ಗ್ಯಾಸ್ ಸಿಗದೆ ಸಂಕಷ್ಟದಲ್ಲಿ ಸ್ಟೀಲ್ ವೆಲ್ಡಿಂಗ್, ಕಟ್ಟಿಂಗ್ ಉದ್ಯಮ: ಕೆಆರ್ ಮಾರುಕಟ್ಟೆಯಲ್ಲಿ ಮುಚ್ಚಿಕೊಳ್ತಿವೆ ಒಂದೊಂದೇ ಅಂಗಡಿಗಳು

ಗ್ಯಾಸ್ ಸಿಗದೆ ಸಂಕಷ್ಟದಲ್ಲಿ ಸ್ಟೀಲ್ ವೆಲ್ಡಿಂಗ್, ಕಟ್ಟಿಂಗ್ ಉದ್ಯಮ: ಕೆಆರ್ ಮಾರುಕಟ್ಟೆಯಲ್ಲಿ ಮುಚ್ಚಿಕೊಳ್ತಿವೆ ಒಂದೊಂದೇ ಅಂಗಡಿಗಳು

ಬೆಂಗಳೂರು, ಮಾರ್ಚ್ 20: ಬೆಂಗಳೂರಿನ (Bangalore) ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರ್ (LPG Cylinder) ಅಭಾವ ಕೈ ಮೀರುವ ಹಂತಕ್ಕೆ ಬರುತ್ತಿದೆ. ಉದ್ಯಮಗಳು ಹಳ್ಳಹಿಡಿಯುತ್ತಿವೆ. ಹೋಟೆಲ್, ಪಿಜಿ ಸೇರಿದಂತೆ ಅನೇಕ ಉದ್ಯಮಗಳಿಗೆ ಭಾರೀ ಹೊಡೆತ ಬಿದ್ದಿದೆ. ಇದೀಗ ಸ್ಟೀಲ್ ಇಂಡಸ್ಟ್ರೀಸ್​ಗೂ ಏಟು ಬಿದ್ದಿದ್ದು, ಕೆಆರ್ ಮಾರುಕಟ್ಟೆಯ ಸ್ಟೀಲ್ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಅಂಗಡಿಗಳು ಒಂದೊಂದೇ ಆಗಿ ಮುಚ್ಚಿಕೊಳ್ಳುತ್ತಿವೆ.

ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೆ ನಗರದ ಉದ್ಯಮಗಳು ಅಯೋಮಯಗೊಂಡಿವೆ. ಹೋಟೆಲ್ ಉದ್ಯಮಗಳಿಗೆ, ಗ್ಯಾಸ್ ಇಲ್ಲದಿದ್ದರೂ ಕನಿಷ್ಠ ಎಲೆಕ್ಟ್ರಿಕ್ ಅಥವಾ ಸೌದೆ‌ ಒಲೆಯಲ್ಲಾದರೂ ಆಹಾರ ತಯಾರಿಸಿ ಉದ್ಯಮ ನಡೆಸುವ ಅವಕಾಶ ಇದೆ. ಕೆಲವು ಹೋಟೆಲ್ ಮಾಲೀಕರು ಸೌದೆ ಒಲೆ, ಎಲೆಕ್ಟ್ರಿಕ್ ಒಲೆ ಮೇಲೆ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಗ್ಯಾಸ್ ಸಿಗದೆ ಬೇರೆ ಪರ್ಯಾಯ ಮಾರ್ಗವೇ ಇಲ್ಲದ ಸ್ಟೀಲ್ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಉದ್ಯಮ ಇದೀಗ ಸಂಪೂರ್ಣ ನಷ್ಟದ ಸುಳಿಗೆ ಸಿಲುಕಿದೆ.

400ಕ್ಕೂ ಅಧಿಕ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಅಂಗಡಿಗಳಿಗೆ ಕುತ್ತು

ಕೆಆರ್ ಮಾರ್ಕೆಟ್​ನ ಬಿ ಉಸ್ಮಾನ್ ಬೀದಿ ಹಾಗೂ ಅದರ ಸುತ್ತಮುತ್ತ ಬರೋಬ್ಬರಿ 400ಕ್ಕೂ ಅಧಿಕ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಅಂಗಡಿಗಳಿವೆ. ಲಘು ಹಾಗೂ ಭಾರೀ ವಾಹನದ ಬಿಡಿ ಭಾಗಗಳ ಜೋಡಣೆ, ಕಬ್ಬಿಣದ ಪ್ಲೇಟ್​ಗಳ‌ ಕಟ್ಟಿಂಗ್ ಸೇರಿದಂತೆ ಕಮರ್ಷಿಯಲ್ ಗ್ಯಾಸ್ ಬಳಸಿಕೊಂಡು ನಡೆಯುವ ಉದ್ಯಮವಿದು. ಇದೇ ಕಾರಣಕ್ಕೆ ಪ್ರತಿ ದಿನ ಲಕ್ಷಾಂತರ ರೂಪಾಯಿ ವಹಿವಾಟು ಇಲ್ಲಿ ನಡೆಯುತ್ತದೆ. ಆದರೆ ಕಳೆದ ಒಂದು ವಾರದಿಂದ ಕಮರ್ಷಿಯಲ್ ಗ್ಯಾಸ್ ಸಿಗದೆ ವಹಿವಾಟು ಸಂಪೂರ್ಣ ಕುಸಿದು ಹೋಗಿದೆ. ಹೋಟೆಲ್​ಗಳಿಗೆ ಗ್ಯಾಸ್ ಇಲ್ಲದಿದ್ದರೆ ಸೌದೆ ಒಲೆಯಾದರೂ ಇದೆ. ನಮಗೆ ಗ್ಯಾಸ್ ಇಲ್ಲದಿದ್ದರೆ ಜೀವನವೇ ನಡೆಯಲ್ಲ ಎನ್ನುತ್ತಿದ್​ದಾರೆ ಇಲ್ಲಿನ ಅಂಗಡಿಗಳ ಮಾಲೀಕರು.

ಇದನ್ನೂ ಓದಿ: ಎಲ್​ಪಿಜಿ ಗ್ಯಾಸ್ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ! ಪೆಟ್ರೋಲ್ ಡೀಸೆಲ್​ಗೂ ಎದುರಾಗಲಿದೆ ಅಭಾವ? ಇಲ್ಲಿದೆ ಬಲವಾದ ಕಾರಣ

ಒಟ್ಟಿನಲ್ಲಿ, ಕಮರ್ಷಿಯಲ್ ಗ್ಯಾಸ್ ಅಭಾವ ಪ್ರತಿ ದಿನ ನಗರದಲ್ಲಿ ನೂರೆಂಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಗರದ ಆರ್ಥಿಕ ಏಳಿಗೆಗೆ ಭಾರೀ ಹೊಡೆತ ತಟ್ಟುವುದಂತೂ ಗ್ಯಾರಂಟಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *