ಅಬ್ಬಬ್ಬಾ, ಪೇಯ್ಡ್​ ಪ್ರೀಮೀಯರ್​ನಿಂದ ‘ಧುರಂಧರ್ 2’ ಸಿನಿಮಾ ಗಳಿಸಿದ್ದು ಇಷ್ಟೊಂದಾ?

ಅಬ್ಬಬ್ಬಾ, ಪೇಯ್ಡ್​ ಪ್ರೀಮೀಯರ್​ನಿಂದ ‘ಧುರಂಧರ್ 2’ ಸಿನಿಮಾ ಗಳಿಸಿದ್ದು ಇಷ್ಟೊಂದಾ?

‘ಧುರಂಧರ್ 2’ ಸಿನಿಮಾ (Dhurandha 2) ಮಾರ್ಚ್ 19ರಂದು ರಿಲೀಸ್ ಆಗಲಿದೆ. ಅದಕ್ಕೂ ಒಂದು ದಿನ ಮೊದಲ ಎಲ್ಲ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್​​ಗಳನ್ನು ಆಯೋಜನೆ ಮಾಡಲಾಗಿತ್ತು. ಹೀಗಾಗಿ, ಒಂದು ದಿನ ಮೊದಲೇ ಅನೇಕರು ಸಿನಿಮಾನ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಚಿತ್ರ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರ ಪೇಯ್ಡ್ ಪ್ರೀಮಿಯರ್​ನಿಂದಲೇ ಸಿನಿಮಾಗೆ ಭರ್ಜರಿ ಗಳಿಕೆ ಮಾಡಿದೆ. ಇದು ನಿರ್ಮಾಪಕರ ಖುಷಿ ಹೆಚ್ಚಿಸಿದೆ.

‘ಧುರಂಧರ್ 2’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಲು ಕಾರಣ ಮೊದಲ ಭಾಗ. ‘ಧುರಂಧರ್’ ಸಿನಿಮಾ ಹಿಟ್ ಆದ ಬಳಿಕ ‘ಧುರಂಧರ್ 2’ ಸಿನಿಮಾ ರಿಲೀಸ್ ಆಯಿತು. ವಿಶೇಷ ಎಂದರೆ, ‘ಧುರಂಧರ್’ ಸಿನಿಮಾ ಇನ್ನೂ ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುತ್ತಿದೆ.ಹಾಗಿರುವಾಗಲೇ ‘ಧುರಂಧರ್ 2’ ತೆರೆಗೆ ಅಪ್ಪಳಿಸಿದೆ. ಈ ಚಿತ್ರವನ್ನು ನೋಡಿದ ವೀಕ್ಷರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

‘ಧುರಂಧರ್ 2’ ಸಿನಿಮಾ ಪೇಯ್ಡ್​ ಪ್ರೀಮಿಯರ್​​ಗಿಂದಲೇ 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೊದಲು ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಪ್ರೀಮಿಯರ್ ಶೋಗಳಿಂದ 25 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಮಾಡಿತ್ತು. ಆ ದಾಖಲೆಗಳನ್ನು ‘ಧುರಂಧರ್ 2’ ಮುರಿದು ಹಾಕಿದೆ. ಪ್ರೀಮಿಯರ್ ಶೋಗಳಿಂದ ‘ಓಜಿ’ ಚಿತ್ರ ಮಾಡಿದ ಗಳಿಕೆಗಿಂತ ದುಪ್ಪಟ್ಟು ಗಳಿಕೆಯನ್ನು ‘ಧುರಂಧರ್ 2’ ಸಿನಿಮಾ ಮಾಡಿದೆ.

ಇಂದು ಯುಗಾದಿ ಪ್ರಯುಕ್ತ ರಜಾ ಇದೆ. ಇದು ‘ಧುರಂಧರ್ 2’ ಸಿನಿಮಾಗೆ ಸಹಕಾರಿ ಆಗಲಿದೆ. ಈ ಚಿತ್ರದ ಬುಕಿಂಗ್ ಜೋರಾಗಿಯೇ ನಡೆಯುತ್ತಿದೆ. ಹೀಗಾಗಿ, ಮೊದಲ ದಿನ ಸಿನಿಮಾದ ಕಲೆಕ್ಷನ್ 200-300 ಕೋಟಿ ರೂಪಾಯಿ ಆಗಬಹುದು ಎಂದು ಊಹಿಸಲಾಗಿದೆ. ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಈ ಕಾರಣದಿಂದಲೂ ಚಿತ್ರ ಹೆಚ್ಚು ಗಳಿಕೆ ಮಾಡಬಹುದು.

ಇದನ್ನೂ ಓದಿ: ಆ ವ್ಯಕ್ತಿ ಇಲ್ಲದೆ ಸಿನಿಮಾ ಅಪೂರ್ಣ; ‘ಧುರಂಧರ್ 2’ ಬಗ್ಗೆ ವೀಕ್ಷಕರ ಅಸಮಾಧಾನ ಏನು?

ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಮ್​​ಪಾಲ್, ಸಂಜಯ್ ದತ್ ಮೊದಲಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆದಿತ್ಯ ಧಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *