
ನವದೆಹಲಿ, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಕಳೆದ ಕೆಲ ವಾರಗಳಿಂದ ಕುಸಿತ ಕಾಣುತ್ತಿವೆ. ಭೌತಿಕ ಚಿನ್ನ ಮತ್ತು ಬೆಳ್ಳಿ ಮಾತ್ರವಲ್ಲ, ಎಂಸಿಎಕ್ಸ್ನಲ್ಲಿ ಗೋಲ್ಡ್ ಫ್ಯೂಚರ್ಸ್ ದರ ಒಂದು ತಿಂಗಳ ಕನಿಷ್ಠಕ್ಕೆ ಜಾರಿದೆ. ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ಗಳೂ ಕೂಡ ಕುಸಿತ ಕಾಣುತ್ತಿವೆ. ಗುರುವಾರ ಚಿನ್ನದ ಬೆಲೆ ಸತತ ಏಳನೇ ಬಾರಿ ಇಳಿಕೆಯಾಗಿದೆ. ಆರು ವಾರಗಳ ಕನಿಷ್ಠ ಮಟ್ಟ ತಲುಪಿದೆ. ಚಿನ್ನ, ಬೆಳ್ಳಿ ಬೆಲೆಗಳ ಕುಸಿತಕ್ಕೆ ಎರಡು ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ:
1. ಅಮೆರಿಕದ ಆರ್ಥಿಕತೆ ಬಗ್ಗೆ ಫೆಡರಲ್ ರಿಸರ್ವ್ ಮಾಡಿದ ಅಂದಾಜು
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿದ ಫೆಡರಲ್ ರಿಸರ್ವ್ ಈ ಬಾರಿಯೂ ತನ್ನ ಬಡ್ಡಿದರವನ್ನು ಕಡಿತಗೊಳಿಸಿಲ್ಲ. ಮುಂಬರುವ ದಿನಗಳಲ್ಲೂ ಹೆಚ್ಚಿನ ಕಡಿತ ಇರದು ಎನ್ನುವ ಸುಳಿವು ಕೊಟ್ಟಿದೆ.
ಇದನ್ನೂ ಓದಿ: ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?
ಆದರೆ, ಅಮೆರಿಕದ ಹಣದುಬ್ಬರ ಏರಬಹುದು ಎಂದು ಹೇಳಿರುವುದು ಮಾರುಕಟ್ಟೆಗೆ ನೆಗಟಿವ್ ಎನಿಸಿದೆ. ಹಣದುಬ್ಬರ ಹೆಚ್ಚಿದರೆ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಕ್ಷೀಣಿಸುತ್ತದೆ. ಹೀಗಾಗಿ, ಚಿನ್ನದ ಮೇಲಿನ ಹೂಡಿಕೆಗಳನ್ನು ಕೈಬಿಡುತ್ತಿರುವ ಟ್ರೆಂಡ್ ಇದೆ.
2. ಅಮೆರಿಕದ ಡಾಲರ್ ಇಂಡೆಕ್ಸ್ ಬಲ
ಅಮೆರಿಕದ ಡಾಲರ್ ಇಂಡೆಕ್ಸ್ ಬಲಗೊಳ್ಳುತ್ತಿದೆ. ಇದು ಚಿನ್ನವನ್ನು ದುರ್ಬಲಗೊಳಿಸುತ್ತಿರಬಹುದು. ತೈಲ ಬೆಲೆ ಹೆಚ್ಚಿರುವುದರಿಂದ ಡಾಲರ್ ಬಲ ಮತ್ತಷ್ಟು ಹೆಚ್ಚುತ್ತದೆ. ಹೀಗಾಗಿ, ಚಿನ್ನದ ಬೆಲೆ ಇಳಿಯುತ್ತಿರಬಹುದು.
ಚಿನ್ನದ ಬೆಲೆ ಕುಸಿತ ಯಾವಾಗ ನಿಲ್ಲುತ್ತೆ?
ಚಿನ್ನದ ಕುಸಿತಕ್ಕೆ ಹೊಸ ಕಾರಣಗಳ ಸಂಭಾವ್ಯತೆ ಇಲ್ಲದೇ ಇರುವುದು, ಜಾಗತಿಕ ಅನಿಶ್ಚಿತ ಪರಿಸ್ಥಿತಿ ಮುಂದುವರಿಯುತ್ತಿರುವುದು ಚಿನ್ನಕ್ಕೆ ಮತ್ತೆ ಬೇಡಿಕೆ ಕುದುರುವ ಅವಕಾಶ ಇದೆ. ಈ ವರ್ಷದೊಳಗೆ ಒಮ್ಮೆ ಬಡ್ಡಿದರ ಕಡಿತಗೊಳಿಸುವುದಾಗಿ ಫೆಡರಲ್ ರಿಸರ್ವ್ ಸುಳಿವು ಕೊಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ ಬೆಲೆ ಏರುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ