
ಬೆಳಗಾವಿ, (ಮಾರ್ಚ್ 17): ಕರ್ನಾಟಕದಲ್ಲಿ (Karnataka) ಬೇಸಿಗೆಯ (Summer) ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ವರುಣದೇವ (Rain) ದಿಢೀರ್ ಪ್ರತ್ಯಕ್ಷನಾಗಿ ಧರೆಗೆ ತಂಪೆರೆದಿದ್ದಾನೆ. ಹೌದು… ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಹಾಗೂ ಸಾಧಾರಣ ಮಳೆಯಾಗುತ್ತಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆಗೆ ವರುಣ ತಂಪೆರೆದಂತಾಗಿದೆ. ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಶಿವಬಸವನಗರ, ನೆಹರು ನಗರ, ಎಸ್ ಪಿ ಕಚೇರಿ ಸುತ್ತಮುತ್ತ ಭಾರಿ ಆಲಿಕಲ್ಲು ಮಳೆಯಾಅಗುತ್ತಿದ್ದು, ಏಕಾಏಕಿ ಸುರಿದ ಮಳೆಗೆ ಜನರು ಕಂಗಾಲಾಗಿದ್ದಾರೆ.