Video: 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ; ಟ್ರಾಫಿಕ್ ಸಮಸ್ಯೆ ವಿವರಿಸಿದ ಬೆಂಗಳೂರಿಗ

Video: 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ; ಟ್ರಾಫಿಕ್ ಸಮಸ್ಯೆ ವಿವರಿಸಿದ ಬೆಂಗಳೂರಿಗ

ಬೆಂಗಳೂರು, ಮಾರ್ಚ್ 15:ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯ. ಅದರಲ್ಲೂ ಈ ಬೆಂಗಳೂರಿನಲ್ಲಿ ಬೆಳಗ್ಗೆ ಸಂಜೆಯಾದರಂತೂ ಟ್ರಾಫಿಕ್‌ನಿಂದ ರಸ್ತೆಗಳು ಬ್ಲಾಕ್ ಆಗುತ್ತದೆ. ಪೀಕ್‌ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಆಫೀಸಿಗೆ ಹೋಗುವ ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಈ ವ್ಯಕ್ತಿ 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ ಎಂದು ನಗರದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಈ ವಿಡಿಯೋ ಎತ್ತಿ ತೋರಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಸಮಸ್ಯೆ ಹೊಸದೇನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಕಜ್ ಹುರಿಯಾ (pankaj.huria.1209) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡ ವಿಡಿಯೋಗೆ ಇದು ಬೆಂಗಳೂರಿನ ವಾಸ್ತವ ಎಂದು ಶೀರ್ಷಿಕೆ ನೀಡಲಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗ ತಮ್ಮ ಈ ಪ್ರಯಾಣವನ್ನು ದಾಖಲಿಸುವ ವಿಡಿಯೋ ಮಾಡಿದ್ದಾರೆ. ಬೆಳಿಗ್ಗೆ 9.15 ಕ್ಕೆ ಮನೆಯಿಂದ ಹೊರಟು ಕೇವಲ 6.5 ಕಿಲೋಮೀಟರ್ ದೂರದಲ್ಲಿರುವ ತನ್ನ ಕಚೇರಿಗೆ ಹೋದೆನು ಎಂದು ವಿವರಿಸಿದ್ದಾರೆ. ಆದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಕಳೆದ ನಂತರವೂ, ಭಾರೀ ದಟ್ಟಣೆಯಂತೂ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

 

View this post on Instagram

 

A post shared by Pankaj Huria (@pankaj.huria.1209)

ಈ ವಿಡಿಯೋದಲ್ಲಿ ಅವರು ತಮ್ಮ ಕಾರಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಗೂಗಲ್ ನಕ್ಷೆಗಳಲ್ಲಿ ತೋರಿಸುವುದನ್ನು ಕಾಣಬಹುದು. ಈ ನ್ಯಾವಿಗೇಷನ್ ಪರದೆಯು ಇನ್ನೂ ಸುಮಾರು 4.4 ಕಿಲೋಮೀಟರ್ ಪ್ರಯಾಣಿಸಬೇಕಾಗಿರುವುದನ್ನು ತೋರಿಸಿದೆ.

ಇದನ್ನೂ ಓದಿ: ಭಾರತದಲ್ಲಿ ನೆಲೆಸುವ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕೆನಡಿಯನ್ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಬೆಂಗಳೂರಿನಲ್ಲಿರುವ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಡುವುದು ಅನಿವಾರ್ಯ ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿನ ನೆಲೆಸಿರುವ ಅನೇಕರ ಪರಿಸ್ಥಿತಿ ಹೇಳಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದೆಹಲಿಯಲ್ಲೂ ಇದೇ ಪರಿಸ್ಥಿತಿ. ಇಷ್ಟೇ ದೂರವನ್ನು ಕ್ರಮಿಸಲು 45 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *