಿದ್ದ. ಮದುವೆ ಬಳಿಕ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಜೊತೆಗೆ ವ್ಯವಹಾರದಲ್ಲೂ ಗೋಪಾಲ್ ಚೆನ್ನಾಗಿ ಬೆಳೆಯುವುದನ್ನು ಸಹಿಸದ ಮೋಹನ್ ಬಾಬು ಎರಡು ವರ್ಷದ ಹಿಂದೆ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಬಿಟ್ಟು ಕಳುಹಿಸಿದ್ದ. ಅಲ್ಲದೆ ಪದೇ ಪದೇ ನನ್ನ ವ್ಯವಹಾರಗಳಿಗೆ ನೀನು ಕೈ ಹಾಕುತ್ತಿಯಾ ಎಂದು ಮೋಹನ್ ಬಾಬು ಕೊಲೆ ಬೆದರಿಕೆ ಹಾಕುತ್ತಿದ್ದರು ಗೋಪಾಲ್ ಮಾತ್ರ ಪತ್ನಿ ಬಳಿ ಹೇಳಿಕೊಂಡು ರಾಜಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದನಂತೆ. ಆದರೂ ಮೋಹನ್ ಬಾಬು ದ್ವೇಷವನ್ನ ಬಿಡದೆ ಕಳೆದ ಭಾನುವಾರ 25 ಲಕ್ಷ ರೂ ಸುಪಾರಿ ನೀಡಿ ಗೋಪಾಲ್​ನನ್ನು ಕಿಡ್ನ್ಯಾಪ್ ಮಾಡಿಸಿ ಕೊಲೆ ಮಾಡಿಸಿದ್ದಾಗಿ ಆರೋಪಿ ಮೋಹನ್ ಬಾಬು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *