Home Protection: ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಅಂತಾ ಅನಿಸುತ್ತಿದೆಯಾ? ಗುರುವಾರ ಈ ಸರಳ ಪರಿಹಾರ ಮಾಡಿ

Home Protection: ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಅಂತಾ ಅನಿಸುತ್ತಿದೆಯಾ? ಗುರುವಾರ ಈ ಸರಳ ಪರಿಹಾರ ಮಾಡಿ

ಕೆಲವೊಮ್ಮೆ ನಾವು ಎಷ್ಟೇ ಕಷ್ಟಪಟ್ಟರೂ ಅಂದುಕೊಂಡ ಕೆಲಸಗಳು ಕೈಗೂಡುವುದಿಲ್ಲ. ಕುಟುಂಬದ ಸುಖಕ್ಕಾಗಿ ಹಗಲಿರುಳು ದುಡಿದರೂ, ನಿರೀಕ್ಷಿತ ಫಲಿತಾಂಶ ಮಾತ್ರ ಮರೀಚಿಕೆಯಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ಅರಿವಿಗೆ ಬಾರದಂತೆ ಯಾವುದೋ ಒಂದು ಅದೃಶ್ಯ ಶಕ್ತಿ ನಮ್ಮ ಏಳಿಗೆಯನ್ನು ತಡೆಯುತ್ತಿದೆ ಎಂಬ ಭಾವನೆ ಮೂಡುವುದು ಸಹಜ. ಸಮಾಜದಲ್ಲಿ ಬೆಳೆಯುತ್ತಿರುವಾಗ ನಮ್ಮನ್ನು ಸುತ್ತುವರೆದಿರುವ ಎಲ್ಲರೂ ನಮ್ಮ ಪ್ರಗತಿಯನ್ನು ಕಂಡು ಸಂತೋಷಪಡುವುದಿಲ್ಲ ಎಂಬುದು ಕಹಿ ಸತ್ಯ.

ನಕಾರಾತ್ಮಕ ದೃಷ್ಟಿ ಮತ್ತು ಅದರ ಪರಿಣಾಮ:

ನಮ್ಮ ಮನೆಗೆ ಅನೇಕರು ಬರುತ್ತಾರೆ, ಹೋಗುತ್ತಾರೆ. ಅವರಲ್ಲಿ ಕೆಲವರು ಒಳ್ಳೆಯ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ಹೊರಗಿನಿಂದ ನಗುಮುಖ ಹೊತ್ತು ಬಂದರೂ ಒಳಗಿನಿಂದ ಅಸೂಯೆ ಪಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳ ಅಸೂಯೆ ಮತ್ತು ನಕಾರಾತ್ಮಕ ಆಲೋಚನೆಗಳೇ ‘ದೃಷ್ಟಿ ದೋಷ’ವಾಗಿ ಪರಿಣಮಿಸುತ್ತವೆ. ಈ ದೃಷ್ಟಿ ದೋಷವು ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ, ಇದು ವಾಸ್ತು ದೋಷಕ್ಕೂ ಕಾರಣವಾಗಬಲ್ಲದು.

ದೃಷ್ಟಿ ಬಿದ್ದಿರುವುದರ ಲಕ್ಷಣಗಳು:

ಯಾರೊಬ್ಬರ ಕೆಟ್ಟ ದೃಷ್ಟಿ ನಿಮ್ಮ ಮನೆಯ ಮೇಲೆ ಬಿದ್ದಾಗ, ಅಕಾರಣವಾಗಿ ಮನೆಯಲ್ಲಿ ಜಗಳಗಳು ಪ್ರಾರಂಭವಾಗುತ್ತವೆ. ಸದಾ ನೆಮ್ಮದಿಯಿಂದ ಇರಬೇಕಾದ ಮನೆಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಮನೆ ಅಸ್ತವ್ಯಸ್ತವಾಗಿರುವುದು, ಕುಟುಂಬದ ಸದಸ್ಯರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದು ಅಥವಾ ಹಠಾತ್ ಆರ್ಥಿಕ ಬಿಕ್ಕಟ್ಟು ಎದುರಾಗುವುದು ಇವೆಲ್ಲವೂ ನಿಮ್ಮ ಮನೆಯ ಶಕ್ತಿಯ ಸಮತೋಲನ ತಪ್ಪಿರುವುದರ ಸಂಕೇತಗಳಾಗಿವೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪವಿತ್ರ ಗೋಮೂತ್ರ ಮತ್ತು ಅರಿಶಿನದ ರಾಮಬಾಣ ಪರಿಹಾರ:

ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ಹೊರಹಾಕಲು ಒಂದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವಿದೆ. ಪ್ರತಿ ಗುರುವಾರ ಸಂಜೆಯ ಸಮಯದಲ್ಲಿ ಸ್ವಲ್ಪ ಗೋಮೂತ್ರವನ್ನು ತೆಗೆದುಕೊಂಡು ಅದಕ್ಕೆ ಚಿಟಿಕೆ ಅರಿಶಿನವನ್ನು ಬೆರೆಸಬೇಕು. ಈ ಮಿಶ್ರಣದಿಂದ ನಿಮ್ಮ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಶುಚಿಯಾಗಿ ಒರೆಸಬೇಕು. ಗೋಮೂತ್ರವು ಪರಿಸರವನ್ನು ಪವಿತ್ರಗೊಳಿಸಿದರೆ, ಅರಿಶಿನವು ಕ್ರಿಮಿನಾಶಕದಂತೆ ಕೆಲಸ ಮಾಡಿ ನಕಾರಾತ್ಮಕ ಕಂಪನಗಳನ್ನು ತಡೆಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *