
ಇಂದಿನ ಪಂಚಾಂಗ
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧ, ಕರಣ : ಭದ್ರ, ಸೂರ್ಯೋದಯ – 06 – 31 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:04, ಯಮಗಂಡ ಕಾಲ 09:32 – 11:03, ಗುಳಿಕ ಕಾಲ 12:33 – 14:03
ಮೇಷ ರಾಶಿ : ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ಹೊರಗಿನ ಆಹಾರವನ್ನು ತ್ಯಜಿಸಲು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಮಕ್ಕಳ ಮೇಲೆ ಒಂದು ಕಣ್ಣಿರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಗುವುದು. ಅನಾಗರಿಕರಂತೆ ವರ್ತಿಸುವುದು ಬೇಡ.
ವೃಷಭ ರಾಶಿ : ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ನೀವು ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ವ್ಯಾಪಾರವನ್ನು ನಮ್ರರಾಗಿ ಮಾಡಿ, ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ. ದೂರ ಎಲ್ಲಿಗಾದರೂ ಹೋಗಬೇಕು ಎನಿಸಬಹುದು.
ಮಿಥುನ ರಾಶಿ : ವಿದ್ಯಾರ್ಥಿಗಳು ನಿರೀಕ್ಷೆಯಂತೆ ಫಲಿತಾಂಶ ಪಡೆದು ಆತ್ಮವಿಶ್ವಾಸವನ್ನು ಹೆಚ್ಚುಮಾಡಿಕೊಳ್ಳುವರು. ಭಾವೋದ್ವೇಗದಲ್ಲಿ ತೆಗೆದುಕೊಂಡ ನಿರ್ಧಾರವು ತಪ್ಪು ಎಂದು ಸಾಬೀತುಪಡಿಸಬಹುದು. ಮನಸ್ಸು ಸ್ವಲ್ಪ ನಿರಾಶೆಗೊಳ್ಳಬಹುದು. ಯಾವುದಾದರೂ ಒಂದು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶವು ಬರಬಹುದು. ನಿಮ್ಮ ಮೇಲೂ ನಿಮ್ಮವರ ಮೇಲೆ ನಂಬಿಕೆ ಇಟ್ಟುಕೊಳ್ಳಿ. ದೇಹದ ಅಸಮತೋಲನದಿಂದ ನಿಮಗೆ ತೊಂದರೆಯಾದೀತು.
ಕರ್ಕಾಟಕ ರಾಶಿ : ಆದಾಯಕ್ಕೆ ಯೋಗ್ಯವಾಗಿ ವೆಚ್ಚ ಇರಲಿ. ವ್ಯವಹಾರದ ದೃಷ್ಟಿಯಿಂದ ಸಮಯವು ಲಾಭದಾಯಕವಾಗಿರುತ್ತದೆ. ಕೌಟುಂಬಿಕ ಜೀವನ ಸುಖಕರವಾಗಿರಬಹುದು. ಮಾನಸಿಕ ಒತ್ತಡ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು. ಹೆಚ್ಚು ಪ್ರಯತ್ನವಿದ್ದರೂ ಸ್ವಲ್ಪ ಫಲವು ಇರಲಿದೆ. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು. ಅಂತರಂಗದ ಶುದ್ಧೀಕರಣ ಮಾಡಿಕೊಳ್ಳುವುದು ನಿಮಗೆ ಮುಖ್ಯವಾಗಲಿದೆ.
ಸಿಂಹ ರಾಶಿ : ವ್ಯವಹಾರದಲ್ಲಿ ಕೆಲವು ಸಮಸ್ಯೆಗಳು ಮತ್ತು ತೊಂದರೆಗಳು ಉಂಟಾಗುತ್ತವೆ. ನಿಮ್ಮ ಆಸೆಯನ್ನು ಇನ್ನೊಬ್ಬರ ಎದುರು ಪ್ರಕಟಪಡಿಸಲು ಮುಜುಗರ ಆಗಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ಪ್ರಭಾವೀ ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ. ಕೆಲವು ಮಾನಸಿಕ ಸ್ಥಿತಿಯನ್ನು ನೀವು ಬದಲಿಸಿಕೊಳ್ಳಬೇಕಾದೀತು.
ಕನ್ಯಾ ರಾಶಿ : ಹಿತಶತ್ರುಗಳ ಸಹಾಯದಿಂದ ನಿಮ್ಮ ಯಾವುದೇ ಆಸೆಗಳನ್ನು ಈಡೇರಿಸಲಾಗುವುದು. ತರಾತುರಿಯಲ್ಲಿ ಮತ್ತು ಭಾವೋದ್ವೇಗದಲ್ಲಿ ತೆಗೆದುಕೊಂಡ ನಿರ್ಧಾರವು ತಪ್ಪು ಎಂದು ಸಾಬೀತುಪಡಿಸಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು.
ತುಲಾ ರಾಶಿ : ನಿಮ್ಮ ವೈಯಕ್ತಿಕ ವಿಚಾರದಲ್ಲಿ ಯಾವುದೇ ಹೊರಗಿನವರನ್ನು ತಲೆ ಹಾಕಲು ಬಿಡಬೇಡಿ.ಯಾವುದೇ ಯೋಜನೆಯನ್ನು ರೂಪಿಸುವ ಮೊದಲು ಮತ್ತೊಮ್ಮೆ ಯೋಚಿಸುವುದು ಅವಶ್ಯಕ. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡುವುದು ಒಳ್ಳೆಯದು. ಬೆನ್ನಿನ ನೋವು ಮತ್ತೆ ಕಾಣಿಕೊಂಡು ಸಂಕಟಪಡಬೇಕಾದೀತು. ಇಂದಿನ ಕಾರ್ಯವು ಪೂರ್ಣವಾಗುವ ತನಕ ನಿಮಗೆ ಮಾನಸಿಕ ವಿಶ್ರಾಂತಿಯು ಇರದು. ನಿಮ್ಮ ಮಾತು ವಿವಾದವನ್ನು ಹುಟ್ಟುಹಾಕಬಹುದು.
ವೃಶ್ಚಿಕ ರಾಶಿ : ನೀವು ಕೆಲವು ಲಾಭದಾಯಕ ಅವಕಾಶಗಳನ್ನು ಕಳೆದುಕೊಳ್ಳಬಹುದು. ಪ್ರಸ್ತುತ ಸಮಯ ಯಶಸ್ವಿಯಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿದ್ದು ಹತಾಶ ಭಾವವಿರುವುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆ ಇರುವುದು. ಸಾಧು, ಸಜ್ಜನರ ಭೇಟಿಯಿಂದ ಮನಸ್ಸು ಆಹ್ಲಾದಕರವಾಗಲಿದೆ.
ಧನು ರಾಶಿ : ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಉದ್ಯೋಗಸ್ಥ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಸಾಧ್ಯವಾಗುತ್ತದೆ. ನಕಾರಾತ್ಮಕ ಚಟುವಟಿಕೆಯ ಕೆಲವು ಜನರು ನಿಮ್ಮನ್ನು ಟೀಕಿಸುತ್ತಾರೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ಆಕಸ್ಮಿಕವಾಗಿ ಉದ್ಯೋಗವು ನಿಮ್ಮ ಪಾಲಿಗೆ ಬರುವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು.
ಮಕರ ರಾಶಿ : ಇಂದು ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ನೀವು ಕೆಲವು ಆಸ್ತಿಯಿಂದ ಹಣವನ್ನು ಪಡೆಯಬಹುದು. ನಿಮಗೆ ಸ್ನೇಹಿತರಿಂದಲೂ ಬೆಂಬಲ ಸಿಗುತ್ತದೆ. ಬೌದ್ಧಿಕ ಕೆಲಸದಿಂದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಕೆಲವು ಸನ್ನಿವೇಶಗಳಿಗೆ ಪ್ರತಿಸ್ಪಂದಿಸುವ ಬಗೆ ಗೊತ್ತಾಗದೇ ಹೋಗಬಹುದು.
ಕುಂಭ ರಾಶಿ : ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದರೂ, ಯಥಾಯೋಗ್ಯವಾದ ಖರ್ಚೂ ಇರಲಿದೆ. ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಪ್ರಗತಿಯ ಸಾಧ್ಯತೆಗಳಿವೆ. ಆದರೆ ಸ್ಥಳ ಬದಲಾವಣೆಯೂ ಆಗಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳಿವೆ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಕಂಡುಬರುವುದು. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು. ಕೆಲಸವನ್ನು ಹಂಚಿಕೊಂಡು ಮಾಡಿ.
ಮೀನ ರಾಶಿ : ಉದ್ಯೋಗ ಕ್ಷೇತ್ರದಲ್ಲಿ ವಿಸ್ತರಣೆ ಕಂಡುಬರಲಿದೆ. ನೀವು ಆರ್ಥಿಕ ಏರಿಳಿತಗಳನ್ನು ಎದುರಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲವೇ. ಬೇಸರಿಸದೇ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದ ಮಾಡಿಕೊಂಡು ಬೇಸರಿಸುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)