‘ಧುರಂಧರ್ 2’ ಅಬ್ಬರ: 3.50 ಲಕ್ಷ ಟಿಕೆಟ್ ಮಾರಾಟ, ಗಳಿಸಿದ ಮೊತ್ತ ಎಷ್ಟು?

‘ಧುರಂಧರ್ 2’ ಅಬ್ಬರ: 3.50 ಲಕ್ಷ ಟಿಕೆಟ್ ಮಾರಾಟ, ಗಳಿಸಿದ ಮೊತ್ತ ಎಷ್ಟು?

ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಸಿನಿಮಾಕ್ಕೆ ಸಖತ್ ಹೈಪ್ ದೊರೆತಿದೆ. ಮಾರ್ಚ್ 18ರಂದು ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ದೇಶದ ಹಲವು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದ್ದು, ಪ್ರೀಮಿಯರ್ ಶೋ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳಾಗಿವೆ. ಭಾರಿ ಮೊತ್ತಕ್ಕೆ ಈ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್​​ಗಳು ಮಾರಾಟ ಆಗುತ್ತಿವೆ. ಟಿಕೆಟ್ ಬೆಲೆ ಹೆಚ್ಚಿದ್ದರೂ ಸಹ ಅಡ್ವಾನ್ಸ್ ಬುಕಿಂಗ್ ಜೋರಾಗಿ ಆಗುತ್ತಿದ್ದು, ಈ ವರೆಗೆ ಸುಮಾರು 3.50 ಲಕ್ಷ ಟಿಕೆಟ್​​ಗಳು ಮಾರಾಟವಾಗಿವೆ.

‘ಧುರಂಧರ್ 2’ ಸಿನಿಮಾದ ಪೇಯ್ಡ್ ಪ್ರೀಮಿಯರ್​​ಗೆ 3.50 ಲಕ್ಷಕ್ಕೂ ಹೆಚ್ಚು ಟಿಕೆಟ್​​ಗಳು ಮಾರ್ಚ್ 10ರ ವೇಳೆಗೆ ಮಾರಾಟವಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ವೇಗವಾಗಿ ಟಿಕೆಟ್ ಮಾರಾಟವಾಗುತ್ತಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಪ್ರೀಮಿಯರ್ ಶೋಗೆ ಇನ್ನೂ ಒಂದು ವಾರ ಬಾಕಿ ಇದ್ದು, ಈ ಸಂಖ್ಯೆ ದುಪ್ಪಟ್ಟಾಗುವ ದಟ್ಟ ಸಾಧ್ಯತೆ ಇದೆ. ಕೇವಲ ಪೇಯ್ಡ್ ಪ್ರೀಮಿಯರ್​​​ನಿಂದಲೇ ‘ಧುರಂಧರ್ 2’ ಸಿನಿಮಾಕ್ಕೆ 40 ರಿಂದ 50 ಕೋಟಿ ಕಲೆಕ್ಷನ್ ಆಗುವ ಸಾಧ್ಯತೆ ಇದೆ.

ಮುಂಬೈ, ದೆಹಲಿ ಬೆಂಗಳೂರು, ಹೈದರಾಬಾದ್​​ ಅಂಥಹ ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್​​ಗಳು ಭರ್ಜರಿಯಾಗಿ ಮಾರಾಟ ಆಗುತ್ತಿವೆ. ಮುಂಬೈ, ಬೆಂಗಳೂರು ಮತ್ತು ದೆಹಲಿಯಲ್ಲಂತೂ ಟಿಕೆಟ್ ಬೆಲೆ ಗಗನಕ್ಕೇರಿವೆ. ಮುಂಬೈನಲ್ಲಿ ಗರಿಷ್ಟ ಟಿಕೆಟ್ ಬೆಲೆ 3100 ರೂಪಾಯಿಗಳಿವೆ. ಬೆಂಗಳೂರಿನಲ್ಲಿ 2200 ರೂಪಾಯಿಗಳಿವೆ. ದೆಹಲಿಯಲ್ಲಿಯೂ ಸಹ ಸರಿ ಸುಮಾರಿ ಇಷ್ಟೇ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ.

ಇದನ್ನೂ ಓದಿ:ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸುನಾಮಿ: 1 ಟಿಕೆಟ್ ಬೆಲೆ 3100 ರೂಪಾಯಿ

ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾದ ಮೊದಲ ಭಾಗದ ಯಶಸ್ಸಿನ ನಂತರ, ಅದರ ಮುಂದುವರಿದ ಭಾಗವಾದ ‘ಧುರಂಧರ್ 2’ ಮೇಲೆ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿದೆ. ಇದೇ ಕಾರಣಕ್ಕೆ ಸಿನಿಮಾದ ಪೇಯ್ಡ್ ಪ್ರೀಮಿಯರ್​​ಗಳು ಹೌಸ್​​ಫುಲ್ ಆಗುತ್ತಿವೆ. ಸಿನಿಮಾದ ರಿಲೀಸ್ ದಿನವೂ ಸಹ ಸಿನಿಮಾಕ್ಕೆ ಭರ್ಜರಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದ್ದು, ಮೊದಲ ದಿನವೇ 100 ಕೋಟಿಗೂ ಹೆಚ್ಚಿನ ಗಳಿಕೆ ಆಗುವ ನಿರೀಕ್ಷೆ ಇದೆ.

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾನಲ್ಲಿ ಅಕ್ಷಯ್ ಖನ್ನ, ಸಂಜಯ್ ದತ್, ಮಾಧವನ್, ಅರ್ಜುನ್ ರಾಮ್​​ಪಾಲ್ ಸೇರಿದಂತೆ ಹಲವು ಪ್ರಮುಖ ನಟರುಗಳು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *