ಬುಮ್ರಾಗೆ ಬೌಲಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದೇ ನಾನು: ಪಾಕ್ ಮೂಲದ ವೇಗಿ

ಬುಮ್ರಾಗೆ ಬೌಲಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದೇ ನಾನು: ಪಾಕ್ ಮೂಲದ ವೇಗಿ

ಪಾಕಿಸ್ತಾನ್ ಮೂಲದ ಯುಎಇ ಕ್ರಿಕೆಟಿಗ ಝಹೂರ್ ಖಾನ್ (Zahoor Khan) ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಭಾರತದ ಸ್ಟಾರ್ ಬೌಲರ್ ಜಸ್​ಪ್ರೀತ್ ಬುಮ್ರಾ ಅವರ ಪ್ರಸಿದ್ಧ ‘ಸ್ಲೋವರ್ ಬಾಲ್’ (Slower ball) ತಂತ್ರವನ್ನು ತಾನೇ ಕಲಿಸಿಕೊಟ್ಟಿದ್ದು ಎಂದು ಅವರು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಝಹೂರ್ ಖಾನ್,  ಜಸ್​ಪ್ರೀತ್ ಬುಮ್ರಾ ಇತ್ತೀಚೆಗೆ ಸ್ಲೋವರ್ ಎಸೆತಗಳನ್ನು ಎಸೆಯುತ್ತಿದ್ದಾರೆ. ಈ ಎಸೆತಗಳನ್ನು ಹೇಳಿಕೆ ಕೊಟ್ಟಿದ್ದು ನಾನು. ಇದಾದ ಬಳಿಕ ಬುಮ್ರಾ ನಿಧಾನಗತಿಯ ಎಸೆತಗಳ ಮೂಲಕ ಯಶಸ್ಸು ಸಾಧಿಸುತ್ತಿದ್ದಾರೆ ಎಂದಿದ್ದಾರೆ.

2019/2020ರಲ್ಲಿ ಯುಎಇ ನಲ್ಲಿ ನಡೆದ ಐಪಿಎಲ್ ಸಮಯದಲ್ಲಿ ನಾನು ಮುಂಬೈ ಇಂಡಿಯನ್ಸ್ ತಂಡ ನೆಟ್ ಬೌಲರ್ ಆಗಿದ್ದೆ.  ಅಭ್ಯಾಸದ ವೇಳೆ ನಾನುರ್ ಎಸೆದ ಸ್ಲೋವರ್ ಬೌನ್ಸರ್  ಬ್ಯಾಟರ್ ಅನ್ನು ಸಂಪೂರ್ಣವಾಗಿ ಕಕ್ಕಾಬಿಕ್ಕಿ ಮಾಡಿತ್ತು. ಇದನ್ನು ಗಮನಿಸಿದ ಅಂದಿನ ಮುಂಬೈ ಕೋಚ್‌ಗಳಾದ ಶೇನ್ ಬಾಂಡ್ ಮತ್ತು ಮಹೇಲಾ ಜಯವರ್ಧನೆ ಆಶ್ಚರ್ಯಚಕಿತರಾಗಿದ್ದರು.

ಇದರಿಂದ ಪ್ರಭಾವಿತರಾದ ಜಸ್​ಪ್ರೀತ್ ಬುಮ್ರಾ, ನನ್ನ ಬಳಿ ಬಂದು “ಪಾಜಿ, ನಿಮ್ಮ ಗ್ರಿಪ್ (ಚೆಂಡನ್ನು ಹಿಡಿಯುವ ರೀತಿ) ಹೇಗಿದೆ? ನನಗೆ ತೋರಿಸಿಕೊಡಿ” ಎಂದು ಕೇಳಿದ್ದರು.  ಇದನ್ನು ನಾನು ವಿವರಿಸಿಕೊಟ್ಟಿದ್ದೆ.

ಇನ್ನು ಕಲಿತ ಬಳಿಕ ಜಸ್​ಪ್ರೀತ್ ಬುಮ್ರಾ “ಇದು ನೆಕ್ಸ್ಟ್ ಲೆವೆಲ್ ತಂತ್ರ” ಎಂದು ಹೊಗಳಿದ್ದರು ಎಂದು ಝಹೂರ್ ಖಾನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತ ಜಸ್​ಪ್ರೀತ್ ಬುಮ್ರಾ ಇತ್ತೀಚಿನ ದಿನಗಳಲ್ಲಿ ಯಾರ್ಕರ್ ಎಸೆತಗಳೊಂದಿಗೆ ಸ್ಲೋವರ್ ಎಸೆತಗಳನ್ನು ಎಸೆಯುತ್ತಿರುವುದಂತು ನಿಜ. ಈ ರಣತಂತ್ರ ರೂವಾರಿ ನಾನೇ ಎಂದು ಯುಎಇ ವೇಗಿ ಝಹೂರ್ ಖಾನ್ ಹೇಳಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ಎಷ್ಟು ನಿಜ ಎಂಬುದು ಜಸ್​ಪ್ರೀತ್ ಬುಮ್ರಾ ಅವರಿಗೆ ಮಾತ್ರ ಗೊತ್ತಿದೆ.

ಇದನ್ನೂ ಓದಿ: IPL ​ನಲ್ಲಿ ಮಹತ್ವದ ಬದಲಾವಣೆ: ಒಂದು ತಂಡಕ್ಕೆ ಎಷ್ಟು ಪಂದ್ಯಗಳು?

ಇನ್ನು ಝಹೂರ್ ಖಾನ್ ಯುಎಇ ಪರ ಈವರೆಗೆ 62 ಏಕದಿನ ಹಾಗೂ 57 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಏಕದಿನ ಕ್ರಿಕೆಟ್​ನಲ್ಲಿ 93 ಹಾಗೂ ಟಿ20 ಕ್ರಿಕೆಟ್​ನಲ್ಲಿ 72 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದಾಗ್ಯೂ 2024 ರ ಬಳಿಕ ಝಹೂರ್ ಖಾನ್ ಯುಎಇ ಪರ ಒಂದೇ ಒಂದು ಪಂದ್ಯವಾಡಿಲ್ಲ ಎಂಬುದು ಉಲ್ಲೇಖಾರ್ಹ.

 

Source link

Leave a Reply

Your email address will not be published. Required fields are marked *