ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್​​ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ

ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್​​ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ

ಬೆಂಗಳೂರು, ಮಾರ್ಚ್​ 18: ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಾಕಿ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯುಗಾದಿ (Ugadi) ಹಬ್ಬದ‌ ರಜೆಯನ್ನು ಕಡಿತಗೊಳಿಸಲಾಗಿದೆ. ಆ ಮೂಲಕ ಹಬ್ಬದ‌ ದಿನವೂ ಕಡ್ಡಾಯ ಹಾಜರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೂಚನೆ ನೀಡಿದ್ದಾರೆ.

ಯುಗಾದಿ ಹಬ್ಬದ‌ ದಿನವೂ ಕಡ್ಡಾಯ ಹಾಜರಿಗೆ ಸೂಚನೆ

ಕರ್ನಾಟಕ ವಿಧಾನ ಸಭೆ ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾರ್ಚ್​​ 23ರಂದು ಕಂದಾಯ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳು ಬಾಕಿಯಿರುವುದರಿಂದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಇವರ ಸೂಚನೆ ಮೇರೆಗೆ ಮುಜರಾಯಿ, ಭೂ ಮಂಜೂರಾತಿ-1, ಭೂ ಮಂಜೂರಾತಿ-2, ಭೂ ಮಂಜೂರಾತಿ-3, ಸೇವೆಗಳು-3, ಭೂ ಕಂದಾಯ, ಭೂ ಮಾಪನ, ಭೂಮಿ, ಭೂಸುಧಾರಣಾ ಕೋಶ ಒಟ್ಟು 9 ಶಾಖೆಗಳಿಗೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಮಾರ್ಚ್​​ 19ರಂದು ಕಡ್ಡಾಯವಾಗಿ ಕಚೇರಿಗೆ ಹಾಜರಾಗಿ ವಿಧಾನ ಸಭೆ ಬಾಕಿಯಿರುವ ಪ್ರಶ್ನೆಗಳಿಗೆ ಉತ್ತರಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​​ ಜೊತೆಗಿನ ಮದುವೆ ಹಿಂಸಾತ್ಮಕವಾಗಿದ್ದರಿಂದ ವಿಚ್ಚೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್​

ಮೊನ್ನೆಯಷ್ಟೇ ಸರ್ಕಾರದ ಕಡೆಯಿಂದ ಉತ್ತರ ಬಾರದೇ ಇರುವುದಕ್ಕೆ ಸ್ಪೀಕರ್ ಅಸಮಾಧಾನಗೊಂಡಿದ್ದರು. ಸ್ಪೀಕರ್ ಕಿಡಿ ಹಿನ್ನೆಲೆ ಸಿಎಂ ಸಿದ್ದರಾಮಯ್ಯರಿಂದ 9 ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್​​ ಕೊಟ್ಟ ಕಾರಣಕ್ಕೆ ಹಿರಿಯ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗಳಿಗೆ ಹಬ್ಬದ ಖುಷಿ ಇಲ್ಲದಂತೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗಾಗಿದೆ.

ಸರ್ಕಾರದ ನಡೆಗೆ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯ

ಇನ್ನು ಈ ಬಗ್ಗೆ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಮತ್ತೊಮ್ಮೆ ತನ್ನ ವಿವೇಚನಾ ಕೊರತೆಯನ್ನು ಪ್ರದರ್ಶಿಸಿದ ಸರ್ಕಾರ. ನಾಳೆ, ಗುರುವಾರ 19.3.26. ನಮ್ಮ ನಾಡಿನಲ್ಲಿ ಚಾಂದ್ರಮಾನ ಯುಗಾದಿ ಹಬ್ಬ. ಎಲ್ಲಾ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ನಮ್ಮ ಹೊಸ ಸಂವತ್ಸರದ ವರುಷದ ಆರಂಭ.

ಈ ಹಬ್ಬದ ದಿನವೇ ಸಭೆಗೆ ಹಾಜರಿರಬೇಕೆಂದು ಕಂದಾಯ ಇಲಾಖೆಯಿಂದ ಸೂಚನೆಯ ಪತ್ರ ಕೊಟ್ಟಿರುವುದು ಯಾವ ಮನಸ್ಥಿತಿ ತೋರುತ್ತದೆ? ನಾಡಿದ್ದು, ಶುಕ್ರವಾರ ಅಥವಾ ಶನಿವಾರ ಈ ಸಭೆ ಕರಿಯಬಹುದಿತ್ತಲ್ಲವೇ? ಓ! ಮರೆತಿದ್ದೆ. ಶುಕ್ರವಾರ, ಶನಿವಾರ ರಂಜಾನ್ ಅಲ್ಲವೇ? ಅಂದು ಕರೆದರೆ ಈ ಸರ್ಕಾರ ಜಾತ್ಯತೀತವಾಗುವುದಿಲ್ಲ.

ಇದನ್ನೂ ಓದಿ: ಲೋಪ ಆರೋಪ ಬೆನ್ನಲ್ಲೇ ಜಿಬಿಎ ಮತದಾರರ ಪಟ್ಟಿ ಆಕ್ಷೇಪಣೆಗೆ ನೀಡಿದ್ದ ಕಾಲಾವಕಾಶ ವಿಸ್ತರಣೆ

ಯುಗಾದಿ ಹಬ್ಬದ ದಿನವೇ ರಜೆ ದಿನವಾಗಿದ್ದರೂ ಸರ್ಕಾರಿ ಅಧಿಕಾರಿಗಳನ್ನು ಕರೆಯುವುದು ನಿಜವಾದ ಜಾತ್ಯತೀತತೆ! ವಾಹ್! ಕರ್ನಾಟಕ ಸರ್ಕಾರದ ಈ ನಡೆಗೆ ಭೇಷ್ ಅನ್ನಬೇಕೋ ಅಥವಾ ಛೀ ಅನ್ನಬೇಕೋ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *