
ಬೆಂಗಳೂರು, ಮಾ.18: ಐಪಿಎಲ್ ಪಂದ್ಯಾವಳಿ ಆರಂಭವಾಗುತ್ತಿರುವಂತೆಯೇ, ಟಿಕೆಟ್ ಖರೀದಿಯ ವಿಚಾರದಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಐಪಿಎಲ್ ಪಂದ್ಯಗಳ ಟಿಕೆಟ್ಗಳನ್ನು ಖರೀದಿಸಲು ಉತ್ಸುಕರಾಗಿರುವ ಅಭಿಮಾನಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಬೆಂಗಳೂರು ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಐಪಿಎಲ್ ಟಿಕೆಟ್ಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಈ ವಂಚಕರು, “ಟಿಕೆಟ್ ಬೇಕಿದ್ದರೆ ಡೈರೆಕ್ಟ್ ಮೆಸೇಜ್ (ಡಿಎಂ) ಮಾಡಿ” ಎಂದು ಪೋಸ್ಟ್ಗಳನ್ನು ಹಾಕಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇಂತಹ ನಕಲಿ ಖಾತೆಗಳ ಸಂದೇಶಗಳಿಗೆ ಮರುಳಾಗಿ, ಅವರು ಸೂಚಿಸಿದಂತೆ ಹಣ ಪಾವತಿಸಿ ಟಿಕೆಟ್ ಖರೀದಿಸಲು ಮುಂದಾದರೆ, ನೀವು ನಿಮ್ಮ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಟಿಕೆಟ್ಗಳನ್ನು ಪೋಸ್ಟ್ ಮಾಡುವುದಾಗಿ ಅಥವಾ ಆನ್ಲೈನ್ನಲ್ಲಿ ಕಳುಹಿಸುವುದಾಗಿ ಹೇಳಿ ಹಣ ಪಡೆದು ನಂತರ ಯಾವುದೇ ಟಿಕೆಟ್ ನೀಡದೆ ವಂಚಿಸುವುದು ಇವರ ಸಾಮಾನ್ಯ ವಿಧಾನವಾಗಿದೆ. ಆದ್ದರಿಂದ, ಟಿಕೆಟ್ಗಳಿಗಾಗಿ ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು, ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಟಿಕೆಟ್ ಖರೀದಿಸುವುದು ಅತಿ ಮುಖ್ಯ. ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಪೋಸ್ಟ್ಗಳನ್ನು ನಂಬಿ ಮೋಸ ಹೋಗಬಾರದು ಎಂದು ಸೈಬರ್ ಪೊಲೀಸ್ ಇಲಾಖೆ ಸೂಚಿಸಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ