‘ಮಾರ್ಕ್’ ಸಿನಿಮಾ ಮೊದಲ ದಿನ ‘45’ ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಎಂಟರ್ಟೇನ್ಮೆಂಟ್ ಟ್ರ್ಯಾಕರ್ ರಮೇಶ್ ಬಾಲ ಅವರು 15 ಕೋಟಿ ರೂಪಾಯಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ನ ಸುದೀಪ್ ರೀಟ್ವೀಟ್ ಮಾಡಿಕೊಂಡರು. ಈ ಬಗ್ಗೆ ಸುದೀಪ್ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸುದೀಪ್ ಉತ್ತರಿಸಿದ್ದಾರೆ. ‘ಅಷ್ಟು ಹಣ ನಮ್ಮ ಖಾತೆಗೆ ಬಂದಿದೆ ಎಂಬುದಷ್ಟೇ ಗೊತ್ತಿದೆ. ಹಂಚಿಕೆದಾರರು ಖುಷಿಯಾಗಿದ್ದಾರೆ, ನಿರ್ಮಾಪಕರು ಖುಷಿಯಾಗಿದ್ದಾರೆ’ ಎಂದು ಸುದೀಪ್ ವಿವರಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.