ಅಡ್ವಾನ್ಸ್ ಬುಕಿಂಗ್​​ನಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಧುರಂಧರ್ 2’; ಹೊಸ ದಾಖಲೆ

ಅಡ್ವಾನ್ಸ್ ಬುಕಿಂಗ್​​ನಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಧುರಂಧರ್ 2’; ಹೊಸ ದಾಖಲೆ

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಹೊಸ ದಾಖಲೆ ಬರೆಯಲು ರೆಡಿ ಆಗಿದೆ. ಈ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಹಿಂದಿನ ದಿನ ಅಂದರೆ ಮಾರ್ಚ್​ 18ರಂದು ಸಿನಿಮಾಗೆ ಸಾಕಷ್ಟು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಶೋ ಹೌಸ್​​​ಫುಲ್ ಆಗಿದೆ. ಇದರಿಂದ ಸಿನಿಮಾಗೆ ದೊಡ್ಡ ಮೊಟ್ಟದಲ್ಲಿ ಹಣ ಹರಿದು ಬರುತ್ತಿದೆ. ಅಡ್ವಾನ್ಸ್ ಬುಕಿಂಗ್​​ನಿಂದ ಚಿತ್ರಕ್ಕೆ ವಿಶ್ವಾದ್ಯಂತ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

‘ಧುರಂಧರ್ 2’ ಸಿನಿಮಾದ ಎಲ್ಲಾ ಟಿಕೆಟ್​​​ಗಳನ್ನು ಬಿಡುಗಡೆ ಮಾಡಿಲ್ಲ. ಕೇವಲ ಮಾರ್ಚ್ 18ರ ಟಿಕೆಟ್​​​ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಮಾರ್ಚ್ 19ರ ಟಿಕೆಟ್​​​ಗಳನ್ನು ಕೂಡ ಬುಕಿಂಗ್​​ ಮಾಡುವ ಅವಕಾಶ ನೀಡಿದರೆ ಸಿನಿಮಾ ಅಬ್ಬರಿಸೋದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಈಗಾಗಲೇ ದೇಶಾದ್ಯಂತ 4.7 ಲಕ್ಷ ಟಿಕೆಟ್​​​ಗಳು ಸೇಲ್ ಆಗಿವೆ. ಇದರಿಂದ ಭಾರತದಲ್ಲಿ 24.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಪವನ್ ಕಲ್ಯಾಣ್ ಅವರ ‘ಒಜಿ’ ಸಿನಿಮಾ ಪ್ರೀಮಿಯರ್ ಶೋನಿಂದ 25 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ. ಆ ದಾಖಲೆಯನ್ನು ‘ಧುರಂಧರ್ 2’ ಸುಲಭದಲ್ಲಿ ಬ್ರೇಕ್ ಮಾಡಲಿದೆ ಎಂದು ಊಹಿಸಲಾಗಿದೆ.

‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​​ನಲ್ಲಿ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಮೂಡಿದೆ. ‘ಧುರಂಧರ್ 2’ ಚಿತ್ರದಲ್ಲಿ ಅಕ್ಷಯ್ ಖನ್ನಾ ನಟಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ. ‘ಧುರಂಧರ್’ ಚಿತ್ರದಲ್ಲಿ ನಟ ಅಕ್ಷಯ್ ಖನ್ನಾ ರೆಹಮಾನ್ ದಕೈತ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ರೆಹಮಾನ್ ಕೊಲ್ಲಲ್ಪಟ್ಟರು. ಆದರೆ ಅವರು ‘ಧುರಂಧರ್ 2’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಸಾವಿರ ಪರದೆಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ ‘ಧುರಂಧರ್’ ಸಿನಿಮಾ

ಈ ಬಾರಿ, ರೆಹಮಾನ್ ದಕೈತ್ ಅವರ ಇತಿಹಾಸವು ಚಿತ್ರದಲ್ಲಿ ಹೇಳುವ ಸಾಧ್ಯತೆ ಇದೆ. ಟ್ರೇಲರ್‌ನಲ್ಲಿ ಅಕ್ಷಯ್ ಖನ್ನಾ ಅವರನ್ನು ತೋರಿಸಿಲ್ಲ. ಅದಾದ ನಂತರ, ಅನೇಕ ಚರ್ಚೆಗಳು ಹುಟ್ಟಿಕೊಂಡಿವೆ… ಇದರಿಂದಾಗಿ, ಅನೇಕ ಜನರು ‘ಧುರಂಧರ್ 2’ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *